Monday, December 23, 2024

7 ದಿನದೊಳಗೆ ತೆರವುಗೊಳಿಸದಿದ್ದರೆ, ಬೆಂಗಳೂರಿನಲ್ಲಿ ಆಪರೇಷನ್ ಬುಲ್ಡೋಜರ್

ಬೆಂಗಳೂರು: ಭಾರಿ ಮಳೆಗೆ ಬೆಂಗಳೂರಿನಲ್ಲಿ ಹಲವು ನಗರಗಳು ಜಲಾವೃತ ಹಿನ್ನಲೆಯಲ್ಲಿ ಇಂದು ಮಹಾದೇವಪುರ ಒತ್ತುವರಿ ತೆರವು ಕಾರ್ಯಚರಣೆ ಬಿರುಸಿನಿಂದ ಸಾಗಿತು.

ಈ ಬಗ್ಗೆ ಮಾಧ್ಯಮಗಳಿಗೆ ಮಹಾದೇವಪುರ ವಲಯದ ಚೀಫ್ ಇಂಜಿನಿಯರ್ ಬಸವರಾಜ್ ಕಬಾಡೆ ಮಾತನಾಡಿ, ಚಿನ್ನಪ್ಪನಹಳ್ಳಿ ಕೆರೆಯಿಂದ ಮುನೇನಕೊಳಲು ತನಕ ತೆರವು ಕಾರ್ಯಚರಣೆ ನಡೆಯುತ್ತಿದೆ. ಗುರುತು ಮಾಡಿದ ಕೆಲವು ಅಕ್ರಮ ಕಟ್ಟಡಗಳನ್ನು ತೆರವು ಕಾರ್ಯಚರಣೆ ಮಾಡಲಾಗುತ್ತಿದೆ.

ಸ್ಪೈಸ್ ಗಾರ್ಡನ್ ಬಳಿ 20 ಬಿಲ್ಡಿಂಗ್, ಚಿನ್ನಪ್ಪನಹಳ್ಳಿಯಲ್ಲಿ 5 ಬಿಲ್ಡಿಂಗ್​ಗಳು ಹಾಗೂ ಚಿನ್ನಪ್ಪನಹಳ್ಳಿಯಲ್ಲಿ 2 ರಿಂದ 5 ಮೀಟರ್ ಒತ್ತುವರಿ ಮಾಡಿಕೊಂಡಿದ್ದಾರೆ. ಇನ್ಮುಂದೆ ಒತ್ತುವರಿಯಾದ ಜಾಗದಲ್ಲಿ ಬೃಹತ್ ನೀರುಗಾಲುವೆ ಕಾಂಪೌಂಡ್ ಕಟ್ಟಿಕೊಂಡು ಬರ್ತಿವಿ ಎಂದರು.

ಇನ್ನು ಒತ್ತುವರಿಯಾದ ಜಾಗ ಖಾಲಿ ಮಾಡಲು ಕಂದಾಯ ಇಲಾಖೆ ನೋಟಿಸ್ ನೀಡುತ್ತದೆ. ನೋಟಿಸ್ ಕೊಟ್ಟ 7 ದಿನಕ್ಕೆ ಬುಲ್ಡೋಜರ್ ನಿಂದ ತೆರವು ಕಾರ್ಯಚರಣೆ ಮತ್ತೆ ಶುರುವಾಗುತ್ತದೆ ಎಂದು ಕಬಾಡೆ ತಿಳಿಸಿದರು.

RELATED ARTICLES

Related Articles

TRENDING ARTICLES