Saturday, April 20, 2024

ಮಹಾಲಯ ಅಮಾವಾಸ್ಯೆಯ ಮಹತ್ವವೇನು? ಇಲ್ಲಿದೆ ಕಂಪ್ಲೀಟ್​ ವಿವರ

ಹಿಂದೂ ಸಂಪ್ರದಾಯದಲ್ಲಿ ಮಹಾಲಯ ಅಮಾವಾಸ್ಯೆ, ಪಿತೃಮೋಕ್ಷ ಅಮಾವಾಸ್ಯೆ ಅಥವಾ ಪಿತೃ ಅಮಾವಾಸ್ಯೆ ಎಂದೂ ಕರೆಯಲ್ಪಡುವ ಈ ವಿಶೇಷ ದಿನವನ್ನು, ಪಿತೃಗಳು ಅಥವಾ ಪೂರ್ವಜರಿಗೆ ಸಮರ್ಪಿತವಾದ ದಿನ. ಇನ್ನು ದಕ್ಷಿಣ ಭಾರತದಲ್ಲಿ ಈ ದಿವಸವನ್ನು ಭಾದ್ರಪದ ಮಾಸದ ಅಮಾವಾಸ್ಯೆಯಂದು ಎಂದು ಕರೆಯುತ್ತಾರೆ. ಹಾಗೆಯೇ ಈ ದಿನ ಪೂರ್ವಜರಿಗೆ ಪೂಜೆ ಮಾಡಿದ್ರೆ ಅವರಿಗೆ ಮೋಕ್ಷ ಸಿಗುತ್ತದೆ ಜೊತೆಗೆ ನಮಗೆ ಅವರ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಪ್ರತೀತಿ ಇದೆ.

ಮಹಾಲಯ ಅಮವಾಸ್ಯೆಯ ಮಹತ್ವವೇನು ?

ಸನಾತನ ಧರ್ಮದಲ್ಲಿ ಅಮಾವಾಸ್ಯೆಯ ತಿಥಿಗೆ ವಿಶೇಷ ಮಹತ್ವವಿದೆ. ಶಾಸ್ತ್ರದಲ್ಲಿ ಅಮಾವಾಸ್ಯೆ ತಿಥಿಯಂದು ಪೂರ್ವಜರಿಗೆ ನೈವೇದ್ಯ ಅರ್ಪಿಸುವುದು ವಿಶೇಷ. ಇನ್ನು ಪೂರ್ವಜರಿಗೆ ಅನ್ನಸಂತರ್ಪಣವನ್ನು ಅರ್ಪಿಸಿ, ವಿವಿಧ ಬಗೆಯ ಖಾದ್ಯಗಳನ್ನು ಮಾಡಿ ಸಂತೃಪ್ತಿಪಡಿಸುತ್ತಾರೆ. ಅಲ್ಲದೇ ಮಹಾಲಯ ಅಮಾವಾಸ್ಯೆಯಂದು ಅನ್ನ ತಯಾರಿಸಿ ಕಾಗೆ, ಹಸು, ನಾಯಿಗಳಿಗೆ ಅರ್ಪಿಸಿ, ಬ್ರಾಹ್ಮಣರಿಗೆ ಆಹಾರ ಪದಾರ್ಥಗಳನ್ನು ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.

ಪಿತೃ ಪಕ್ಷದ ದಿನದಂದು ಏನು ಮಾಡಬಾರದು:

1. ಮದ್ಯಪಾನ, ಮಾಂಸಾಹಾರ, ಕಪ್ಪು ಉಪ್ಪು, ಬೆಳ್ಳುಳ್ಳಿ, ಈರುಳ್ಳಿ ಸೇವಿಸುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು.
2. ಐಷಾರಾಮಿ ವಸ್ತುಗಳನ್ನು ಖರೀದಿಸಬಾರದು. ಯಾವುದೇ ಶುಭ ಸಮಾರಂಭಗಳನ್ನು ಆಯೋಜಿಸಬಾರದು. ಕಬ್ಬಿಣದ ವಸ್ತುಗಳನ್ನು ಬಳಸಬಾರದು. ಹಾಗೆಯೇ ಈ ಸಮಯದಲ್ಲಿ ಬೆಳ್ಳಿ ಅಥವಾ ಹಿತ್ತಾಳೆ ಪಾತ್ರೆಗಳನ್ನು ಬಳಸಬಹುದು.

ಮಹಾಲಯ ಅಮಾವಾಸ್ಯೆಯಂದು ಶ್ರಾದ್ಧ ಆಚರಣೆಗಳನ್ನು ಮಾಡುವುದರಿಂದ ಈ ಪಿತೃ ದೋಷ ನಿವಾರಣೆಯಾಗುತ್ತದೆ. ಸತ್ತಂತಹ ಆತ್ಮಕ್ಕೆ ಮೋಕ್ಷವನ್ನು ನೀಡುತ್ತದೆ. ಪೂರ್ವಜರು ತಮ್ಮ ಮುಂದಿನ ಪೀಳಿಗೆಯವರನ್ನು ಆಶೀರ್ವಾದಿಸುತ್ತಾರೆ ಮತ್ತು ಅವರಿಗೆ ಜೀವನದಲ್ಲಿ ಎಲ್ಲಾ ಸಂತೋಷವನ್ನು ನೀಡುತ್ತಾರೆ.

RELATED ARTICLES

Related Articles

TRENDING ARTICLES