Wednesday, January 22, 2025

ಸ್ವಪಕ್ಷೀಯ ಶಾಸಕರಿಂದಲೇ ಸಚಿವ ಕೆ. ಸುಧಾಕರ್ ವಿರುದ್ದ ಗುಡುಗು

ಬಳ್ಳಾರಿ; ವಿಮ್ಸ್ ನ ಪ್ರಕರಣಕ್ಕೆ ಇಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಡಾ.ಸುಧಾಕರ್ ವಿರುದ್ಧ ಸ್ವಪಕ್ಷದ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ರೆ, ಡೈರೆಕ್ಟರ್ ಗಂಗಾಧರಗೌಡ, ನನ್ನ ವಿರುದ್ಧ ಕೆಲವರು ಷಡ್ಯಂತ್ರ ಮಾಡಿದ್ದಾರೆ ಸೂಕ್ತ ಸಮಯದಲ್ಲಿ ಅವರ ವಿರುದ್ಧ ಕೇಸ್ ಮಾಡುವೆ ಎಂದಿದ್ದಾರೆ.‌ ಇನ್ನು ವಿರೋಧ ಪಕ್ಷದ ಶಾಸಕ ನಾಗೇಂದ್ರ ಡೈರೆಕ್ಟರ್ ಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಳ್ಳಾರಿ ವಿಮ್ಸ್ ವೈದ್ಯರ ಎಡವಟ್ಟಿನಿಂದ 6 ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ನಿರ್ದೇಶಕರ ವಿರುದ್ಧ ಆಕ್ರೋಶವ್ಯಕ್ತವಾಗಿದೆ. ಆಡಳಿತ ಪಕ್ಷದ ಶಾಸಕರೇ ಈಗ ಆರೋಗ್ಯ ಮತ್ತು ವೈದ್ಯಕೀಯ ಸಚಿವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಶಾಸಕ ಜಿ.ಸೋಮಶೇಖರ ರೆಡ್ಡಿ, ಸಚಿವ ಡಾ. ಸುಧಾಕರ್ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ವಿಮ್ಸ್ ನಿರ್ದೇಶಕರನ್ನಾಗಿ ಡಾ. ಗಂಗಾಧರಗೌಡ ಅವರನ್ನು ನೇಮಿಸಬೇಡಿ ಅಂತ ಮೊದಲೇ ತಿಳಿಸಿದ್ದೆ. ಆದ್ರೆ ಡಾ.ಸುಧಾಕರ್ ನಮ್ಮ‌ ಮಾತನ್ನು ಕೇಳದೆ ಗಂಗಾಧರಗೌಡ ಅವರನ್ನು ವಿಮ್ಸ್ ಡೈರೆಕ್ಟರ್ ಆಗಿ ನೇಮಿಸಿದ್ದಾರೆ ಎಂದರು.

ಇದೀಗ ಈ ಎಲ್ಲಾ ಯಡವಟ್ಟುಗಳಿಗೆ ಕಾರಣವಾಗಿದೆ ಅಂತ ಆರೋಪ ಮಾಡಿದ್ದಾರೆ. ಇನ್ನು ಇದೇ ವೇಳೆ ಕಾಂಗ್ರೆಸ್ ಪಕ್ಷದಿಂದ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಿ ಡಿಸಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ನಂತರ ಶಾಸಕ ನಾಗೇಂದ್ರ ನೇತೃತ್ವದಲ್ಲಿ ಕೈ ಮುಖಂಡರು ವಿಮ್ಸ್ ಗೆ ತೆರಳಿ ನಿರ್ದೇಶಕ ಗಂಗಾಧರಗೌಡ ಅವರಿಗೂ ಕ್ಲಾಸ್ ತೆಗೆದುಕೊಂಡರು. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES