Monday, December 23, 2024

KSRTC ನೌಕರರಿಗೆ ಗುಡ್​​​​ ನ್ಯೂಸ್​

ಬೆಂಗಳೂರು :  ಮುಂದಿನ ತಿಂಗಳ 1ನೇ ತಾರೀಖಿನಂದೇ KSRTC ನೌಕರರಿಗೆ ವೇತನ ಸಿಗಲಿದೆ .

ಕೋವಿಡ್​​​ ಕಾರಣದಿಂದ ಕಳೆದ ಎರಡು ವರ್ಷದಿಂದ ನೌಕರರಿಗೆ ವೇತನ ವಿಳಂಬವಾಗ್ತಿತ್ತು. ಇದೀಗ ನಿಗಮ ಸಹಜ ಸ್ಥಿತಿಗೆ ಮರುಕಳಿಸಿದ ಹಿನ್ನೆಲೆಯಲ್ಲಿ ನೌಕರರ ವೇತನವನ್ನು ತಿಂಗಳ ಮೊದಲ ದಿನವೇ ಪಾವತಿಸಲು ತೀರ್ಮಾನ ಮಾಡಲಾಗಿದೆ.

ಅದಲ್ಲದೇ, ಅಕ್ಟೋಬರ್​​​​​ 1ನೇ ತಾರೀಖು ಸಂಬಳ ಪಾವತಿ ಮಾಡುವಂತೆ KSRTC ಎಂ.ಡಿ ವಿ. ಅನ್ಬುಕುಮಾರ್ ಆದೇಶ ಮಾಡಿದ್ದಾರೆ. ಪ್ರತಿ ತಿಂಗಳ 1ನೇ ತಾರೀಖಿನಂದು ಚಾಲಕ , ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಸೇರಿದಂತೆ ಎಲ್ಲಾ ಸಿಬ್ಬಂದಿಗೆ ವೇತನ ಪಾವತಿ ಮಾಡುವಂತೆ ಸೂಚನೆ ನೀಡಲಾಗಿದೆ.

RELATED ARTICLES

Related Articles

TRENDING ARTICLES