Wednesday, October 30, 2024

JDS ಸಮಾವೇಶಕ್ಕೆ ಭರ್ಜರಿ ಊಟ ತಯಾರಿ

ಕೋಲಾರ :  ಇಂದು ಜೆಡಿಎಸ್ ಪಕ್ಷದಿಂದ ಅಲ್ಪಸಂಖ್ಯಾತರ ಸಮಾವೇಶ ನಡೆಯುತ್ತಿದ್ದು, ಸಮಾವೇಶಕ್ಕೆ ಬರುವವರಿಗೆ 2500 ಸಾವಿರ ಕೆಜಿ ಚಿಕನ್, 2000 ಕೆಜಿ ಅಕ್ಕಿ ಬಳಸಿ ಭರ್ಜರಿ ಬಿರಿಯಾನಿ ವ್ಯವಸ್ಥೆ ಮಾಡಲಾಗಿದೆ.

80 ಜನ ಬಾಣಸಿಗರಿಂದ ಬಿರಿಯಾನಿ ತಯಾರಿಸಲಾಗ್ತಿದೆ. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, JDS ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಭಾಗಿಯಾಗಲಿದ್ದಾರೆ. 20 ಸಾವಿರಕ್ಕೂ ಅಧಿಕ ಅಲ್ಪಸಂಖ್ಯಾತ ಸಮುದಾಯದ ಜನರು ಭಾಗಿಯಾಗುವ ಸಾಧ್ಯತೆ ಇದೆ. ಊಟಕ್ಕೆ 43 ಊಟದ ಕೌಂಟರ್ ಗಳ ನಿರ್ಮಾಣ ಮಾಡಲಾಗಿದೆ.

RELATED ARTICLES

Related Articles

TRENDING ARTICLES