Sunday, October 6, 2024

ಸೆ. 30ಕ್ಕೆ ‘ಪೊನ್ನಿಯಿನ್‌ ಸೆಲ್ವನ್‌’ ರಿಲೀಸ್​; ಬೆಂಗಳೂರಿಗೆ ಪ್ರಚಾರಕ್ಕೆ ಬಂದ ಚಿತ್ರತಂಡ

ಬೆಂಗಳೂರು: ಬಾಹುಬಲಿ ಖ್ಯಾತಿಯ ರಾಜಮೌಳಿಯ, ತ್ರಿಬಲ್ಆರ್ ಚಿತ್ರಗಳ ನಂತ್ರ ಮಣಿರತ್ನಂ‌ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್ ಅನ್ನೋ ಸೌತ್’ನ ಪ್ಯಾನ್ ಇಂಡಿಯಾ ಸಿನಿಮಾ ಇದೇ ಸೆಪ್ಟೆಂಬರ್ 30ಕ್ಕೆ ವರ್ಲ್ಡ್ ವೈಡ್ ತೆರೆಗೆ ಬರುತ್ತಿದೆ.

ಒಟ್ಟು ಐದು ಭಾಷೆಯಲ್ಲಿ ತಯಾರಾಗಿರೋ ಈ ಚಿತ್ರ ಕನ್ನಡದಲ್ಲೂ ರಿಲೀಸ್ ಆಗ್ತಿದ್ದು, ನೆನ್ನೆ ರಾತ್ರಿ ಬೆಂಗಳೂರಿನಲ್ಲಿ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ನಡೆಯಿತು. ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಟಿ ನಂತ್ರ ಒರಾಯನ್ ಮಾಲ್ ನ ಓಪನ್ ಸ್ಪೇಸ್ ನಲ್ಲಿ ನಡೆದ ಫಂಕ್ಷನ್ ನಲ್ಲಿ ನಟ ಚಿಯಾನ್ ವಿಕ್ರಮ್, ಕಾರ್ತಿ, ಜಯಂ ರವಿ, ತ್ರಿಶಾ ಹಾಗೂ ಐಶ್ವರ್ಯ ಲಕ್ಷ್ಮೀ ಭಾಗಿಯಾದರು.

ಸಾವಿರಾರು ಸಂಖ್ಯೆಯಲ್ಲಿ ನೆರೆದ ಸಿನಿಪ್ರಿಯರು ಹಾಗೂ ಅಭಿಮಾನಿಗಳನ್ನ ಡೈಲಾಗ್ ಹಾಗೂ ಡ್ಯಾನ್ಸ್ ನಿಂದ ಚಿತ್ರತಂಡ ರಂಜಿಸಿತು. ಇದೇ ಸಂದರ್ಭದಲ್ಲಿ ನಟ ಪುನೀತ್ ರಾಜ್ ಕುಮಾರ್, ಕೆಜಿಎಫ್ ಚಿತ್ರದ ಸಕ್ಸಸ್ ನೆನೆದ ಇವರು, ಬೆಂಗಳೂರಿನ ನಂಟಿನ ಬಗ್ಗೆ ಅವಿಸ್ಮರಣೀಯ ನೆನಪಿನ ಬುತ್ತಿ ಬಿಚ್ಚಿಟ್ಟರು.

RELATED ARTICLES

Related Articles

TRENDING ARTICLES