ಬೆಂಗಳೂರು: ಎಸ್ಸಿ, ಎಸ್ಟಿ ಆಯೋಗ ಇರೋದು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಾಂಗದ ರಕ್ಷಣೆಗಾಗಿ. ಆದರೆ ಈ ಆಯೋಗದಲ್ಲೂ ಇತ್ತೀಚಿಗೆ ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ ಅಂದ್ರೆ ಜನ ಸಾಮಾನ್ಯ ಪಾಡು ಏನಾಗಬೇಕು ಅನ್ನೋ ಪ್ರಶ್ನೆ ಈಗ ಉದ್ಭವಿಸಿದೆ.
ಬ್ರೋಕರ್ ಕೇಶವಮೂರ್ತಿ ಅನ್ಯ ಜಾತಿಯ ಜಮೀನುಗಳನ್ನು ಅಗ್ರಿಮೆಂಟ್ ಮಾಡಿಕೊಳ್ತಾರೆ. ಅದನ್ನು ವಾಪಸ್ ಕೇಳಿದ್ರೆ ಎಸ್ಸಿ ಎಷ್ಟಿ ಆಯೋಗದಲ್ಲಿ ದೂರು ದಾಖಲಿಸ್ತಾರೆ. ಈ ಮಧ್ಯವರ್ತಿಯ ಸೂಚನೆಯಂತೆ ಎಸ್.ಸಿ. ಎಸ್ಟಿ ಆಯೋಗ ನಡೆಯುತ್ತಿದೆ. ಕೇಶವ ಮೂರ್ತಿ ನೀಡಿದ್ದೇ ದೂರು. ಕೇಶವಮೂರ್ತಿ ಯದ್ದೇ ವೇದ ವಾಕ್ಯ ಎನ್ನುವಂತಾಗಿದೆ. ಇದೆಲ್ಲಾ ಅಕ್ರಮ ಗೊತ್ತಿದ್ದರೂ ಕೂಡಾ ಆಯೋಗದ ಅಧ್ಯಕ್ಷರು ಯಾಕೆ ಸುಮ್ಮನಿದ್ದಾರೆ. ಇಂತಹ ಘಟನೆಗಳಿಗೆ ಆಯೋಗದ ಅಧ್ಯಕ್ಷ ನೆಹರೂ ಓಲೇಕಾರ್ ರವರೇ ರಕ್ಷಣೆ ನೀಡ್ತಿದ್ದಾರಾ ಅಂತ ಶ್ರೀರಾಮ ಪುರದ ನಿವಾಸಿ ಸತೀಶ್ ಎಂಬುವವರು ಆಯೋಗದ ಮೇಲೆ ಗಂಭೀರ ಆರೋಪ ಮಾಡ್ತಿದ್ದಾರೆ.
ಈ ವಂಚನೆ ಕೇವಲ ಬ್ರೋಕರ್ ಕೇಶವಮೂರ್ತಿಯಿಂದ ಮಾತ್ರ ಅಲ್ಲ. ಆಯೋಗದ ಅಧ್ಯಕ್ಷ ನೆಹರೂ ಓಲೇಕಾರ್ ಕೂಡಾ ದೌರ್ಜನ್ಯ ಮಾಡ್ತಿದ್ದಾರೆ ಅಂತ ನೊಂದವರು ಮತ್ತಷ್ಟು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
ಎಲ್ಲಾ ವಂಚನೆಯ ಬಗ್ಗೆ ಆಯೋಗವನ್ನ ಕೇಳಿದ್ರೆ. ಅಧ್ಯಕ್ಷರೇ ಈ ಆಯೋಗದ ಮುಖ್ಯಸ್ಥರಾಗಿದ್ದಾರೆ. ಇದರ ಬಗ್ಗೆ ಎಲ್ಲಾ ಮಾಹಿತಿ ಅಧ್ಯಕ್ಷರಿಗೆ ಗೊತ್ತಿದೆ. ಕೇಶವಮೂರ್ತಿ 6 ರಿಂದ 7 ಕೇಸ್‌ಗಳು ದಾಖಲಿಸಿದ್ದಾರೆ. ನೀವೇನೇ ಇದ್ರೂ ಅಧ್ಯಕ್ಷರ ಬಳಿಯೇ ಕೇಳಿಕೊಳ್ಳಿ ಅಂತ ಆಯೋಗದ ಕಾರ್ಯದರ್ಶಿ ನಯವಾಗಿ ಜಾರಿಕೊಳ್ತಿದ್ದಾರೆ.
ಸದ್ಯ ಯಾವುದೇ ಇಲಾಖೆಯಾದ್ರೂ ಆರೋಪ ಪ್ರತ್ಯಾರೋಪಗಳು ಇದ್ದೇ ಇರುತ್ತವೆ. ಆದ್ರೆ, ನಿಜವಾದ ತಪ್ಪಿತಸ್ಥರು ಯಾರು ಈ ಗಂಭೀರ ಆರೋಪದ ಹಿನ್ನೆಲೆ ಏನು ಅನ್ನುವುದರ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡಬೇಕಾದ ಅನಿವಾರ್ಯತೆ ಇದೆ.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು