Sunday, December 22, 2024

ಆರೋಗ್ಯ ಇಲಾಖೆ ದಾಳಿಯಲ್ಲಿ ಭ್ರೂಣ ಲಿಂಗ ಗ್ಯಾಂಗ್ ಪತ್ತೆ

ಕಲಬುರಗಿ: ಕಲಬುರಗಿ ನಗರದ ಎಸ್​ಟಿಬಿಟಿ ಬಳಿ ಮನೆಯೊಂದರ ಮೇಲೆ ಖಚಿತ ಮಾಹಿತಿ ಮೇರೆಗೆ ಡಿ.ಎಚ್ ಓ ಡಾ ರಾಜಶೇಖರ ಮಾಲಿ ನೇತೃತ್ವದಲ್ಲಿ ದಾಳಿ ನಡೆಸಿದ ವೇಳೆ ಭ್ರೂಣ ಲಿಂಗ ಪತ್ತೆ ಗ್ಯಾಂಗ್​ಯೊಂದು ಬಯಲಿಗೆ ಬಂದಿದೆ.

ಮಹಾರಾಷ್ಟ್ರದ ಉಸ್ಮಾನಬಾದ್ ಆರೋಗ್ಯ ಇಲಾಖೆ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಡಿ.ಎಚ್ ಓ ಡಾ ರಾಜಶೇಖರ ಮಾಲಿ ನೇತೃತ್ವದಲ್ಲಿ ನಿನ್ನೆ ಸಂಜೆ ಆರೋಗ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿತ್ತು. ಈ ವೇಳೆ ಭ್ರೂಣ ಲಿಂಗ ಗ್ಯಾಂಗ್​ ಪತ್ತೆಯಾಗಿದೆ.

ಮಹಾರಾಷ್ಟ್ರ ದಿಂದ ಕಲಬುರಗಿ ನಗರಕ್ಕೆ ಬಂದು ಕೆಲವರಿಂದ ಭ್ರೂಣ ಲಿಂಗ ಪರೀಕ್ಷೆ ನಡೆಸಲಾಗಿತ್ತು. ಭ್ರೂಣಲಿಂಗ ಪರೀಕ್ಷೆ ಮಾಡಿಸಿಕೊಂಡು ಹೋಗಿರೋ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಉಸ್ಮಾನಬಾದ್ ಆರೋಗ್ಯ ಇಲಾಖೆ ಸಿಬ್ಬಂದಿಗಳು, ನಿನ್ನೆ ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆಗೆ ಉಸ್ಮಾನಾಬಾದ್ ಆರೋಗ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದರು.

ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆಯೊಂದರ ಬಾಡಿಗೆ ಕೋಣೆಯಲ್ಲಿ ಭ್ರೂಣಲಿಂಗ ಪರೀಕ್ಷೆ ಮಷಿನ್ ಪತ್ತೆಯಾಗಿದೆ. ದಾಳಿ ಸಮಯದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಭ್ರೂಣಲಿಂಗವನ್ನ ಈ ತಂಡ ಪತ್ತೆ ಮಾಡುತ್ತಿತ್ತು. ಸದ್ಯ ಈ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

RELATED ARTICLES

Related Articles

TRENDING ARTICLES