Tuesday, April 23, 2024

KCR ಟೀಕೆಗೆ ಮತಬ್ಯಾಂಕ್ ರಾಜಕೀಯ- ಅಮಿತ್ ಶಾ

ನವದೆಹಲಿ : ಗೃಹ ಸಚಿವ ಅಮಿತ್ ಶಾ ಅವರು ವಿಭಜನೆಯ ರಾಜಕಾರಣ’ ಮಾಡುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಕಿಡಿಕಾರಿದ್ದಾರೆ.

ತೆಲಂಗಾಣದ ಬುಡಕಟ್ಟು ಜನರಿಗೆ ಶೇ 10ರಷ್ಟು ಮೀಸಲಾತಿಗೆ ಒಪ್ಪಿಗೆ ನೀಡುವಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇತ್ತ, ತೆಲಂಗಾಣ ವಿಮೋಚನಾ ದಿನವನ್ನು ಆಚರಿಸದವರಿಗೆ ನೇರವಾಗಿ ಪ್ರತ್ಯುತ್ತರ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ತೆಲಂಗಾಣ ವಿಮೋಚನಾ ದಿನಾಚರಣೆಯ ಹೆಸರನ್ನು ಬದಲಾಯಿಸುವ ಮೂಲಕ ಅವರ ಮನಸ್ಸಿನಲ್ಲಿರುವ ಭಯ ತೆಗೆದುಹಾಕುವಂತೆ ಹೇಳಿದ್ದಾರೆ.

ಸ್ವಾತಂತ್ರ್ಯದ 75 ವರ್ಷಗಳ ನಂತರ, ರಜಾಕರು ಇನ್ನುಮುಂದೆ ರಾಜ್ಯದ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ. ತೆಲಂಗಾಣ ವಿಮೋಚನಾ ದಿನಾಚರಣೆ ಪ್ರಯುಕ್ತ ಪರೇಡ್ ಮೈದಾನದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಸೆಪ್ಟೆಂಬರ್ 17 ಅನ್ನು ವಿಮೋಚನಾ ದಿನವನ್ನಾಗಿ ಆಚರಿಸಲು ನಾಚಿಕೆ ಪಡುವವರು, ಸಾವಿರಾರು ಜನ ತಮ್ಮ ಪ್ರಾಣವನ್ನು ಅರ್ಪಿಸಿದ ವಿಮೋಚನಾ ಹೋರಾಟದ ದ್ರೋಹಿಗಳಾಗಿ ಉಳಿಯುತ್ತಾರೆ ಎಂದು ಎಚ್ಚರಿಸಿದರು.

RELATED ARTICLES

Related Articles

TRENDING ARTICLES