Monday, December 23, 2024

ಬಾಲಯ್ಯ ಜೊತೆ ಇಸ್ತಾನ್​ಬುಲ್​​ನಲ್ಲಿ ಸಲಗ & ಸಾಮ್ರಾಟ್

ಸಲಗನ ಕೈಗೆ ಸಿಕ್ಕರೆ ಬೀ ಕೇರ್​ಫುಲ್​​​​. ಅಪ್ಪಿ ತಪ್ಪಿ ಸಿಕ್ಕರೆ, ಆಗಿ ಹೋಗ್ತಿಯಾ ಕಣ್ಮರೆ. ಯೆಸ್​​.. ಸ್ಯಾಂಡಲ್​​​​​​​ವುಡ್​​ ಸಲಗ ಎಲ್ಲೇ ಇದ್ರೂ ಅಲ್ಲಿ ಜಾತ್ರೆ. ಭೀಮನಾಗಿ ರೌದ್ರಾವತಾರ ತಾಳಿರೋ ದುನಿಯಾ ವಿಜಯ್,​ ಟರ್ಕಿ ಟೂರ್​​​ನಲ್ಲಿದ್ದಾರೆ. ಬಾಲಯ್ಯನ ಅಡ್ಡಾದಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಸದ್ಯ ಊರ ಕಣ್ಣು, ಮಾರಿ ಕಣ್ಣು ಇವ್ರ ಮ್ಯಾಲಿದೆ. ಘೋರ, ಅಘೋರನ ಹವಾ ಹೇಗಿದೆ ಗೊತ್ತಾ..? ನೀವೇ ಓದಿ.

  • ಟಾಲಿವುಡ್​​​ನಲ್ಲಿ ಹಬ್ಬ ಮಾಡೋಕೆ ಸಜ್ಜಾದ ಟೆರಿಫಿಕ್​​ ಟೈಗರ್​

ಸದ್ಯ ಟಾಲಿವುಡ್​ನಲ್ಲಿ ಬಾಲಯ್ಯನ ದುನಿಯಾ ಹೈಪ್​ ಕ್ರಿಯೇಟ್​ ಮಾಡ್ತಿದೆ. ಮಫ್ತಿ ಗೆಟಪ್​ನಲ್ಲಿ ಬಾಲಯ್ಯನ ಸಿನಿಮಾ ಪೋಸ್ಟರ್​​ ಕಂಡವ್ರೆಲ್ಲಾ ಬೆಚ್ಚಿ ಬೆವರಿಳಿಸಿದ್ದಾರೆ. ಯೆಸ್​​​.. ಇದೊಂದು ಪಕ್ಕಾ ಮಾಸ್​​ ವೆಂಚರ್​​​ನಲ್ಲಿ ಮೂಡಿ ಬರ್ತಿರೋ ಅಖಂಡನ ರಣರೋಚಕ ಸಿನಿಮಾ. ಈ ಚಿತ್ರಕ್ಕೆ ಸ್ಯಾಂಡಲ್​ವುಡ್​​ ಸಲಗನ ಮಾಸ್​ ಅವತಾರ ಕೂಡ ಜತೆಯಾಗ್ತಿರೋದು ಅಚ್ಚರಿ ವಿಚಾರ

ದಿ ಫೇಮಸ್​ ಮೈತ್ರಿ ಮೂವಿ ಮೇಕರ್ಸ್​​ ಬ್ಯಾನರ್​ ಅಡಿಯಲ್ಲಿ ಬಾಲಯ್ಯನ ಸಿನಿಮಾ ತಯಾರಾಗ್ತಿದೆ. ಇಲ್ಲಿ ಬಾಲಯ್ಯನಿಗೆ ಸೆಡ್ಡು ಹೊಡೆಯೋಕೆ ಖಡಕ್​ ವಿಲನ್​ ರೋಲ್​ನಲ್ಲಿ ಬ್ಲಾಕ್​ ಕೋಬ್ರಾ ವಿಜಯ್​ ಬಣ್ಣ ಹಚ್ಚಿದ್ದಾರೆ. ಮಫ್ತಿ ಸಿನ್ಮಾದ ಬೈರತಿ ರಣಗಲ್ಲು ಗೆಟಪ್​ನಲ್ಲಿ ಬಾಲಯ್ಯ ಥ್ರಿಲ್ಲಿಂಗ್​ ಫೀಲ್​ ಕೊಟ್ಟಿದ್ದಾರೆ. ಇದೀಗ ದುನಿಯಾ ವಿಜಯ್ ಟರ್ಕಿಯ ಇಸ್ತಾನ್​​ಬುಲ್​ಗೆ ಹಾರಿದ್ದು ಬಾಲಯ್ಯನ ಟೀಮ್​ ಸೇರಿಕೊಂಡಿದ್ದಾರೆ. ಜತೆಗೆ ವಿಜಿಯ ಕಾಲ ಕಾಲ ಕರಾಬು ಮಾಮ ರೀಲ್ಸ್​​ ಸಿಕ್ಕಾಪಟ್ಟೆ ಕ್ರೇಜ್​ ಕ್ರಿಯೇಟ್​ ಮಾಡಿದೆ.

ಜೈ ಬಾಲಯ್ಯನ 107 ಸಿನಿಮಾ ಇದಾಗಿದ್ದು ಈ ಸಿನಿಮಾದ ಚಿತ್ರೀಕರಣ ಟರ್ಕಿಯಲ್ಲಿ ನೆಡಿತಿದೆ. ಇತ್ತ ಭೀಮನಾಗಿ ಅಬ್ಬರಿಸಿ ಬೊಬ್ಬಿರಿಯೋಕೆ ಸಜ್ಜಾಗಿರೋ ದುನಿಯಾ ವಿಜಿ ಮಗನ ಜತೆಗೆ ಟರ್ಕಿಗೆ ಹಾರಿದ್ದಾರೆ. ಶೂಟಿಂಗ್ ವೇಳೆ ಬಾಲಯ್ಯನ ಜತೆ ಫೋಟೋ ಕ್ಲಿಕ್ಕಿಸಿಕೊಂಡು ಜೈ ಬಾಲಯ್ಯ ಎಂದು ಬರೆದುಕೊಂಡಿದ್ದಾರೆ. ರೋಷ, ಆಕ್ರೋಶ, ಕ್ರೂರ, ಅಘೋರ ಈ ಸಲಗ. ಹಾಗಾಗಿ ವಿಲನ್​​ ರೋಲ್​​​ಗೆ ಪಕ್ಕಾ ರಗಡ್​​​​ ಆಗಿ ಬಾಲಯ್ಯನ ವಿರುದ್ಧ ಜಿದ್ದಿಗೆ ಬೀಳಲಿದ್ದಾರೆ.

ನಿರ್ದೇಶಕ ಗೋಪಿಚಂದ್​ ಮಲ್ಲಿನೇನಿ ನಿರ್ದೇಶನದಲ್ಲಿ ಬಾಲಯ್ಯನ 107 ಸಿನಿಮಾ ಇದಾಗಿದೆ. ಇನ್ನು ಟೈಟಲ್​ ಫೈನಲ್​ ಆಗದೇ ಇರೋ ಕಥೆಯಲ್ಲಿ ಪಕ್ಕಾ ಸುಕ್ಕಾ ರೋಲ್​ನಲ್ಲಿ ವಿಜಯ್​ ಮಿಂಚಲಿದ್ದಾರೆ. ಬಾಲಯ್ಯನಿಗೆ ಜೋಡಿಯಾಗಿ ಚೆಂದುಳ್ಳಿ ಚೆಲುವೆ ಶೃತಿ ಹಾಸನ್​​ ಜತೆಯಾಗಿದ್ದಾರೆ. ಮಗ ಸಾಮ್ರಾಟ್​​ ಕೂಡ ಅಪ್ಪನ ಆ್ಯಕ್ಟಿಂಗ್​​​ ಕಣ್ತುಂಬಿಕೊಳ್ಳೋ ಛಾನ್ಸ್​​​ ಸಿಕ್ಕಿದೆ. ಅಂತೂ ಅದ್ಧೂರಿ ಕಥೆಯಲ್ಲಿ ಕನ್ನಡಿಗ ದುನಿಯಾ ವಿಜಯ್​ ಅಬ್ಬರಿಸ್ತಿರೋದು ಹೆಮ್ಮೆಯ ವಿಷಯವಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES