Friday, September 13, 2024

ಕೇರಳಿಗರೂ ಇಲ್ಲದ ದೇಶವೆ ಇಲ್ಲ; ಓಣೋತ್ಸವದಲ್ಲಿ ಭಾಗಿಯಾಗಿ ಸಿಎಂ ಮಾತು

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಓಣೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ‌ ಮಾತನಾಡಿ, ಕೇರಳ ಸಾಹಸ ನಾಡು. ಕೇರಳಿಗರೂ ಇಲ್ಲದ ದೇಶವೆ ಇಲ್ಲ ಎಂದರು.

ಕೇರಳಿಗರೂ ಎಲ್ಲಿಯೇ ಹೋದ್ರು ಅಲ್ಲಿನ ಸಂಸ್ಕೃತಿಯ ಜೊತೆ ಬೆರೆತು ಹೋಗ್ತಾರೆ. ಆದ್ರೂ ಕೂಡ ತಮ್ಮ ಸಂಸ್ಕೃತಿಯನ್ನು ಕಳೆದುಕೊಳ್ಳುವುದಿಲ್ಲ. ಕೇರಳಿಗರು ಸಾಕಷ್ಟು ಬುದ್ದಿವಂತರು ಮತ್ತು ಪರಿಶ್ರಮಜೀವಿಗಳು. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೇರಳದ ಜನತೆ ಹೆಚ್ಚಾಗಿದ್ದಾರೆ.

ಆರೋಗ್ಯ ಕ್ಷೇತ್ರದಲ್ಲಿ ಕೇರಳದ ಜನತೆಯ ಕೊಡುಗೆಯನ್ನು ಮರೆಯೋದಕ್ಕೆ ಆಗಲ್ಲ. ನೀವು ಎಲ್ಲೇ ಹೋದ್ರು ಕೂಡ ಅಭಿವೃದ್ಧಿಯನ್ನು ಕೇರಳ ಜನರು ತೆಗೆದುಕೊಂಡು ಹೋಗುತ್ತಾರೆ. ಕೇರಳ ಮತ್ತು ಕರ್ನಾಟಕ ಸೋದರತ್ವ ಸಂಬಂಧ ಹೊಂದಿದೆ. ಕೇರಳದ ಜೊತೆಗೆ ನಮಗೆ ಅತ್ಯುತ್ತಮ ಸಂಬಂಧವಿದೆ ಎಂದು ಸಿಎಂ ತಿಳಿಸಿದರು.

ಕನ್ನಡಿಗರು ಎಲ್ಲರನ್ನೂ ನಮ್ಮವರು ಎಂದು ಒಪ್ಪಿಕೊಳ್ಳುತ್ತಾರೆ. ಬೇರೆ ಬೇರೆ ಸಮುದಾಯಗಳಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಾರೆ. ಅದಕ್ಕೆ ಇಂದು ಬೆಂಗಳೂರಿನಲ್ಲಿ ಅನೇಕ ಮಲೆಯಾಳಿಗಳು ಇದ್ದಾರೆ. ಕೇರಳಕ್ಕಿಂತ ಬೆಂಗಳೂರು ಅನೇಕ ಕೇರಳಿಗರಿಗೆ ಇಷ್ಟವಾದ ಸ್ಥಳವಾಗಿದೆ.

ನಾವು ಹಸಿರು, ಸಂಸ್ಕೃತಿ, ಅರಣ್ಯ ಸಂಪತ್ತು ಎಲ್ಲವನ್ನೂ ಉಳಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡಬೇಕಿದೆ. ಭಾರತದ ಅಭಿವೃದ್ಧಿಗೆ ಕೇರಳ ಅನೇಕ ಕೊಡುಗೆ ನೀಡಿದೆ. ಶ್ರೀಮಂತ ಸಂಸ್ಕೃತಿಯನ್ನು ಕೇರಳ ಹೊಂದಿದೆ ಎಂದು ಈ ವರ್ಷದ ಓಣೋತ್ಸವಮ್ ಉದ್ಘಾಟಿಸಿ ಸಿಎಂ ಬಸವರಾಜ ಬೊಮ್ಮಾಯಿ‌ ಮಾತನಾಡಿದರು.

RELATED ARTICLES

Related Articles

TRENDING ARTICLES