Sunday, December 22, 2024

ಸರ್ಕಾರದ ತಾಕತ್ತು ವಿಪಕ್ಷದ ಧಮ್ ಪ್ರದರ್ಶನಕ್ಕೆ ಅಖಾಡ ರೆಡಿ

ಬೆಂಗಳೂರು : ಇಂದು ಪಕ್ಷಕ್ಕೆ ಬಿಸಿ ಮುಟ್ಟಿಸಲು ಕಾಂಗ್ರೆಸ್‌-ಜೆಡಿಎಸ್‌ ಪ್ಲ್ಯಾನ್ ಮಾಡಿದ್ದು, ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಕ್ಕೆ ಕಾಂಗ್ರೆಸ್​​ ಸಿದ್ಧವಾಗಿದೆ.

ಮಳೆಗಾಲದ ಅಧಿವೇಶನಕ್ಕೆ ಮಳೆಗಾಲದ ತೊಂದರೆಗಳೇ ಅಸ್ತ್ರವಾಗಿದ್ದು, ಸರ್ಕಾರದ ವಿರುದ್ಧ ಮುಗಿಬೀಳಲು ಕಾಂಗ್ರೆಸ್​​ ತಯಾರಾಗಿದೆ. ಬೊಮ್ಮಾಯಿ ಸರ್ಕಾರವನ್ನು ಕಟ್ಟಿಹಾಕಲು ಎಲ್ಲಾ ರೀತಿಯಲ್ಲಿ ತಯಾರಿ ನಡೆಸಿದ್ದು, ಗುತ್ತಿಗೆದಾರ ಸಂಘ ಮಾಡಿರುವ 40% ಕಮಿಷನ್ ಆರೋಪ, ರಾಜ್ಯದಲ್ಲಿ ಪದೇ ಪದೇ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ.

ಇತ್ತೀಚೆಗೆ ನಡೆದ ಕೊಲೆ ಪ್ರಕರಣ ಕಾಂಗ್ರೆಸ್​​​​ಗೆ ಪ್ರಮುಖ ಅಸ್ತ್ರವಾಗಿದ್ದು, ಅತಿವೃಷ್ಟಿ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಸರ್ಕಾರ ಸ್ಪಂದಿಸಿಲ್ಲ. ಬೆಂಗಳೂರು ಮಳೆ ಅನಾಹುತ ಬಗ್ಗೆ ಪ್ರಸ್ತಾಪ ಮಾಡಲು ತೀರ್ಮಾನಿಸಿದ್ದು, ಕಾಂಗ್ರೆಸ್​​​ಗೆ ಕೌಂಟರ್ ಕೊಡಲು ಸಿದ್ಧವಾಗಿರುವ ಬಿಜೆಪಿ ಸಿದ್ದರಾಮಯ್ಯ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಪ್ರಸ್ತಾಪ, ಅರ್ಕಾವತಿ ಲೇಔಟ್ ರೀಡೂ ಪ್ರಕರಣ ಪ್ರಸ್ತಾಪ ಮಾಡಲು CM ಟೀಂ ರೆಡಿಯಾಗಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದಿದ್ದ ಹಾಸಿಗೆ-ದಿಂಬು ಹಗರಣ ಪ್ರಸ್ತಾಪಿಸಲಾಗುತ್ತಿದೆ.

RELATED ARTICLES

Related Articles

TRENDING ARTICLES