Sunday, October 6, 2024

ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಶ್ರೀರಾಮುಲುಗೆ ಬಹಿರಂಗ ಆಹ್ವಾನ

ಬಳ್ಳಾರಿ: ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಸಾರಿಗೆ ಸಚಿವ ಶ್ರೀರಾಮುಲುಗೆ ಕಾಂಗ್ರೆಸ್​ ಶಾಸಕ ನಾಗೇಂದ್ರ ಅವರು  ಬಹಿರಂಗವಾಗಿ ಆಹ್ವಾನ ನೀಡಿದ್ದಾರೆ.

ಕಾಂಗ್ರೆಸ್ ತತ್ವ ಸಿದ್ಧಾಂತಗ‌ಳನ್ನು ಮೆಚ್ಚಿ ಬಂದ್ರೆ ಶ್ರೀರಾಮುಲು ಅವರನ್ನ ಕರೆದುಕೊಳ್ಳುತ್ತೇವೆ. ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕೊಡಿಸಲಾಗದ ಶ್ರೀರಾಮುಲು ಬಿಜೆಪಿ ಪಕ್ಷ ಬಿಟ್ಟು ಹೊರ ಬರಲಿ. ಸಿದ್ದರಾಮಯ್ಯ ವಿರುದ್ಧವೂ ಶ್ರೀರಾಮುಲು ಸ್ಪರ್ಧೆ ಮಾಡಿದ್ದು ನಿಜ. ಆದ್ರೇ, ಇದೀಗ ಮೀಸಲಾತಿ ವಿಚಾರದಲ್ಲಿ ಅತಂತ್ರವಾಗಿರೋ ಶ್ರೀರಾಮುಲು ಕಾಂಗ್ರೆಸ್ ಗೆ ಬರಲಿ ಎಂದು ನಾಗೇಂದ್ರ ಹೇಳಿದ್ದಾರೆ.

ಶ್ರೀರಾಮುಲು ಅವರು ಸಿದ್ದರಾಮಯ್ಯರ ಕಾಂಗ್ರೆಸ್ ತತ್ವ ಸಿದ್ದಾಂತಗಳನ್ನು ಹೇಳುತ್ತಾರೆ ಅದನ್ನು ಒಪ್ಪಿ ಬರಬೇಕು. ಮೀಸಲಾತಿ ವಿಚಾರದಲ್ಲಿ ಎಸ್​.ಟಿ ಸಮುದಾಯಕ್ಕೆ ಬಿಜೆಪಿ ಸರ್ಕಾರ ಮೋಸ ಮಾಡಿದೆ. ಬಿಜೆಪಿ ಎಸ್ಟಿ ಸಮುದಾಯ ಸಮಾವೇಶಕ್ಕೆ ಇನ್ನೊಬ್ಬರು. ಈಗಾಗಲೇ ಸರ್ಕಾರಿ ವಾಲ್ಮೀಕಿ ಜಯಂತಿಗೆ ಸ್ವಾಮೀಜಿ ಸೇರಿದಂತೆ ಎಲ್ಲರೂ ಬಹಿಷ್ಕಾರ ಹಾಕಿದ್ದಾರೆ.

ವಾಲ್ಮೀಕಿ ಮೀಸಲಾತಿ ಕುರಿತಂತೆ ಮಂತ್ರಿ, ಶಾಸಕ ಸೇರಿದಂತೆ ಯಾರೇ ಮಾತನಾಡಿದ್ರೇ ಕೇಸ್ ಹಾಕ್ತಾರೆ. ವಾಲ್ಮೀಕಿ ಸಮಾಜದ ಎಲ್ಲ ಶಾಸಕರು ಕಾಂಗ್ರೆಸ್ ಗೆ ಬೆಂಬಲ ನೀಡಬೇಕು. ನಾವು ಮೀಸಲಾತಿ ಕೊಡುತ್ತೇವೆ. ಶ್ರೀರಾಮುಲು ಸಿಹಿ ಸುದ್ದಿ ಕೊಡ್ತೇನೆ ಕೊಡ್ತೇನೆ ಎಂದು ಎಲ್ಲರಿಗೂ ಸುಳ್ಳು ಹೇಳ್ತಾರೆ. ಅವರ ಸಿಹಿ ಸುದ್ದಿಯಿಂದ ಎಲ್ಲರಿಗೂ ಶುಗರ್ ಬಂದಿದೆ ಎಂದರು.

ಇನ್ನು ಮೀಸಲಾತಿ ಶ್ರೀರಾಮುಲು ಅವರ ಕೈಯಲ್ಲಿ ಎನಿಲ್ಲ. ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಬಲ ನೀಡುತ್ತಿಲ್ಲ. ಮೀಸಲಾತಿ ಕುರಿತು ಮಂತ್ರಿ ಮಂಡಲ ಸಹಕಾರ ಮಾಡುತ್ತಿಲ್ಲ. ಸರ್ಕಾರದಲ್ಲಿ ಶ್ರೀರಾಮುಲು ಪ್ರಭಾವಿಯಾಗಿದ್ರೇ ಇಷ್ಟೊತ್ತಿಗಾಗಲೇ ಮೀಸಲಾತಿ ಕೊಡಬೇಕಿತ್ತು ಎಂದು ಶಾಸಕ ನಾಗೇಂದ್ರ ಅಭಿಪ್ರಾಯಪಟ್ಟರು.

RELATED ARTICLES

Related Articles

TRENDING ARTICLES