Monday, December 23, 2024

ಗಾಡ್​ಫಾದರ್ ಜೊತೆ ಸಲ್ಲು- ಪ್ರಭುದೇವ ಡ್ಯಾನ್ಸ್ ಧಮಾಕ

ಬಾಲಿವುಡ್​ ಬಾದ್​ ಷಾ ಸಲ್ಲು, ಮೆಗಾಸ್ಟಾರ್​ ಚಿರು ಹಾರ್ಡ್​​​ಕೋರ್​ ಅಭಿಮಾನಿಗಳಿಗೆ ಮಸ್ತ್​ ಮನರಂಜನೆ ನೀಡೋ ಸಾಂಗ್​ ರಿಲೀಸ್​ ಆಗಿದೆ. ಥಾರ್​ ಮಾರ್​​ ಥಕ್ಕರ್​​​​ ಮಾರ್​ ಹಾಡಿನ ಗುಂಗಲ್ಲಿ ಫ್ಯಾನ್ಸ್​​ ನಿಂತಲ್ಲೇ ಮೈ ಕೈ ಕುಣಿಸ್ತಿದ್ದಾರೆ. ಮೊದಲ ಬಾರಿಗೆ ಮೆಗಾ ಸ್ಟಾರ್​​ ಜತೆಗೆ ಸ್ಕ್ರೀನ್​ ಶೇರ್​​​​ ಮಾಡಿರೋ ಬಡೇಮಿಯಾ ಸಲ್ಲು ಹಿಟ್ ಕಾಂಬೋಗೆ ಸಖತ್ ರೆಸ್ಪಾನ್ಸ್​ ಸಿಕ್ಕಿದೆ. ಯೆಸ್​​.. ಟಾಪ್​ ಟ್ರೆಂಡಿಂಗ್​​ನಲ್ಲಿ ಸೌಂಡ್​ ಮಾಡ್ತಿರೋ ಗಾಡ್​​ ಫಾದರ್​ ಸಾಂಗ್​​ ಹೇಗಿದೆ ಗೊತ್ತಾ..?  ಜಸ್ಟ್​ ವಾಚ್​​​​.

  • ಸೂಪರ್​​​​​ ಸ್ಟಾರ್ಸ್​​​​​​​​​​​​​​ ಬಿಂದಾಸ್​ ಡ್ಯಾನ್ಸ್​​​​ಗೆ ಬಹುಪರಾಕ್​​​​..!

ಸದ್ಯ ಸೌಥ್​ ಟು ನಾರ್ಥ್​​ ಸದ್ದು ಮಾಡ್ತಿರೋ ಮೋಸ್ಟ್​ ಎಕ್ಸ್​​ಪೆಕ್ಟೆಡ್​ ಸಿನಿಮಾ ಗಾಡ್​​​ಫಾದರ್​​. ಮೊದಲ ಬಾರಿಗೆ ಟಾಲಿವುಡ್​ಗೆ ಎಂಠ್ರಿ ಕೊಟ್ಟಿರೋ ಸಲ್ಲುಮಿಯಾ ಚಿತ್ರಪ್ರೇಮಿಗಳ ಎದೆಯಲ್ಲಿ ಕ್ಯೂರಿಯಾಸಿಟಿ ಮೂಡಿಸಿದ್ದಾರೆ. ಬಿಗ್​ ಸ್ಟಾರ್​​ಗಳ ಸಮಾಗಮದಲ್ಲಿ ಕಮಾಲ್​ ಮಾಡೋಕೆ ಬರ್ತಿದೆ ಗಾಡ್​​ಫಾದರ್​ ಸಿನಿಮಾ. ಚಿರು, ಸಲ್ಲು ಜೋಡಿ ನೊಡೋಕೆ ಫ್ಯಾನ್ಸ್​ ಕೂಡ ಉತ್ಸುಕರಾಗಿದ್ದಾರೆ. ಇದ್ರ ನಡುವೆ ಸೂಪರ್​ ಹಿಟ್​ ಜೋಡಿಯ ಥಾರ್​​ ಮಾರ್​ ಲಿರಿಕಲ್​ ಸಾಂಗ್​​ ಸಿಕ್ಕಾಪಟ್ಟೆ ಕ್ರೇಜ್​ ಕ್ರಿಯೇಟ್​ ಮಾಡಿದೆ.

ರಿಲೀಸ್​ ಆದ ಕೆಲವೇ ಕ್ಷಣಗಳಲ್ಲಿ ವರ್ಲ್ಡ್​​ ವೈಡ್ ದಾಖಲೆಯ ಹಿಟ್ಸ್​ ದಾಖಲಿಸಿದೆ ಥಾರ್​ ಮಾರ್​ ಸಾಂಗ್​​​. ಟ್ವಿಟರ್​​​, ಇನ್​ಸ್ಟಾ, ಎಫ್​​​ಬಿಗಳಲ್ಲಿ ಟಾಪ್​ ಟ್ರೆಂಡಿಂಗ್​​ ಕ್ರಿಯೇಟ್​​ ಮಾಡಿ ಧೂಳೆಬ್ಬಿಸ್ತಿದೆ. ಅನಂತ್ ಶ್ರೀರಾಮ್​ ಬರೆದಿರೋ ಕ್ಯಾಚಿ ಲಿರಿಕ್​ಗೆ ಶ್ರೇಯಾ ಘೋಷಾಲ್​​​ ಮಧುರ ಕಂಠವಿದೆ.  ಇಂಡಿಯನ್​ ಮೈಕಲ್​ ಜಾಕ್ಸನ್​​ ಪ್ರಭುದೇವ ಡ್ಯಾನ್ಸ್​​ ಮಾಸ್ಟರ್​ ಆಗಿದ್ದು ಪ್ರತಿಯೊಂದು ಸ್ಟೆಪ್ಪುಗಳು ಥ್ರಿಲ್ಲಿಂಗ್​ ಫೀಲ್​ ಕೊಡ್ತವೆ. ನೀರವ್​​ ಶಾ ಸಿನಿಮಾಟೋಗ್ರಫಿ ಫಸ್ಟ್​ ಕ್ಲಾಸ್​ ಆಗಿದೆ.

ಸಿನಿದುನಿಯಾದಲ್ಲಿ ಗಾಡ್​ಫಾದರ್​ ಸಿನಿಮಾ ಮೇಲಿನ ಕ್ರೇಜ್​​ ದುಪ್ಪಟ್ಟಾಗಿದೆ. ಅಕ್ಟೋಬರ್​ 05ಕ್ಕೆ ಬಾಕ್ಸ್​ ಅಫೀಸ್​ ಲೂಟಿ ಮಾಡೋ ಪ್ಲಾನ್​ನಲ್ಲಿದೆ. ಕೋಟ್ಯಂತರ ಫ್ಯಾನ್ಸ್​​​ ಫಾಲೊಯಿಂಗ್​​ ಇರೋ ಸೂಪರ್​ ಸ್ಟಾರ್​ಗಳನ್ನು ಒಂದೇ ತೆರೆಯ ಮೇಲೆ ಕಣ್ತುಂಬಿಕೊಳ್ಳೋಕೆ ಕಾಯ್ತಿದ್ದಾರೆ. ಮಲಯಾಳಂನಲ್ಲಿ ಕೋಟಿ ಕೋಟಿ ದೋಚಿದ ಲೂಸಿಫರ್​ ಸಿನಿಮಾದ ರಿಮೇಕ್​ ಇದಾಗಿದ್ದು ದಾಖಲೆ ಬರೆಯೋ ತವಕದಲ್ಲಿದೆ.

ಈಗಾಗ್ಲೇ ನೆಟ್​ಫ್ಲಿಕ್ಸ್​​ಗೆ ಓಟಿಟಿ ರೈಟ್ಸ್  ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಸದ್ಯ ಗಾಡ್​ಫಾದರ್​ ಸಿನಿಮಾದ ಸಾಂಗ್​​ ಹೈಪ್​ ಕ್ರಿಯೇಟ್​ ಮಾಡಿದ್ದು ಟಾಕ್​ ಆಫ್​ ದಿ ಟೌನ್​ ಆಗಿದೆ. ಹಾಡಿನಲ್ಲಿ ಸಲ್ಲು, ಚಿರುಗೆ ಡ್ಯಾನ್ಸ್​​ ಮಾಸ್ಟರ್​ ಪ್ರಭುದೇವ ಸ್ಟೆಪ್ಸ್​​​ ಹೇಳಿಕೊಡ್ತಿರೋ ಸೀನ್​ಗಳಿದ್ದು ನೋಡುಗರಿಗೆ ಖುಷಿ ಕೊಡ್ತಿದೆ. ಥಮನ್​ ಮ್ಯೂಸಿಕ್​​ ಕಂಪೋಸ್​​​ಗೆ ಜೈಕಾರ ಸಿಕ್ಕಿದ್ದು, ಮೋಹನ್​​ ರಾಜ ನಿರ್ದೇಶನದಲ್ಲಿ ಸಿನಿಮಾ ಹೊಸ ಇತಿಹಾಸ ಬರೆಯೋ ನಿರೀಕ್ಷೆ ಮೂಡಿಸಿದೆ. ನಯನ ತಾರಾ ಸೇರಿದಂತೆ ಬಹುತಾರಾಗಣದ ಸಿನ್ಮಾಗೆ ಪ್ರೆಕ್ಷಕರು ಸೈ ಅಂತಾರಾ ಕಾದು ನೋಡ್ಬೇಕಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯುರೋ, ಪವರ್​ ಟಿವಿ ​​

RELATED ARTICLES

Related Articles

TRENDING ARTICLES