Wednesday, January 22, 2025

ಕೆಂಪಣ್ಣ ವಿರುದ್ಧ 50 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡಿದ ಸಚಿವ ಮುನಿರತ್ನ

ಬೆಂಗಳೂರು: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಸುಮಾರು 50 ಕೋಟಿ ರೂ ಮಾನನಷ್ಟ ಮೊಕದ್ದಮೆ ಹಾಕಲಾಗಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ.

ಇತ್ತೀಚೆಗೆ ಸಿದ್ದರಾಮಯ್ಯ ಅವರಿಗೆ ಭೇಟಿಯಾಗಿ ಕೆಂಪಣ್ಣ ಅವರು ರಾಜ್ಯ ಸರ್ಕಾರ ಹಾಗೂ ಮುನಿರತ್ನ ಮತಕ್ಷೇತ್ರದಲ್ಲಿ ಯಾವುದೇ ಕಾಮಗಾರಿಗೆ ಆರಂಭ ಮಾಡಲು ಗುತ್ತಿಗೆದಾರರು 40% ಕಮಿಷನ್​ ನೀಡಬೇಕು ಎಂದು ಆರೋಪ ಮಾಡಿದ್ದರು. ಈ ಆರೋಪ ಬಗ್ಗೆ ಇಂದು ಮುನಿರತ್ನ ಮಾತನಾಡಿ, ಈಗಾಗಲೇ ಕೆಂಪಣ್ಣ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ದಾಖಲು ಮಾಡಲಾಗಿದೆ. ಎರಡು ರೀತಿಯ ಕೇಸ್ ಹಾಕಲಾಗಿದೆ. ಕ್ರಿಮಿನಲ್ ಕೇಸ್ ಕೂಡ ಹಾಕಿದ್ದೇನೆ. ನಾಲ್ಕು ತಿಂಗಳಲ್ಲಿ ಮುಗೀಬೇಕು ಅಂತ ಹೈಕೋರ್ಟಿನಲ್ಲೂ ಹಾಕಿದ್ದೇನೆ. ಐದು ಕಡೆ ವಕೀಲರ ಮೂಲಕ ನೋಟೀಸ್ ಕೊಡಲಾಗಿದೆ ಎಂದರು.

ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದಿರುವ ಬಗ್ಗೆ ದಾಖಲೆ ಕೊಡಿ. ಇಲ್ಲ ಸುದ್ದಿಗೋಷ್ಟಿ ಮಾಡಲು ಹೇಳಿದ್ದೆ, ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಕ್ಕೆ ಬಿಡುಗಡೆ ಆಗದಿದ್ರೆ ರಾಜ್ಯಪಾಲರಿಗೆ ಕೊಡಲು ಹೇಳಿದ್ದೆ, ಲೋಕಾಯುಕ್ತರಿಗೆ ನೀಡಲು ಹೇಳಿದ್ದೆ ಅಲ್ಲೂ ಯಾವುದೇ ದಾಖಲಾತಿಯನ್ನ ಕೆಂಪಣ್ಣ ನೀಡಿಲ್ಲ.

ಸದ್ಯ ಅಧಿವೇಶನ ನಡೆಯುತ್ತಿದೆ, ಸಿದ್ದರಾಮಯ್ಯಗೆ ಕೊಡಿ ಎಂದಿದ್ದೆ ಅಲ್ಲೂ ಕೊಟ್ಟಿಲ್ಲ. ಈ ಬಗ್ಗೆ ಸರ್ಕಾರದ ತನಿಖೆ ಯಾಕೆ ಮಾಡ್ತಿಲ್ಲ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕೂಡ ಸರ್ಕಾರ, ತನಿಖೆ ಮಾಡಲು ಆಗಲ್ಲ. ಕೊಡಲಿ ಕೋರ್ಟ್​​ಗೆ ಎಲ್ಲೂ ದಾಖಲೆ ಕೊಡ್ತಿಲ್ಲ. ಏಳು ದಿನ ಆದ್ರೂ ಕೊಟ್ಟಿಲ್ಲ. 40% ದೂರನ್ನ ಗುತ್ತಿಗೆ ದಾರರು ಯಾರೂ ಕೊಟ್ಟಿಲ್ಲ. ದೇಶದಲ್ಲಿ 40% ಲಂಚ ಕೊಡ್ತಿದ್ದೀನಿ ಅಂತ ಮರ್ಯಾದೆ ಕಳೆದಿದ್ದಾರೆ. ದಾಖಲೆ ಇದ್ದರೆ ಬಿಡುಗಡೆ ಮಾಡಿ ಶಿಕ್ಷೆಕೊಡಿಸಲಿ ಎಂದರು.

ಇನ್ನು ಕ್ಯೂರ್​ ಕೋಡ್​ ಬಳಸಿ ಸಿಎಂ ವಿರುದ್ಧ 40% ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜಕೀಯ ಅಸೂಯೆಗೆ ರಾಜ್ಯದ ಮುಖ್ಯಮಂತ್ರಿಗೆ ಕಳಂಕ ತರೋದು ಸರಿಯಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಖುಷಿ ಕೊಟ್ಟಿರಬಹುದು. ದೇಶಕ್ಕೆ ಬೇರೆಯ ರೀತಿ ಮೆಸೇಜ್ ಹೋಗಿದೆ, ಇದು ಸರಿಯಲ್ಲ. ಕಾಂಗ್ರೆಸ್ ಪಕ್ಷಕ್ಕೆ ಇದು ಒಳ್ಳೆಯ ಸಂದೇಶ ಹೋಗಲ್ಲ. ಕೀಳು ಮಟ್ಟದ ರಾಜಕೀಯ ಅಂತ ಜನ ಮಾತಾಡ್ತಿದ್ದಾರೆ. ಪೋಸ್ಟರ್ ಅಂಟಿಸಿರೋದಕ್ಕೆ ಆನಂದ ಪಡ್ತಿದ್ದೀರಾ. ಇದು ಸರಿ ಎನಿಸುತ್ತಿದೇಯಾ ಎಂದರು.

RELATED ARTICLES

Related Articles

TRENDING ARTICLES