ಮೈಸೂರು : ಕೊಡಗು ಜಿಲ್ಲೆಯ ಸಿದ್ದಾಪುರ ಭಾಗದಲ್ಲಿ 5 ಹಸುಗಳ ಮೇಲೆ ದಾಳಿ ಮಾಡಿ ಜನರಲ್ಲಿ ಆತಂಕ ಸೃಷ್ಟಿಸಿದ್ದ ಹುಲಿರಾಯ ಕೊನೆಗೂ ಅರಣ್ಯ ಇಲಾಖೆ ಬಲೆಗೆ ಬಿದ್ದಿದ್ದಾನೆ.
ಸಿದ್ದಾಪುರ ಭಾಗದ ವಿವಿಧೆಡೆ ಜಾನುವಾರುಗಳ ಮೇಲೆರಗುತ್ತಿದ್ದ ಹುಲಿ ಕಾಫಿತೋಟದಲ್ಲಿ ಮರೆಯಾಗುತ್ತಿತ್ತು. ಇದರಿಂದ ಕೋಪಗೊಂಡ ಜನರು ವ್ಯಾಘ್ರನ ಸೆರೆಗೆ ಆಗ್ರಹಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಸಾಕಾನೆಗಳ ಸಹಾಯದಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ನಿನ್ನೆ ಮಧ್ಯಾಹ್ನದ ಸುಮಾರಿಗೆ ಹುಲಿಯ ಹೆಜ್ಜೆಗುರುತುಗಳು ಪತ್ತೆಯಾಗಿತ್ತು. ಆನೆಗಳ ಸಹಾಯದಿಂದ ಅರಿವಳಿಕೆ ಮದ್ದು ನೀಡಿ ಸಿದ್ದಾಪುರ ಸಮೀದ ಮಾಲ್ದಾರೆಯಲ್ಲಿ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಯಿತು. ಈ ಮೂಲಕ ಕೊಡಗಿನ ಜನತೆ ನಿಟ್ಟುಸಿರು ಬಿಡುವಂತಾಗಿದೆ.