Wednesday, January 22, 2025

ಶತದಿನೋತ್ಸವದ ಸಂಭ್ರಮದಲ್ಲಿ ವರ್ಷದ ಹಿಟ್ ಚಾರ್ಲಿ

ಚಾರ್ಲಿಯಿಂದ ರಕ್ಷಿತ್ ಶೆಟ್ಟಿ ನಸೀಬು ಕಂಪ್ಲೀಟ್ ಬದಲಾಗಿ ಹೋಯ್ತು. ಕೋಟ್ಯಂತರ ರೂಪಾಯಿ ಜೇಬು ತುಂಬಿಸಿದ್ದಲ್ಲದೆ, ವಿಶ್ವದ ಮೂಲೆ ಮೂಲೆಯಿಂದ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತು. 25 ದಿನ ಅಲ್ಲ, 50 ದಿನ ಅಲ್ಲ. ಬರೋಬ್ಬರಿ 100 ದಿನ ಯಶಸ್ವಿ ಪ್ರದರ್ಶನ ಕಂಡು ಶತಕ ಭಾರಿಸಿದೆ ಚಾರ್ಲಿ. ಇದರೊಟ್ಟಿಗೆ ಒಂದಷ್ಟು ಸ್ಯಾಂಡಲ್​ವುಡ್ ಅಪ್ಡೇಟ್ಸ್ ನೀವೇ ಓದಿ.

ರಕ್ಷಿತ್ ಶೆಟ್ಟಿ ಮತ್ತು ಕಿರಣ್ ಕರಿಯರ್​ಗೆ ಬೂಸ್ಟರ್ ಡೋಸ್

ಲವ್, ಆ್ಯಕ್ಷನ್​ನ ಮೂಲವಾಗಿಟ್ಕೊಂಡು ಸಿನಿಮಾ ಮಾಡೋದು ಸುಲಭ. ಎಲ್ರೂ ಮಾಡ್ತಿರೋದು ಕೂಡ ಅದೇ. ಆದ್ರೆ ಅವುಗಳ ಹೊರತಾಗಿ ಒಂದಷ್ಟು ಪ್ರಯೋಗಾತ್ಮಕ ಚಿತ್ರಗಳು ಸಹ ಬರ್ತಿವೆ. ಅವುಗಳ ಪೈಕಿ 777 ಚಾರ್ಲಿ ಒಂದು. ಹೌದು.. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಕಿರಣ್ ರಾಜ್ ಕೆ ಕಾಂಬೋನ ಈ ಚಿತ್ರ ಭಾವನಾತ್ಮಕವಾಗಿ ಎಲ್ಲರ ಹೃದಯಗಳಲ್ಲಿ ಭದ್ರವಾಗಿ ನೆಲೆನಿಂತಿತು. ಶ್ವಾನ ಮತ್ತು ಮನುಷ್ಯನ ನಡುವಿನ ಬಾಂಧವ್ಯಕ್ಕೆ ಹೊಸ ಅರ್ಥ ಕಲ್ಪಿಸಿತು. ನಾಯಿಗಳನ್ನ ಇಷ್ಟ ಪಡದವ್ರೂ ಕೂಡ ನಾಯಿ ಸಾಕಲು ಮುಂದಾಗುವಂತೆ ಮಾಡಿದ್ರು. ಚಾರ್ಲಿ- ಧರ್ಮನ ಜರ್ನಿ ನಿಜಕ್ಕೂ ರೋಚಕ, ರೋಮಾಂಚಕ. ಹಾಗಾಗಿಯೇ ಸಿನಿಮಾ ನೂರು ಕೋಟಿ ಕಲೆಕ್ಷನ್ ಮಾಡಿದ್ದಲ್ಲದೆ ಯಶಸ್ವಿ 25, 50, 75ದಿನ ಪೂರೈಸಿತ್ತು. ಇದೀಗ ನೂರು ದಿನ ಕಂಪ್ಲೀಟ್ ಮಾಡಿ ಶತದಿನೋತ್ಸವದ ಮೈಲಿಗಲ್ಲಿಗೆ ಕಾರಣವಾಗಿದೆ. ಇದು ನಿಜಕ್ಕೂ ಶೆಟ್ರ ಗ್ಯಾಂಗ್​ನ ಕ್ರಿಯಾಶೀಲತೆಯನ್ನ ಮತ್ತೊಮ್ಮೆ ಮೆಚ್ಚುವಂತೆ ಮಾಡಿದೆ. ಇಂತಹ ಪ್ರಯೋಗಗಳು ಮತ್ತಷ್ಟು, ಮಗದಷ್ಟು ಬರಲಿ ಅನ್ನೋದು ಸಿನಿಪ್ರಿಯರ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES