Wednesday, January 22, 2025

ಮದ್ಯದ ಅಮಲಿನಲ್ಲಿ ಹಾವು ಹಿಡಿದ ಭೂಪ: ನಾಲ್ಕು ಬಾರಿ ಕಚ್ಚಿದ ಹಾವು

ಚಿಕ್ಕೋಡಿ : ಸರ್ವರೋಗಕ್ಕೂ ಸಾರಾಯಿ ಮದ್ದು ಎಂದು ಮಧ್ಯಪ್ರಿಯರ ಮಾತು ಆದರೆ ಮಧ್ಯದ ಅಮಲಿನಲ್ಲಿಯೇ ಎಂಟು ಅಡಿಯಷ್ಟು ಉದ್ದದ ಹಾವನ್ನು ಹಿಡಿದಿರುವ ಘಟನೆ ಸಂಭವಿಸಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪಾಲಭಾವಿ ಸೊನ್ನದ್ ತೋಟದ ಅಂಗನವಾಡಿಯಲ್ಲಿ ಕಾಣಿಸಿಕೊಂಡ ಹಾವನ್ನು ರಮೇಶ್ ಬಾಗಡೆ ಎಂಬುವರು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಆದರೆ ಸುರೇಶ್ ಬಾಗಡೆ ಮಧ್ಯದ ಅಮಲಿನಲ್ಲಿಯೇ ಹಾವನ್ನು ಹಿಡಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು, ಯಾವುದೇ ಮುಂಜಾಗ್ರತ ಕ್ರಮ ಅನುಸರಿಸದೇ ಇರುವುದರಿಂದ ರಮೇಶ್ಗೆ ಮುಖ, ಗಲ್ಲಿಗೆ, ಹಾಗೂ ತುಟಿಗೆ ಮತ್ತು ಕಾಲಿಗೆ ನಾಲ್ಕು ಬಾರಿ ಹಾವು ಕಚ್ಚಿದೆ. ಅದೃಷ್ಟವಶಾತ್ ರಮೇಶ್ ಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಕಳೆದ 20 ವರ್ಷಗಳಿಂದ ಹಾವುಗಳನ್ನು ಹಿಡಿಯುತ್ತೇನೆ ಎಂದು ಹೇಳಿದ್ದಲ್ಲದೆ ಬಳ್ಳೊಳ್ಳಿ ಹಾಗೂ ನೀರನ್ನು ಸೇವಿಸುತ್ತೇನೆ ಇದರಿಂದ ನನಗೆ ಹಾವು ಕಚ್ಚಿದರೂ ಏನು ಆಗೋದಿಲ್ಲವೆಂದು ತಿಳಿಸಿದ್ದಾರೆ. ಇವರ ಧೈರ್ಯವನ್ನು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದಲ್ಲದೆ ಅರಣ್ಯ ಇಲಾಖೆ ವತಿಯಿಂದ ರಮೆಶಗೆ ಪುರಸ್ಕಾರ ನೀಡಬೇಕೆಂದು ಕೋರಿದ್ದಾರೆ.

RELATED ARTICLES

Related Articles

TRENDING ARTICLES