Monday, January 6, 2025

ಕಲುಷಿತ ನೀರಿಗೆ ಇಬ್ಬರು ಬಲಿ, 70 ಜನ ಆಸ್ಪತ್ರೆಗೆ

ಕಲಬುರಗಿ:  ಜಿಲ್ಲೆ ಜೇವರ್ಗಿ ತಾಲೂಕಿನ ಮಂದೆವಾಲ್ ಗ್ರಾಮದಲ್ಲಿ ಸುಮಾರು 10 ಸಾವಿರ ಜನಸಂಖ್ಯೆಯಿದೆ. ಈ ಗ್ರಾಮದ ಜನರಿಗೆ ಕಳೆದ ಕೆಲ ದಿನಗಳಿಂದ‌ ಕಲುಷಿತ ನೀರು ಸರಬರಾಜು ಮಾಡಲಾಗುತ್ತಿತ್ತು.‌ ಇದರ‌ ಪರಿಣಾಮ ಶುಕ್ರವಾರ ರಾತ್ರಿ ಕಲುಷಿತ ನೀರು ಕುಡಿದು 70ಕ್ಕೂ ಹೆಚ್ಚು ಜನ ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದಾರೆ. ಮತ್ತೊಂದೆಡೆ ಇದೇ ಗ್ರಾಮದ 70 ವರ್ಷದ ವೃದ್ಧ ತಾಯಪ್ಪ ಕಲುಷಿತ ನೀರು ಸೇವಿಸಿ ಸಾವನಪ್ಪಿದ್ದಾನೆ. ಇದರಿಂದ ಕೆರಳಿದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮತ್ತೊಂದೆಡೆ ಕಳೆದ ಕೆಲ ದಿನಗಳಿಂದ ಕಲಬುರಗಿ ಜಿಲ್ಲೆಯಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಹಳ್ಳ ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿದ್ದು, ಬಟ್ಟೆ ತೊಳೆಯಲು ಹೋಗಿದ್ದ ಯುವತಿ ಹಳ್ಳದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾಳೆ.ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮದ ದಾನೇಶ್ವರಿ ಮೃತ ದುರ್ದೈವಿ. ಮತ್ತೊಂದೆಡೆ‌ ಹಲವು ಗ್ರಾಮಗಳು ಜಲಾವೃತವಾಗಿವೆ. ಹಲವೆಡೆ ಜಾನುವಾರು ಹಳ್ಳದಲ್ಲಿ ಸಿಲುಕಿ ಮನೆಯ ದಾರಿ ಸಿಗದೆ ನಾಪತ್ತೆಯಾಗಿರವೆ.

ಒಟ್ಟಾರೆ ಒಂದು ಕಡೆ ಮಳೆಯಬ್ಬರ ಇನ್ನೊಂದು ಕಡೆ ಕಲುಷಿತ ನೀರಿನ ಅವಾಂತರ ಕಲಬುರಗಿ ಜಿಲ್ಲೆಯ ಜನತೆಯನ್ನು ಕಂಗೆಡಿಸಿದೆ.

ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ

RELATED ARTICLES

Related Articles

TRENDING ARTICLES