Monday, December 23, 2024

15ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ

ಕೊಚ್ಚಿ : ಕಾಂಗ್ರೆಸ್​ನ ‘ಭಾರತ್ ಜೋಡೋ ಯಾತ್ರೆ’ 15 ನೇ ದಿನಕ್ಕೆ ಕಾಲಿಟ್ಟಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಇಂದು ಕೊಚ್ಚಿಯ ಪರಂಬಯಂ ಜುಮಾ ಮಸೀದಿಯಿಂದ 15 ನೇ ದಿನದ ‘ಭಾರತ್ ಜೋಡೋ ಯಾತ್ರೆ’ ಪುನರಾರಂಭಿಸಿದರು.

ರಾಹುಲ್ ಗಾಂಧಿ ಅವರು ಇತರ ಪಕ್ಷದ ನಾಯಕರೊಂದಿಗೆ ಭಾರತವನ್ನು ಒಗ್ಗೂಡಿಸಲು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,500 ಕಿಲೋಮೀಟರ್‌ಗಳ ಪಾದಯಾತ್ರೆಯನ್ನು ರಾಹುಲ್ ಗಾಂಧಿ ಕೈಗೊಂಡಿದ್ದು, ಇದು 150 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ ಮತ್ತು 12 ರಾಜ್ಯಗಳನ್ನು ಒಳಗೊಂಡಿದೆ. ಯಾತ್ರೆಯು ಪಾದಯಾತ್ರೆಗಳು, ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸುತ್ತಾರೆ.

RELATED ARTICLES

Related Articles

TRENDING ARTICLES