ಬೆಂಗಳೂರು : ವಾಹನಗಳ ಐಡೆಂಫಿಕೇಶನ್ಗಾಗಿ ನಂಬರ್ ಪ್ಲೇಟ್ ನೀಡಲಾಗುತ್ತೆ. ಆದ್ರೆ ಕೆಲವ್ರು ಶೋಕಿಗಾಗಿ ಇದರ ಮೇಲೆ ಹೆಸ್ರು ಬರೆಯೋದು. ಡಿಸೈನ್ ಬಿಡಿಸಿಕೊಳೋದು ಮಾಡ್ತಿದ್ರು.ಇಂತಹ ಶೋಕಿಗಳಿಗೆ ಬ್ರೇಕ್ ಹಾಕೋಕೆ ಸಾರಿಗೆ ಇಲಾಖೆ ಮುಂದಾಗಿತ್ತು. ಶುಕ್ರವಾರ ನಗರದೆಲ್ಲೆಡೆ ವಾಹನಗಳ ತಪಾಸಣೆಗೆ ಇಳಿದ ಅಧಿಕಾರಿಗಳು ನಿಯಮ ಮೀರಿ ವಾಹನ ಓಡಿಸುತ್ತಿದ್ದವರಿಗೆ ಬಿಸಿ ಮುಟ್ಟಿಸಿದರು.
ನಂಬರ್ ಪ್ಲೇಟ್ ಮೇಲೆ ಇರುವ ಹೆಸರು ಚಿಹ್ನೆ ತೆರವುಗೊಳಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ರು. ಆದ್ರೂ ಬಹುತೇಕ ವಾಹನ ಮಾಲೀಕರು ವಾಹನದ ನಂಬರ್ ಪ್ಲೇಟ್ ಮೇಲೆ ಅನಧಿಕೃತವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗ ಇತ್ಯಾದಿ ಲಾಂಛನಗಳನ್ನು ಹಾಕುವ ಮೂಲಕ ಸಂಚಾರಿ ನಿಯಮದ ಉಲ್ಲಂಘನೆ ಮಾಡುತ್ತಿದ್ರು. ಈ ಸಂಬಂಧ ಸಾರಿಗೆ ಇಲಾಖೆ ಜಂಟಿ ಆಯುಕ್ತ ಹಾಲಿಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವಾಹನಗಳ ನಂಬರ್ ಪ್ಲೇಟ್ ತೆರವುಗೊಳಿಸಿ,ದಂಡ ಹಾಕಿದರು.
ಜನರಿಗೆ ಸಂಚಾರ ನಿಯಮ ಪಾಲನೆ ಮಾಡಿ ಅಂತ ಎಷ್ಟೇ ಅರಿವು ಮೂಡಿಸಿದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ.ಹೀಗಾಗಿ ಸಾರಿಗೆ ಇಲಾಖೆ ಅಧಿಕಾರಿಗಳೇ ಫೀಲ್ಡಿಗಿಳಿದು ತಕ್ಕ ಶಾಸ್ತಿ ಮಾಡಿದ್ರು.ಇನ್ನಾದ್ರೂ ಸ್ಟಾರ್ ನಟರ ಹೆಸ್ರು, ಸಂಘ ಸಂಸ್ಥೆಗಳ ಹೆಸ್ರು ಹಾಕೊಂಡು ಬಿಟ್ಟಿ ಶೋಕಿ ಮಾಡುವರಿಗೆ ಕಡಿವಾಣ ಬೀಳುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು.