ಚಾಮರಾಜನಗರ: ಗರ್ಭಿಣಿ ಪತ್ನಿಗೆ ಜ್ಯೂಸ್ ನೊಟ್ಟಿಗೆ ಮದ್ಯ ಕುಡಿಸಿ ಬಳಿಕ ಕತ್ತ ಹಿಸುಕಿ ಕೊಂದಿದ್ದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಚಾಮರಾಜನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಕೊಳ್ಳೇಗಾಲ ತಾಲೂಕಿನ ರಾಚಪ್ಪಾಜಿನಗರದ ಮುತ್ತುರಾಜ್ ಎಂಬಾತ ಶಿಕ್ಷೆಗೊಳಗಾಗಿರುವ ಅಪರಾಧಿ, ಕಳೆದ 2013 ರಲ್ಲಿ ಗರ್ಭಿಣಿ ಪತ್ನಿಯನ್ನು ಕೊಂದ ಆರೋಪಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಮುತ್ತುರಾಜ್ಗೆ 2.10 ಲಕ್ಷ ರೂ. ದಂಡ ಸಮೇತವಾಗಿ ಜೀವಾವಧಿ ವಿಧಿಸಿ ಶಿಕ್ಷೆಯನ್ನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭರತಿ ಅವರು ಆದೇಶ ಹೊರಡಿಸಿದ್ದಾರೆ.
ಮುತ್ತುರಾಜ್ ವೃತ್ತಿಯಲ್ಲಿ ಟ್ರಾಕ್ಟರ್ ಚಾಲಕ, ಅದೇ ಗ್ರಾಮದ ಜ್ಯೋತಿ ಎಂಬ ಅನ್ಯಜಾತಿ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ, ಆಕೆಯ ಹಿಂದೆ ಬಿದ್ದು ಮನೆಯವರ ವಿರೋಧದ ನಡುವೆ ವಿವಾಹವಾಗಿದ್ದ ಆಸಾಮಿ, ನಂತರ ಪತ್ನಿಯ ಜತೆ ತಗಾದೆ ತೆಗೆದು ಮದುವೆ ಆಗಬಾರದಿತ್ತು ಎಂದು ನಿತ್ಯ ಮುತ್ತುರಾಜ್ ರಂಪಾಟ ಮಾಡುತ್ತಿದ್ದ.
ಇನ್ನು ಜ್ಯೋತಿ 3 ತಿಂಗಳ ಗರ್ಭಿಣಿಯಾಗಿರುವುದರಿಂದ ತವರು ಮನೆಗೆ ಹೋಗಿ ಬಾ ಎಂದು ಪುಸಲಾಯಿಸಿ ಬೈಕ್ನಲ್ಲಿ ಕರೆದೊಯ್ಯುವಾಗ ಮಾರ್ಗ ಮಧ್ಯೆ ಜ್ಯೂಸ್ ನೊಟ್ಟಿಗೆ ಮದ್ಯ ಸೇರಿಸಿ ಕುಡಿಸಿ ಬಳಿಕ ಆಕೆಯ ವೀಲ್ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದ. ಗುರುತು ಪತ್ತೆಯಾಗದಿರಲೆಂದು ಎಡಕೆನ್ನೆಯನ್ನು ಸುಟ್ಟು ಪರಾರಿಯಾಗಿದ್ದನು.
ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುತ್ತುರಾಜ್ ನನ್ನು ಬಂಧಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನಿರಂತರ ವಿಚಾರಣೆ ನಡೆದು ಮುತ್ತುರಾಜ್ನ ಅಪರಾಧ ಸಾಬೀತಾದ ಹಿನ್ನೆಲೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರು, ಸರ್ಕಾರದ ಪರವಾಗಿ T.H.ಲೋಲಾಕ್ಷಿವಾದ ಮಂಡಿಸಿದ್ದರು.