Wednesday, January 22, 2025

ವರದಿ ಕೈ ಸೇರಿದ ಮೇಲೆ ಪಂಚಮಸಾಲಿಗೆ 2A ನಿರ್ಧಾರ; ಸಿಎಂ ಬೊಮ್ಮಾಯಿ

ಬೆಂಗಳೂರು: ಪಂಚಮಸಾಲಿಗೆ 2A ಮೀಸಲಾತಿ ವಿಚಾರವಾಗಿ ವಿಧಾನಸೌಧದ ಅಧಿವೇಶನದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಪ್ರಸ್ತಾಪಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಉತ್ತರಿಸಿದ್ದಾರೆ.

ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸಂಪುಟ ಉಪ ಸಮಿತಿ ಮಾಡಿದ್ದರು. ನಾನೂ ಕೂಡ ಸಂಪುಟ ಉಪ ಸಮಿತಿಯ ಸದಸ್ಯ ಆಗಿದ್ದೆ, ಹಲವು ಪಂಗಡಗಳನ್ನ 2Aಗೆ ಸೇರಿಸಲು ಡೇಟಾ ಇರಲಿಲ್ಲ. ಹಾಗಾಗಿ ಅವೆಲ್ಲವನ್ನ 3B ಗೆ ಸೇರಿಸಲಾಯಿತು. ವರದಿ ಬಂದ ಕೂಡಲೇ ರಾಜ್ಯ ಸರ್ಕಾರ 2A ನಿರ್ಧಾರ ಮಾಡುತ್ತದೆ ಎಂದು ಸಿಎಂ ಹೇಳಿದರು.

ನನ್ನ ಅವಧಿಯಲ್ಲಿ ಹಿಂದೆ ಪಂಚಮಸಾಲಿಗೆ 3B ಮೀಸಲಾತಿ ನೀಡಿಲಾಯಿತು. ಪಂಚಮಸಾಲಿಗೆ 2A ಮೀಸಲಾತಿಗೆ ವರದಿಗೆ ಆಗ ಸೂಚಿಸಿದ್ದೆ, ಮೀಸಲಾತಿ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಸಿಎಂ ಮಾಡುತ್ತಾರೆ. 2A ಮೀಸಲಾತಿ ನೀಡಲು ಸರ್ಕಾರದ ನಿರ್ಧಾರಕ್ಕೆ ಸಹಮತ ವಿದೆ. ಸಮುದಾಯದ ಸ್ವಾಮೀಜಿ ಪಾದಯಾತ್ರೆ ಮಾಡಿದ್ದಾರೆ. ಅವರಿಗೆ ನ್ಯಾಯ ಕೊಡಿಸಬೇಕೆಂದು ಬಿಎಸ್​ವೈ ಅಧಿವೇಶನದಲ್ಲಿ ಮನವಿ ಮಾಡಿದರು.

RELATED ARTICLES

Related Articles

TRENDING ARTICLES