ಹುಬ್ಬಳ್ಳಿ : ಇದು ಅಪ್ಪಟ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿರುವ ಹುಬ್ಬಳ್ಳಿಯ ಚಿಟಗುಪ್ಪಿ ಹೆರಿಗೆ ಆಸ್ಪತ್ರೆ. ಇಷ್ಟೊಂದು ಕ್ಲಿನ್ ಆಗಿ ಅಚ್ಚುಕಟ್ಟಾಗಿ ಈ ಆಸ್ಪತ್ರೆ ಇರುವುದರ ಜೊತೆಗೆ ಇಲ್ಲಿಯ ವೈದ್ಯರು ಬಡ ಜನರಿಗೆ ದೇವರಾಗಿ ತೆರೆಮರೆಯಲ್ಲಿ ಸೇವೆ ಸಲಿಸುತ್ತಾ ಬಂದಿದ್ದಾರೆ.
ಬೆಡ್ ಮೇಲೆ ಲವಲವಿಕೆಯಿಂದ ಕುಳಿತು ಮಾತನಾಡಿದ ಮಹಿಳೆ ತುಂಬಾ ಅಪರೂಪದ ಕಾಯಿಲೆಯಾದ ಗರ್ಭಕೋಶ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಇದಕ್ಕಾಗಿ ವಿಶೇಷ ಕಾಳಜಿ ವಹಿಸಿದ ಡಾ.ಶ್ರೀಧರ್ ದಂಡೆಪ್ಪನವರ ಖಾಸಗಿ ಸ್ನೇಹಿತರ ಬಳಿಯಿಂದ ಲ್ಯಾಪ್ರೊಸ್ಕೋಪಿ ಮಷಿನ್ ಪಡೆದು ಸರ್ಜರಿ ಮಾಡಿ ಗರ್ಭಕೋಶದಲ್ಲಿದ್ದ ಕ್ಯಾನ್ಸರ್ ಗಡ್ಡೆಯನ್ನು ಯಶಸ್ವಿಯಾಗಿ ಹೊರೆತೆಗೆದಿದ್ದಾರೆ.
ಇನ್ನು ಈ ಆಸ್ಪತ್ರೆಯಲ್ಲಿ ಈ ಹಿಂದೆ ಕೂಡ ಈ ರೀತಿಯ ಅನೇಕ ಶಸ್ತ್ರ ಚಿಕಿತ್ಸೆಗಳನ್ನ ಯಶಸ್ವಿಯಾಗಿ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ತಮಗೆ ಲ್ಯಾಪ್ರೊಸ್ಕೋಪಿ ಉಪಕರಣಗಳನ್ನ ಒದಗಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಹೀಗೆ ಈ ಸರ್ಕಾರಿ ಆಸ್ಪತ್ರೆ ಎಲ್ಲರಿಗೂ ಮಾದರಿಯಾಗಲಿ ಎನ್ನುವುದು ನಮ್ಮ ಆಶಯ.
ಮಲ್ಲಿಕ್ ಬೆಳಗಲಿ, ಪವರ್ ಟಿವಿ, ಹುಬ್ಬಳ್ಳಿ