Friday, April 19, 2024

ಐಟಿ-ಬಿಟಿ ನೌಕರರಿಗೆ ವರ್ಕ್ ಫ್ರಂ ಹೋಂ ಮುಂದುವರಿಕೆಗೆ ಚಿಂತನೆ

ಬೆಂಗಳೂರು: ಬೆಂಗಳೂರಿನಲ್ಲಿ ಸುರಿದ ನಿರಂತರ ಮಳೆಯ ಹಿನ್ನಲೆಯಲ್ಲಿ ನಗರದ ಬಹುತೇಕ ಐಟಿ-ಬಿಟಿ ಕಂಪನಿಗಳ ಸಿಬ್ಬಂದಿಗಳಿಗೆ ವರ್ಕ್ ಫ್ರಂ ಹೋಂ ಮುಂದುವರಿಕೆ ಮಾಡಲು ಚಿಂತನೆ ನಡೆಸಿವೆ.

ನಗರದ 500ಕ್ಕೂ ಹೆಚ್ಚು ಐಟಿ-ಬಿಟಿ ಕಂಪನಿಗಳಿಗೆ ಮಳೆ ನೀರು ನುಗ್ಗಿ ಅವಾಂತರವಾಗಿವೆ. ಸೆಪ್ಟೆಂಬರ್​ 5 ರಿಂದ ವರ್ಕ್ ಹೋಂ ವಿವಿಧ ಐಟಿ ಕಂಪನಿಗಳು ನೀಡಿದ್ದು, ಇದನ್ನ ಮತ್ತೆ ಮುಂದುವರೆಸಲು ತೀರ್ಮಾನಿಸಿವೆ.

ಸದ್ಯ ಕಂಪನಿಗಳ ಒಳಗೆ ನೀರು ನುಗ್ಗಿ, ವಸ್ತುಗಳು ಹಾನಿಗೊಳಗಾಗಿವೆ, ಎಲೆಕ್ಟ್ರಾನಿಕ್ ಸಾಮಾಗ್ರಿಗಳು ಮಳೆ ನೀರಿಗೆ ಆಹುತಿಯಾಗಿವೆ. ಸರ್ವರ್ ಸಮಸ್ಯೆ ಎದುರಾಗಿದ್ದು ಕೋಟ್ಯಾಂತರ ರೂ ನಷ್ಟವಾಗಿದೆ. ನಷ್ಟದ ಅಂಕಿ-ಅಂಶ ಕುರಿತು ಮುಂದಿನ ವಾರ ಸಭೆ ನಡೆಯಲಿದೆ. ಆಗಸ್ಟ್ ನಲ್ಲಿ ಒಂದೇ ದಿನ ಸುರಿದ ಮಳೆಗೆ ಸುಮಾರು 225 ಕೋಟಿ ರೂ. ಐಡಿಕಂಪನಿಗಳಿಗೆ ನಷ್ಟ ಅನುಭವಿಸಿವೆ.

ಸದ್ಯ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ನೀಡಿದ್ದ ಹಿನ್ನೆಲೆ ಕೆಲಸಕ್ಕೆ ಯಾವುದೇ ತೊಂದರೆ ಆಗಿಲ್ಲ, ಮನೆಯಿಂದಲೇ ಕೆಲಸ ಮುಂದುವರಿಕೆ ಮಾಡಲು ಎಲ್ಲಾ ಐಟಿ ಕಂಪನಿಗಳ ಮಾಲಿಕರು ತಿರ್ಮಾನ ಮಾಡಿದ್ದಾರೆ. ತಮ್ಮ ಕಂಪನಿಗಳ ನಷ್ಟದ ಬಗ್ಗೆ ಸ್ಪಷ್ಟ ಅಂಕಿ ಅಂಶ ಸಭೆ ನಡೆಸಿದ ಬಳಿಕ ವಿವಿಧ ಕಂಪನಿಗಳು ನೀಡಲಿದ್ದು, ಔಟರ್ ರಿಂಗ್ ರೋಡ್ ಕಂಪನೀಸ್ ಅಸೋಸಿಯೇಶನ್ ಮಾಹಿತಿ ನೀಡಿದೆ.

RELATED ARTICLES

Related Articles

TRENDING ARTICLES