Monday, December 23, 2024

ಜೈಲು ಅಧೀಕ್ಷಕನ ಮನೆಯಲ್ಲಿ ಖೈದಿಗಳು; ಗೋಗರೆದು ಬಿಟ್ಬಿಡಿವೆಂದ ಅಧಿಕಾರಿ

ಬಾಗಲಕೋಟೆ: ಜೈಲು ಖೈದಿಗಳನ್ನು ತಮ್ಮ ಮನೆಯಲ್ಲಿ ಕೆಲಸಕ್ಕೆ ಬಳಸಿಕೊಂಡ ಆರೋಪ ಜೈಲು ಅಧೀಕ್ಷಕನ ಮೇಲೆ ಕೇಳಿಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಾಗಲಕೋಟೆ ಜಿಲ್ಲಾ ಕಾರಾಗೃಹ ಅಧೀಕ್ಷಕ ದತ್ತಾತ್ರಿ ಮೇದಾ ಅವರ ಮೇಲೆ ಈ ಆರೋಪ ಕೇಳಿಬಂದಿದ್ದು, ಈ ವಿಡಿಯೋದಲ್ಲಿ ಖೈದಿಗಳನ್ನು ನಿಯಮ ಮೀರಿ ತಮ್ಮ ಜೈಲು ಅಧೀಕ್ಷಕ ಬಳಸಿಕೊಂಡಿರುವುದನ್ನ ಕಾಣಬಹುದು.

ಬಾಗಲಕೋಟೆಯ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರಿಂದ ಈ ವಿಡಿಯೋ ಸೆರೆ ಇಡಿಯಲಾಗಿದೆ. ನವನಗರದಲ್ಲಿರುವ ದತ್ತಾತ್ರಿ ಮೇದಾ ಮನೆಯಿಂದ ಕೆಲಸ ಮಾಡಿ ನಾಲ್ಕರಿಂದ ಐದು ಜನ ಖೈದಿಗಳು ಹೊರಬರುತ್ತಿರುವ ದೃಶ್ಯ ಸೆರೆಯಾಗಿದೆ.

ಈ ಬಗ್ಗೆ ಪ್ರಶ್ನಿಸಿದ ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರಿಗೆ ಈ ಬಾರಿ ತಪ್ಪು ಆಗಿದೆ. ಯಾವಾಗಲೂ ಬರೋದಿಲ್ಲ ಯಾವಾಗಲೋ ಒಮ್ಮೆ ಕರಕೊಂಡ ಬರುತ್ತೇನೆ. ಅವರನ್ನೆಲ್ಲ ಈಗ ಜೈಲಿಗೆ ಕಳಿಸಿದಿನಿ ಸುಮ್ನೆ ಬಿಟ್ಟು ಬಿಡಿ ಎಂದು ಅಧೀಕ್ಷಕ ಗೋಗರೆದಿದ್ದಾನೆ.

RELATED ARTICLES

Related Articles

TRENDING ARTICLES