Monday, May 13, 2024

ಮೌಳಿ, ಬನ್ಸಾಲಿ ಜಾಡಿನಲ್ಲಿ ಮಣಿರತ್ನಂ ಚೋಳ ಸಾಮ್ರಾಜ್ಯ

ಅಬ್ಬಬ್ಬಾ.. ತಂತ್ರಜ್ಞಾನ ಬೆಳೆದಂತೆ ಫಿಲ್ಮ್ ಮೇಕರ್ಸ್​ ಕೂಡ ಅಪ್ಡೇಟ್​ ಆಗ್ತಿದ್ದಾರೆ. ಅಡ್ವಾನ್ಸ್ಡ್ ಟೆಕ್ನಾಲಜಿಯಿಂದ ಪ್ರೇಕ್ಷಕರಿಗೆ ಗತವೈಭವಗಳ ರಸಾನುಭವವನ್ನು ಉಣಬಡಿಸ್ತಿದ್ದಾರೆ. ಸದ್ಯ ಸಾವಿರ ವರ್ಷಗಳ ಹಿಂದಿನ ಚೋಳ ಸಾಮ್ರಾಜ್ಯದ ಭಯಾನಕ ಹಾಗೂ ಭೀಭತ್ಸ ರೋಚಕ ಯುದ್ಧ ಕದನಗಳು ಬೆಳ್ಳಿಪರದೆ ಬೆಳಗಲಿವೆ. ಅದಕ್ಕಾಗಿ ರಾಜಮೌಳಿ ಹಾಗೂ  ಬನ್ಸಾಲಿ ಜಾಡು ಹಿಡಿದಿದ್ದಾರೆ ಡೈರೆಕ್ಟರ್ ಮಣಿರತ್ನಂ.

  • ಸಾವಿರ ವರ್ಷಗಳ ಹಿಂದಿನ ಭಯಾನಕ ಯುದ್ಧ ದೃಶ್ಯಕಾವ್ಯ..!
  • 500 ಕೋಟಿ ಬಜೆಟ್ ಚಿತ್ರದಲ್ಲಿ 5 ಮಂದಿ ಸೂಪರ್ ಸ್ಟಾರ್ಸ್​

ಬರೋಬ್ಬರಿ ಒಂದು ಸಾವಿರ ವರ್ಷಗಳ ಹಿಂದೆ, ಚೋಳರ ಸುವರ್ಣಯುಗ ಆರಂಭವಾಗೋಕೂ ಮುನ್ನ, ಆಕಾಶದಲ್ಲೊಂದು ಧೂಮಕೇತು ಕಾಣಿಸಿಕೊಂಡಿತ್ತು. ಆ ಧೂಮಕೇತು ಚೋಳ ರಾಜರ ರಕ್ತವನ್ನು ಬಲಿ ತೆಗೆದುಕೊಳ್ಳುತ್ತೆ ಅಂತ ಜ್ಯೋತಿಷಿಗಳು ಭವಿಷ್ಯ ನುಡಿದ್ರು. ರಾಜ್ಯವನ್ನು ಮುತ್ತಿಗೆ ಹಾಕಿತ್ತು ದ್ವೇಷ. ಸಮುದ್ರಗಳು ಉಕ್ಕೇರಿದವು. ಅರಮನೆಗೆ ನುಗ್ಗಿತು ವಂಚನೆ. ಆಗ ಶುರುವಾಗಿದ್ದೇ ಈ ಪೊನ್ನಿಯಿನ್ ಸೆಲ್ವನ್ ಮಹಾ ಕದನ.

ಯೆಸ್.. ಇದು ಬೆಳ್ಳಿ ಪರದೆ ಬೆಳಗಲು ಸಜ್ಜಾಗಿರೋ ಚೋಳ ಸಾಮ್ರಾಜ್ಯದ ಗತವೈಭವದ ಮಹಾ ದೃಶ್ಯಕಾವ್ಯ ಪೊನ್ನಿಯಿನ್ ಸೆಲ್ವನ್ ಚಿತ್ರದ ಟ್ರೈಲರ್ ಝಲಕ್. ಬರೋಬ್ಬರಿ 500 ಕೋಟಿ ಬೃಹತ್ ವೆಚ್ಚದಲ್ಲಿ ತಯಾರಾದ ಈ ಚಿತ್ರ, ಭಾರತೀಯ ಚಿತ್ರರಂಗದಲ್ಲಿ ರಾಜಮೌಳಿ ಹಾಗೂ ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗಳಂತೆ ಬಹುದೊಡ್ಡ ಇಂಪ್ಯಾಕ್ಟ್ ಕ್ರಿಯೇಟ್ ಮಾಡ್ತಿದೆ.

ಪದ್ಮಶ್ರೀ ಪುರಸ್ಕೃತ, ಆರು ಬಾರಿ ನ್ಯಾಷನಲ್ ಅವಾರ್ಡ್ಸ್ ಪಡೆದಂತಹ ಮೇರು ನಿರ್ದೇಶಕ ಮಣಿರತ್ನಂ ಅವ್ರು ಈ ಮಹಾದೃಶ್ಯಕಾವ್ಯವನ್ನು ತೆರೆಗೆ ತರ್ತಿದ್ದು, ಒಂದೊಂದು ಫ್ರೇಮ್ ಕೂಡ ವ್ಹಾವ್ ಫೀಲ್ ಕೊಡ್ತಿದೆ. ಆದಿತ್ಯ ಕರಿಕಾಲನಾಗಿ ಚಿಯಾನ್ ವಿಕ್ರಮ್, ಅವ್ರ ಆಪ್ತ ಮಿತ್ರ ವಲ್ಲಭರಾಯನ್ ವಂಡಿಯಾದೇವನಾಗಿ ಕಾರ್ತಿ, ಅರುಣ್​ಮೋಲಿ ವರ್ಮಾ ಪಾತ್ರದಲ್ಲಿ ಜಯಂ ರವಿ ಹಾಗೂ ಆತನ ಸಹೋದರಿ ಕುಂದವೈ ರೋಲ್​ನಲ್ಲಿ ತ್ರಿಶಾ ಮಿಂಚಲಿದ್ದಾರೆ.

ತಂಜಾವೂರಿನ ಯುವರಾಣಿ ನಂದಿನಿಯಾಗಿ ಐಶ್ವರ್ಯಾ ರೈ ಬಚ್ಚನ್ ಕಾಣಸಿಗಲಿದ್ದು, ಅರುಣ್​ಮೋಲಿ- ಕರಿಕಾಲ ಒಂದಾಗದಂತೆ ನೋಡಿಕೊಳ್ಳಬೇಕು ಅನ್ನೋ ಡೈಲಾಗ್ ನೋಡುಗರಿಗೆ ಸಖತ್ ಥ್ರಿಲ್ ಕೊಡ್ತಿದೆ. ಇದಲ್ಲದೆ ಸಾಕಷ್ಟು ಹಿರಿಯ ಹಾಗೂ ಕಿರಿಯ ಕಲಾವಿದರ ಮಹಾಸಮ್ಮಿಲನ ಇಲ್ಲಿ ನೋಡಬಹುದು. ನಮ್ಮ ಕನ್ನಡಿಗರಾದ ಪ್ರಕಾಶ್ ರೈ, ಕಿಶೋರ್ ಕೂಡ ಚಿತ್ರದ ಭಾಗವಾಗಿರೋದು ಖುಷಿಯ ವಿಚಾರ.

ಸಿನಿಮಾಗಾಗಿ ಹೊಸ ಸಾಮ್ರಾಜ್ಯ ಸೃಷ್ಟಿಸೋದು. ಅಲ್ಲಿನ ಪಾತ್ರಗಳನ್ನು ವೈಭವೋಪೇತವಾಗಿ ತೋರಿಸುವುದು. ಭಯಾನಕ ಯುದ್ಧ ಸನ್ನಿವೇಶಗಳನ್ನು ಕಟ್ಟಿಕೊಡೋದ್ರಲ್ಲಿ ರಾಜಮೌಳಿ ಹಾಗೂ ಸಂಜಯ್ ಲೀಲಾ ಬನ್ಸಾಲಿ ಮಾಸ್ಟರ್ಸ್​. ಇದೀಗ ಮಣಿರತ್ನಂ ಅವ್ರು ಕೂಡ ಅವ್ರ ಜಾಡನ್ನೇ ಹಿಡಿದಿದ್ದು, ಇದು ಬಾಕ್ಸ್ ಆಫೀಸ್ ರೂಲ್ ಮಾಡೋ ಮನ್ಸೂಚನೆ ನೀಡಿದೆ. ಅಲ್ಲದೆ ಎಆರ್ ರೆಹಮಾನ್​ರ ಸಂಗೀತವಿರೋ ಈ ಚಿತ್ರ ಪಂಚಭಾಷೆಯಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಇದೇ ಸೆಪ್ಟೆಂಬರ್ 30ಕ್ಕೆ ತೆರೆಗಪ್ಪಳಿಸಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ  

RELATED ARTICLES

Related Articles

TRENDING ARTICLES