ದೊಡ್ಡಬಳ್ಳಾಪುರ: ಮಂಗಳೂರಿನ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ನನ್ನ ಕಚೇರಿಯಲ್ಲಿ ಕೊಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಜನಸ್ಪಂದನ ಸಮಾವೇಶದಲ್ಲಿ ಘೋಷಣೆ ಮಾಡಿದರು.
ಕೆಲವು ತಿಂಗಳ ಹಿಂದೆ ಪ್ರವೀಣ್ ನೆಟ್ಟಾರು ಅವ್ರನ್ನ ದುಷ್ಕರ್ಮಿಗಳು ಕೊಲೆಗೈದಿದ್ದರು. ಇದಕ್ಕೆ ದೇಶದ್ಯಾಂತ ಆಕ್ರೋಶ ವ್ಯಕ್ತವಾಗಿತ್ತು. ಈಗ ಪ್ರವೀಣ್ ನೆಟ್ಟಾರು ಪತ್ನಿಗೆ ಕೆಲಸ ಕೊಡುವುದನ್ನ ಘೋಷಣೆಯನ್ನ ಬೊಮ್ಮಾಯಿ ಅವರು ಮಾಡಿದ್ದಾರೆ.
ಅಂತೆಯೇ ಮಾತನಾಡಿದ ಸಿಎಂ, ಬೆಂಗಳೂರಿನಲ್ಲಿ 3 ಹೊಸ ಸ್ಯಾಟಲೈಟ್ ನಗರ ಆರಂಭವಾಗಿದೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ನಮ್ಮ ಗುರಿ ಹೊಂದಿದ್ದೇವೆ. ಕಾಂಗ್ರೆಸ್ ಭ್ರಷ್ಟಾಚಾರವನ್ನು ರಾಜ್ಯದ ಜನತೆ ನೋಡಿದ್ದಾರೆ, ಮುಂದೆಯೂ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದೆ, ಧೈರ್ಯವಿದ್ದರೆ, ತಾಕತ್ ಇದ್ದರೆ ನಮ್ಮ ಓಟ ನಿಲ್ಲಿಸಿ ಎಂದು ಸಿಎಂ ಹೇಳಿದರು.
ಪ್ರಧಾನಿ ಮೋದಿ ಕೃಪೆಯಿಂದ ರಾಜ್ಯದಲ್ಲೂ ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿ ಪರ್ವ ಆರಂಭವಾಗಿದೆ. 2023ಕ್ಕೂ ಕರ್ನಾಟಕದಲ್ಲಿ ಬಿಜೆಪಿ ಬಾವುಟವೇ ಹಾರಾಡಲಿದೆ. ಜನರ ವಿಶ್ವಾಸದಿಂದ ಹಿಂದೆಯೂ ಬಿಜೆಪಿಗೆ ಹೆಚ್ಚು ಸ್ಥಾನ ಬಂದಿದೆ. ಆದರೆ ಕಾಂಗ್ರೆಸ್ ಸಂವಿಧಾನ ವಿರೋಧಿ ಸರ್ಕಾರ ರಚಿಸಿದ್ದರು. ಇಬ್ಬರೂ ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದರು, ಆಗ ಎಲ್ಲಿತ್ತು ಸಿದ್ದರಾಮಯ್ಯಗೆ ನೈತಿಕತೆ ಎಲ್ಲಿತ್ತು. ಜನರ ಬಳಿ ಹೋಗಿ ಬೆಂಬಲ ಪಡೆಯುವ ವಿಶ್ವಾಸ ನಮಗಿತ್ತು. ನಮ್ಮ ಪಕ್ಷದಿಂದ 17 ಶಾಸಕರು ಯಡಿಯೂರಪ್ಪಗೆ ಬೆಂಬಲ ನೀಡಿದ್ರು, ಮತ್ತೆ ನಮ್ಮ ಸರ್ಕಾರವೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು ಎಂದು ಸಿದ್ದು ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದೆಉ.
ಕೊವಿಡ್ನಂತ ಸಂಕಷ್ಟದಲ್ಲೂ ಬಿಜೆಪಿ ಜನರ ಕೈ ಬಿಡಲಿಲ್ಲ, ಪಡಿತರ ವಸ್ತು, ಚುಚ್ಚು ಮದ್ದನ್ನು ನೀಡಲಾಯ್ತು. ಈ ವೇಳೆ ಕಾಂಗ್ರೆಸ್ ಸರ್ಕಾರ ಇದ್ದರೆ ನರಕವಾಗುತ್ತಿತ್ತು. ಮೋದಿ, ಯಡಿಯೂರಪ್ಪ ಸರ್ಕಾರದಿಂದ ಸಹಾಯ ಸಿಗ್ತು, ಅನ್ನಭಾಗ್ಯದಲ್ಲಿ ಎಷ್ಟು ಅವ್ಯವಹಾರ ಸಿದ್ದರಾಮಯ್ಯ ಅವರು ನಡೆಸಿದರು ಎಂಬುದು ರಾಜ್ಯದ ಜನ್ರಿಗೆ ಗೊತ್ತಿದೆ. ಈ ಬಗ್ಗೆ ತನಿಖೆ ಮಾಡುತ್ತಿದ್ದ ಅಧಿಕಾರಿಯ ಹತ್ಯೆಯಾಯಿತು, ಇದೇನಾ ನಿಮ್ಮ ಸ್ವಚ್ಛ ಆಡಳಿತದ ಮಾದರಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಮರಳು ಗಣಿಗಾರಿಕೆ, ಕೊಳವೆ ಬಾವಿಯಲ್ಲಿ ಹಗರಣ, ಪರಿಶಿಷ್ಟ ವರ್ಗದ ಹಾಸಿಗೆ, ದಿಂಬಿನಲ್ಲಿ ಹಗರಣ, ಅವರದ್ದು ಶೇ.100ರಷ್ಟು ಕಮಿಷನ್ ಸರ್ಕಾರ, ಭ್ರಷ್ಟ ಅಧಿಕಾರಿಗಳ ಮೇಲೆ ಯಾವ ಕ್ರಮವೂ ಜರುಗಿಸಲಿಲ್ಲ. ಪಿಎಸ್ಐ ನೇಮಕಾತಿ ಹಗರಣದ ಸೂತ್ರದಾರ ಕಾಂಗ್ರೆಸ್, ಶಿಕ್ಷಕರ ನೇಮಕಾತಿಯಲ್ಲೂ ಪರೀಕ್ಷೆ ಇಲ್ಲದೆ ನೇಮಕಾತಿ ಮಾಡಲಾಯಿತು. ಇವೆಲ್ಲವೂ ಕಾಂಗ್ರೆಸ್ ಸರ್ಕಾರದ ದುರಾಡಳಿತ ಎಂದು ಸಿಎಂ ಕಿಡಿಕಾರಿದರು.