ಮಂಗಳೂರು: ಭಾರತ ಇಸ್ಲಾಮೀಕರಣ ವಿಶನ್ 2047 ಪಿಎಫ್ಐ ಅಜೆಂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ ಮನೆ ಮೇಲೆ ಎನ್ಐಎ ದಾಳಿ ನಡೆಸಿದೆ.
ಬಂಟ್ವಾಳದ ಬಿಸಿ ರೋಡ್ ಬಳಿ ಇರುವ ರಿಯಾಜ್ ಇಂದು ಬೆಳ್ಳಂ ಬೆಳಿಗ್ಗೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಬೆನ್ನಲ್ಲೇ ಸ್ಥಳೀಯ ಎಸ್ಡಿಪಿಐ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯುತ್ತಿದೆ.
ಕಳೆದ ಜುಲೈ 15ರಂದು ಬಿಹಾರದ ಪಾಟ್ನಾದಲ್ಲಿ ಪತ್ತೆಯಾಗಿದ್ದ ವಿಶನ್ – 2047 ಅಜೆಂಡಾ, ಪಿಎಫ್ಐ ಮತ್ತು ಎಸ್ಡಿಪಿಐ ಕಾರ್ಯಕರ್ತರನ್ನು ಬಂಧಿಸಿದ್ದ ಬಿಹಾರ ಎಟಿಎಸ್, ದಾಳಿ ವೇಳೆ, ಭಾರತ ಇಸ್ಲಾಮೀಕರಣ ಮಾಡುವ ಭಯಾನಕ ಸ್ಕೆಚ್ ಪತ್ತೆಯಾಗಿತ್ತು. ಅತ್ತರ್ ಪರ್ವೇಜ್ ಮತ್ತು ಮಹಮ್ಮದ್ ಜಲಾಲುದ್ದೀನ್ ಎಂಬಿಬ್ಬರ ಬಂಧಿಸಲಾಗಿತ್ತು.
ಈ ಪ್ರಕರಣದ ಬಗ್ಗೆ ಉತ್ತರ ಪ್ರದೇಶ ಸೇರಿ ವಿವಿಧೆಡೆ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು, ಇಸ್ಲಾಮೀಕರಣ ಅಜೆಂಡಾ ಜಾರಿಗೆ ಪಿಎಫ್ಐ, ಎಸ್ಡಿಪಿಐ ಮುಸ್ಲಿಮರ ಬೆಂಬಲ ಕೋರಿತ್ತು. ಶೇ.10 ರಷ್ಟು ಮುಸ್ಲಿಮರು ಸಹಕಾರ ನೀಡಿದ್ರೂ ದೇಶದಲ್ಲಿ ಅಧಿಕಾರ ಸ್ಥಾಪನೆ ಎಂದಿದ್ದ ಬರಹ ಈ ವೇಳೆ ಪತ್ತೆಯಾಗಿತ್ತು. ಘಟನೆ ಬಗ್ಗೆ ಈಗ ದೇಶದ ವಿವಿಧೆಡೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.