Saturday, August 23, 2025
Google search engine
HomeUncategorizedಎಲ್ಲಾ ಪ್ರಾದೇಶಿಕ ಭಾಷೆಗಳು ರಾಷ್ಟ್ರೀಯ ಭಾಷೆ: ಸಿಎಂ ಬೊಮ್ಮಾಯಿ

ಎಲ್ಲಾ ಪ್ರಾದೇಶಿಕ ಭಾಷೆಗಳು ರಾಷ್ಟ್ರೀಯ ಭಾಷೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಹಿಂದಿ ದಿವಸ ಆಚರಿಸದಂತೆ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿವೇಶನದಲ್ಲಿ ಮಾತನಾಡಿದ್ದಾರೆ.

ಭಾರತ ವಿವಿಧ ಭಾಷೆ, ಸಂಸ್ಕೃತಿ ಒಳಗೊಂಡಿರುವ ದೇಶವಾಗಿದೆ. ಯಾವುದೇ ಒಂದು ಭಾಷೆಯನ್ನ ಹೇರಲು ಇಲ್ಲಿ ಅವಕಾಶ ಇಲ್ಲ. ನಮ್ಮ ಪ್ರಧಾನಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಎಲ್ಲಾ ಪ್ರಾದೆಡಶಿಕ ಭಾಷೆಗಳು ರಾಷ್ಟ್ರೀಯ ಭಾಷೆ ಅಂತ ಹೇಳಿದ್ದಾರೆ. ಕನ್ನಡ ರಕ್ಷಣೆ ಮಾತ್ರವಲ್ಲ, ಬೆಳೆಸಲು ನಮ್ಮ ಪಕ್ಷ ಬದ್ದವಾಗಿದೆ ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಆತಂಕ ಪಡುವ, ರಾಜಿಯಾಗುವ ಪ್ರಶ್ನೆ ಇಲ್ಲ. ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮೀರಿ ನಿರ್ಣಯ ತೆಗೆದುಕೊಂಡಿದ್ದು, ತೆಗೆದುಕೊಳ್ಳಯತ್ತೇವೆ. ನಾವು ಕನ್ನಡವನ್ನ ಅತ್ಯಂತ ಅಗ್ರಮಾನ್ಯವಾಗಿ ಬಳಕೆ ಮಾಡ್ತಿದ್ದೇವೆ. ಇದಕ್ಕಾಗಿ ಕಾನೂನು ಕೂಡ ತರ್ತಿದ್ದೇವೆ‌. ಇದೇ ವಿಧಾನಸಭೆಯಲ್ಲಿ ಕನ್ನಡವನ್ನ ಕಾನೂನಾತ್ಮಕವಾಗಿ ಕಡ್ಡಾಯ ನಿರ್ಧರಿಸಲು ಪ್ರಥಮ ಬಾರಿ ಮಾಡಿದ್ದೇವೆ ಎಂದರು.

ಇದುವರೆಗೂ ಕನ್ನಡ ಕಡ್ಡಾಯ ಅಂತ ಹೇಳ್ತಿದ್ದೇವೆ. ಕನ್ನಡ ಬೆಳೆಸಲು ಅನ್ಯ ಭಾಷೆಯವರಿಗೆ ಒತ್ತಾಯ ಮಾಡ್ತೇವೆ‌. ಹೊಸ ಶಿಕ್ಷಣ ನೀತಿಯಲ್ಲಿ, ಪ್ರಥಮ ಬಾರಿಗೆ. ಕನ್ನಡದಲ್ಲಿ ಇಂಜಿನಿಯರಿಂಗ್ ಪ್ರಾರಂಭಿಸಿ, ಒಂದು ಸೆಮಿಸ್ಟರ್ ಕೂಡ ಮುಗಿದಿದೆ. ಹಿಂದೆಂದೂ ಈ ಪ್ರಯತ್ನ ನಡೆದಿಲ್ಲ. ಕನ್ನಡ ಬಳಸಲು ನಾವು ಬದ್ದರಾಗಿದ್ದೇವೆ ಅಂತ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular

Recent Comments