Friday, April 19, 2024

ಬ್ರಿಟನ್ ರಾಣಿ 2ನೇ ಎಲಿಜಬೆತ್ ನಿಧನ

ಬ್ರಿಟನ್​ : ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ 2ನೇ ಎಲಿಜಬೆತ್ ಅವರು, ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಬ್ರಿಟನ್​ನ ಬಲ್​ಮೋರಾಲ್​ನಲ್ಲಿ ಕೊನೆಯುಸಿರೆಳೆದಿದ್ದು, ಬ್ರಿಟನ್‌ನಲ್ಲಿ 10 ದಿನಗಳ ಕಾಲ ಶೋಕಾಚರಣೆ ಇರಲಿದೆ. 1953ರಿಂದ ಬ್ರಿಟನ್​ ರಾಣಿಯಾಗಿದ್ದ ಎಲಿಜಬೆತ್, ಬ್ರಿಟಿಷ್​ ಇತಿಹಾಸದಲ್ಲೇ ಸುದೀರ್ಘಾವಧಿಗೆ ರಾಣಿಯಾಗಿದ್ದರು. ದೀರ್ಘಕಾಲ ಸೇವೆ ಸಲ್ಲಿಸಿದ್ದ ಬ್ರಿಟಿಷ್ ರಾಣಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು.

ಅದಲ್ಲದೇ, ಏಳು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಎಲಿಜಬೆತ್, ತಂದೆ ಕಿಂಗ್ ಜಾರ್ಜ್​​ VI ನಿಧನದ ನಂತರ ರಾಣಿ ಪಟ್ಟ ಅಲಂಕರಿಸಿದ್ದರು. ರಾಣಿ ಎಲಿಜಬೆತ್‌ಗೆ 8 ಮೊಮ್ಮಕ್ಕಳು, 12 ಮರಿ ಮಕ್ಕಳಿದ್ದಾರೆ. ಹಿರಿಯ ಮಗ ಚಾರ್ಲ್ಸ್​​​ ರಾಜನಾಗಿ ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ.

RELATED ARTICLES

Related Articles

TRENDING ARTICLES