Monday, December 23, 2024

ಮೈಸೂರಿನಲ್ಲಿ ಮನೆ ಮಾಡುತ್ತಿದೆ ದಸರಾ ಸಂಭ್ರಮ

ಮೈಸೂರು : ವಿಶ್ವವಿಖ್ಯಾತ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಎರಡನೇ ಹಂತದ ಸಿಡಿಮದ್ದು ತಾಲೀಮು ನಡೆಸಲಾಯಿತು. ವಿಜಯದಶಮಿಯ ದಿನದಂದು ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವಾಗ ಮತ್ತು ರಾಷ್ಟ್ರಗೀತೆ ನುಡಿಸುವಾಗ ಗೌರವಾರ್ಥವಾಗಿ 3 ಸುತ್ತಿನಲ್ಲಿ 21 ಕುಶಾಲ ತೋಪುಗಳನ್ನು ಸಿಡಿಸುವುದು ಸಂಪ್ರದಾಯ. ಹೀಗೆ ಸಿಡಿಮದ್ದು ಸಿಡಿಸಿದಾಗ ಉಂಟಾಗುವ ಭಾರೀ ಶಬ್ದದಿಂದ ಆನೆಗಳು ಕುದುರೆಗಳು ಬೆದರುತ್ತವೆ, ವಿಚಲಿತಗೊಳ್ಳುತ್ತವೆ. ಹೀಗಾಗಿ ಆನೆಗಳು ಕುದುರೆಗಳು ಈ ಸಿಡಿಮದ್ದು ಶಬ್ದಕ್ಕೆ ಹೊಂದಿಕೊಳ್ಳಲು ಈ ತಾಲೀಮು ನಡೆಸಲಾಯಿತು. ಈ ಬಾರಿಯ ತಾಲೀಮಿನಲ್ಲಿ ಲಕ್ಷ್ಮೀ ಪುತ್ರ ಸಂತಾನವಾದ ಹಿನ್ನೆಲೆ ಗೈರಾಗಿದ್ರೆ. ಇದರೊಟ್ಟಿಗೆ ಚೈತ್ರ ಆನೆಯನ್ನು ಇರಿಸಲಾಗಿತ್ತು.

ಇನ್ನೂ, ಇದೇ ಮೊದಲ ಬಾರಿಗೆ ವಸ್ತು ಪ್ರದರ್ಶನದ ಪಾರ್ಕಿಂಗ್ ಆವರಣದಲ್ಲಿ ದಸರಾ ಸಿಡಿಮದ್ದು ತಾಲೀಮು ನಡೆಸಲಾಯ್ತು. ಅರಮನೆ ಗೋಡೆಗಳು ಹಳೆಯದಾಗಿರೋ ಹಿನ್ನೆಲೆಯಲ್ಲಿ ಭಾರೀ ಶಬ್ಧಕ್ಕೆ ಗೋಡೆಗಳಿಗೆ ಸಮಸ್ಯೆಯಾಗಬಹುದು ಅನ್ನೋ ಅರಮನೆ ಆಡಳಿ ಮಂಡಳಿ ಸಲಹೆ ಮೇರೆಗೆ ವಸ್ತುಪ್ರದರ್ಶನದ ಪಾರ್ಕಿಂಗ್ ಆವಣದಲ್ಲಿ ಎರಡನೇ ಬಾರಿಗೆ ತಾಲೀಮು ನಡೆಸಲಾಯ್ತು. ತಾಲೀಮಿನಲ್ಲಿ 93.5 ಡೆಸಿಬಲ್ ಶಬ್ಧ ದಾಖಲಾಗಿತ್ತು. ತಾಲೀಮಿನಲ್ಲಿ 12 ಆನೆಗಳು ಭಾಗಿಯಾಗಿದ್ವು.

ಒಟ್ಟಿನಲ್ಲಿ ಎರಡನೇ ಹಂತದ ಸಿಡಿಮದ್ದು ತಾಲೀಮು ಸಂಪೂರ್ಣ ಯಶಸ್ವಿಯಾಗಿದೆ. ಮೂರನೇ ತಾಲೀಮು ವಸ್ತುಪ್ರದರ್ಶನದ ಆವರಣದಲ್ಲಿಯೇ ನಡೆಯಲಿದೆ.

ಸುರೇಶ್ ಬಿ.ಪವರ್ ಟಿವಿ ಮೈಸೂರು.

RELATED ARTICLES

Related Articles

TRENDING ARTICLES