ದಿನದಿಂದ ದಿನಕ್ಕೆ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ತಿದೆ. ಹೀಗಾಗಿ 2024ರ ಲೋಕಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದೆ.
ಗಾಂಧಿ ಕುಟುಂಬದ ನಾಯಕತ್ವದಲ್ಲಿ ತನ್ನ ಸ್ಥಿರತೆಯನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಹೊಸ ರೂಪದೊಂದಿಗೆ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಅನೇಕ ಸರ್ಕಸ್ ಮಾಡುತ್ತಿದೆ. ಭಾರತ್ ಜೋಡೋ ಯಾತ್ರೆ ಎಂದು ಹೆಸರಿನಲ್ಲಿ ಕಾಂಗ್ರೆಸ್ ಕಳೆದ ಬುಧವಾರ ತಮಿಳುನಾಡಿನ ಕನ್ಯಾಕುಮಾರಿಯಿಂದ ಬರೋಬ್ಬರಿ 3,570-ಕಿಮೀ ಪಾದಯಾತ್ರೆಯನ್ನು ಪ್ರಾರಂಭಿಸಿತು. ಮೆರವಣಿಗೆಯು 5 ತಿಂಗಳವರೆಗೆ ಇರುತ್ತದೆ. ಶ್ರೀನಗರದಲ್ಲಿ ಮುಕ್ತಾಯಗೊಳ್ಳುವ ಮೊದಲು 12 ರಾಜ್ಯಗಳಿಗೆ ಈ ಯಾತ್ರೆ ಹೋಗುತ್ತದೆ. ಈ ಪಾದಯಾತ್ರೆಗೆ ಬೆಂಗಾವಲು ಪಡೆ ವಾಹನ ಇರುತ್ತದೆ. ಇವುಗಳನ್ನು ಹಾಸಿಗೆಗಳ ಲಭ್ಯತೆಗಳು ಮತ್ತು ವಸ್ತ್ರಗಳನ್ನು ಬದಲಾವಣೆ ಮಾಡಲು ಇದನ್ನು ಉಪಯೋಗಿಸಲಾಗಿದೆ.
ಟ್ರಕ್‌ಗಳಲ್ಲಿ ಅಳವಡಿಸಲಾಗಿರುವ ಈ ಕಂಟೈನರ್‌ಗಳಲ್ಲಿ ಕಾಂಗ್ರೆಸ್ ನಾಯಕರು ಮಲಗುತ್ತಾರೆ. ಜೊತೆಗೆ ರಸ್ತೆಬದಿಗಳಲ್ಲಿ ಬಿಡಾರ ಹಾಕುತ್ತಾರೆ. ಈ ಐಷಾರಾಮಿ ಕಂಟೈನರ್‌ಗಳು ಹವಾನಿಯಂತ್ರಣಗಳು ಮತ್ತು ಆಧುನಿಕ ಸೌಕರ್ಯಗಳನ್ನು ಹೊಂದಿವೆ. ಅವುಗಳಲ್ಲಿ ಒಂದನ್ನು ಮಿನಿ ಕಾನ್ಫರೆನ್ಸ್ ಹಾಲ್ನ್ನಾಗಿ ಪರಿವರ್ತಿಸಲಾಗಿದೆ. ಪಾದಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ಅವರ ಬಳಿಯೇ ಈ ಕಂಟೈನರ್ ಇದೆ. ಗಾಂಧಿ ಕುಟುಂಬಕ್ಕೆ ಕಂಟೈನರ್ ಒಂದು ಹಾಸಿಗೆ, ಅಟ್ಯಾಚ್ಡ್ ಬಾತ್ರೂಮ್ ಮತ್ತು ಮಂಚವನ್ನು ಹೊಂದಿದೆ. ಇದು ಹಳದಿ ಬಣದಿಂದ ಕೂಡಿದೆ. ಅವರ ಭದ್ರತಾ ತಂಡವು ಕಂಟೈನರ್ ಸಂಖ್ಯೆ 2ರಲ್ಲಿ ಇರುತ್ತಾರೆ. ಅವರ ಬಟ್ಟೆ, ಅವರ ಅಲಂಕಾರ ಸಾಮಾಗ್ರಿಗಳನ್ನು ಕಂಟೈನರ್ ಸಂಖ್ಯೆ 4 ರಲ್ಲಿ ಇರಿಸಲಾಗಿದೆ.