Thursday, January 23, 2025

ಕ್ರಿಕೆಟಿಗ ವೆಂಕಟೇಶ್​ ಅಯ್ಯರ್ ತಲೆಗೆ ಪೆಟ್ಟು, ಆಸ್ಪತ್ರೆಯಲ್ಲಿ ಚಿಕಿತ್ಸೆ

ನವದೆಹಲಿ: ಎಸ್​ಎನ್​ಆರ್​ ಕ್ರಿಕೆಟ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬೌಲರ್​ ಎಸೆತಕ್ಕೆ ಬ್ಯಾಟ್ಸಮನ್​ ವೆಂಕಟೇಶ್​ ಅಯ್ಯರ್​ ಅವರು ಗಾಯಗೊಂಡಿದ್ದಾರೆ. ದುಲೀಪ್ ಟ್ರೋಫಿ 2022ರ ಸೆಮಿಫೈನಲ್ ಪಂದ್ಯದಲ್ಲಿ ಬ್ಯಾಟ್ಸ್​ಮನ್ ಸಿಕ್ಸರ್​ ಸಿಡಿಸಿದ ನಂತರದ ಎಸೆತದಲ್ಲಿ ಈ ಘಟನೆ ನಡೆದಿದೆ.

ಸೆಂಟ್ರಲ್ ಜೋನ್ ತಂಡದ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್ ಭರ್ಜರಿ ಸಿಕ್ಸರ್ ಸಿಡಿಸಿದರು. ಇದರ ನಂತರದ ಎಸೆತವನ್ನು ಅಯ್ಯರ್ ಕಟ್​ ಮಾಡಿದರು. ಈ ವೇಳೆ ಬೌಲರ್ ಚಿಂತನ್ ಗಜಾ ಬಾಲ್‌ನ್ನು ತಿರುಗಿ ಅಯ್ಯರ್‌ನತ್ತ ಬಲವಾಗಿ ಎಸೆದಿದ್ದಾರೆ. ಅದು ನೇರವಾಗಿ ಅಯ್ಯರ್ ತಲೆಗೆ ತಗುಲಿದ್ದು, ಅಯ್ಯರ್ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ.

ನಂತರ ಮೈದಾನಕ್ಕೆ ಆ್ಯಂಬುಲೆನ್ಸ್ ಬಂದು ವೆಂಕಟೇಶ್ ಅಯ್ಯರ್​ ಅವರನ್ನ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಪಡೆದ ನಂತರ ಅಯ್ಯರ್ ಮತ್ತೆ ಆಟಕ್ಕೆ ಹಿಂತಿರುಗಿದ್ದಾರೆ ವರದಿ ತಿಳಿಸಿವೆ.

RELATED ARTICLES

Related Articles

TRENDING ARTICLES