Wednesday, November 27, 2024

ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಹೃದಯಾಘಾತದಿಂದ ನಿಧನ

ಮಧ್ಯಪ್ರದೇಶ: ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಲಘು ಹೃದಯಾಘಾತದಿಂದ ನಿಧನರಾದರು.

ಮಧ್ಯಪ್ರದೇಶದ ನರಸಿಂಗ್‌ಪುರದ ಶ್ರೀಧಾಮ ಜೋತೇಶ್ವರ ಆಶ್ರಮದಲ್ಲಿ ಇಂದು ಮಧ್ಯಾಹ್ನ 3:50 ಸುಮಾರಿಗೆ 99 ವಯಸ್ಸಿನ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಅವರು ಕೊನೆಯುಸಿರೆಳೆದರು. ಶಂಕರಾಚಾರ್ಯ ಅವರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ.

ಸ್ವಾಮಿ ಶಂಕರಾಚಾರ್ಯರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋಗಿದ್ದರು. ಅದೇ ಸಮಯದಲ್ಲಿ, ಅವರು ರಾಮ ಮಂದಿರ ನಿರ್ಮಾಣಕ್ಕಾಗಿ ಸುದೀರ್ಘ ಕಾನೂನು ಹೋರಾಟವನ್ನೂ ನಡೆಸಿದರು.

1300 ವರ್ಷಗಳ ಹಿಂದೆ ಆದಿ ಗುರು ಭಗವಾನ್ ಶಂಕರಾಚಾರ್ಯರು ಹಿಂದೂಗಳನ್ನು ಹಾಗೂ ಧರ್ಮ ಪ್ರಚಾರಪಡಿಸಲು ಮತ್ತು ಧರ್ಮದ ಉನ್ನತಿಗಾಗಿ ಇಡೀ ದೇಶದಲ್ಲಿ 4 ಧಾರ್ಮಿಕ ಮಠಗಳನ್ನು ಮಾಡಿದರು. ಈ ನಾಲ್ಕು ಮಠಗಳಲ್ಲಿ ಒಂದಾದ ಶಂಕರಾಚಾರ್ಯರು ಜಗದ್ಗುರು ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ದ್ವಾರಕಾ ಮಠ ಮತ್ತು ಜ್ಯೋತಿರ್ ಮಠವು ಆಗಿವೆ.

RELATED ARTICLES

Related Articles

TRENDING ARTICLES