Sunday, December 22, 2024

ಅಪ್ಪು ಆಗಮನಕ್ಕೆ ಇನ್ನೊಂದೇ ದಿನ ಬಾಕಿ.. ನಿಲ್ಲದ ಸಂಭ್ರಮ

ದಿ ವೆಯ್ಟ್ ಈಸ್ ಓವರ್. ದೇವತಾ ಮನುಷ್ಯ ರಾಜರತ್ನ ಪುನೀತ್ ರಾಜ್​ಕುಮಾರ್​ ದರ್ಶನಕ್ಕೆ ಇನ್ನೊಂದೇ ದಿನ ಬಾಕಿ. ಈಗಾಗ್ಲೇ ದೇವರಂತೆ ಪೂಜಿಸಲ್ಪಟ್ಟಿರೋ ಅಪ್ಪು, ದೇವರಾಗಿಯೇ ಬಿಗ್​ಸ್ಕ್ರೀನ್ ಎಂಟ್ರಿ ಕೊಡ್ತಿದ್ದಾರೆ. ಈ ಕುರಿತ ಲೇಟೆಸ್ಟ್ ಅಪ್ಡೇಟ್ಸ್ ಈ ಸ್ಪೆಷಲ್ ಪ್ಯಾಕೇಜ್​ನಲ್ಲಿದೆ.ನೀವೇ ಓದಿ.

  • ರಾಜರತ್ನ ಪುನೀತ್ ರಾಜ್​ಕುಮಾರ್ ದೇವರಾಗಿಯೇ ದರ್ಶನ
  • ಪ್ರೀಮಿಯರ್ ಶೋಗೆ ಬುಕಿಂಗ್ ಶುರು.. ಎಮೋಷನಲ್ ಟೈಂ

ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ ಅಪ್ಪು ಆಲ್​ಟೈಂ ದೇವತಾ ಮನುಷ್ಯ. ಯೆಸ್.. ಅಣ್ಣಾವ್ರ ಮುದ್ದಿನ ಮಗ, ದೊಡ್ಮನೆಯ ರಾಜಕುಮಾರ ಪುನೀತ್ ರಾಜ್​ಕುಮಾರ್ ಇನ್ನಿಲ್ಲ ಅನ್ನೋ ಮಾತನ್ನ ಇಂದಿಗೂ ಅರಗಿಸಿಕೊಳ್ಳೋದು ತುಸು ಕಷ್ಟವೇ ಸರಿ. ಆದ್ರೆ ಅವ್ರಿಲ್ಲ ಅನ್ನೋ ಕೊರಗನ್ನ ಅಭಿಮಾನಿ ದೇವರುಗಳು ಎಂದಿಗೂ ತೋರಿಸಿಕೊಳ್ತಿಲ್ಲ. ಸಾಕ್ಷಾತ್ ಪರಮಾತ್ಮನಂತೆ ಅವ್ರನ್ನ ಆರಾಧಿಸ್ತಿದ್ದಾರೆ.

ಹೀಗಿರುವಾಗ ಅರ್ಥಾತ್ ದೇವರಾಗಿಯೇ ಕನ್ನಡಿಗರಿಗೆ ದರ್ಶನ ಕೊಡ್ತಿದ್ದಾರೆ ಪುನೀತ್ ರಾಜ್​ಕುಮಾರ್. ಹೌದು, ಲಕ್ಕಿಮ್ಯಾನ್ ಸಿನಿಮಾ ರಿಲೀಸ್​ಗೆ ಇನ್ನೊಂದು ದಿನವಷ್ಟೇ ಬಾಕಿಯಿದೆ. ನಾಗೇಂದ್ರ ಪ್ರಸಾದ್ ನಿರ್ದೇಶನದ, ಪುನೀತ್ ರಾಜ್​ಕುಮಾರ್, ಪ್ರಭುದೇವ, ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಶಿನಿ ಪ್ರಕಾಶ್ ನಟನೆಯ ಲಕ್ಕಿಮ್ಯಾನ್​ ಈ ಶುಕ್ರವಾರ ಸಿನಿರಸಿಕರ ಮುಂದೆ ಬರ್ತಿದೆ.

ರಿಲೀಸ್​ಗೂ ಒಂದು ದಿನ ಮೊದಲೇ ಪೇಯ್ಡ್ ಪ್ರೀಮಿಯರ್ ಶೋ ಕೂಡ ನಡೆಸ್ತಿರೋ ಚಿತ್ರತಂಡ, ಈಗಾಗ್ಲೇ ಆನ್​ಲೈನ್​ನಲ್ಲಿ ಟಿಕೆಟ್ಸ್ ಬುಕಿಂಗ್​ಗೆ ಅವಕಾಶ ಕಲ್ಪಿಸಿದೆ. ಇದೊಂದು ಪಕ್ಕಾ ಯೂತ್​ಫುಲ್ ಎಂಟರ್​ಟೈನರ್ ಆಗಿದ್ದು, ಫ್ರೆಂಡ್​ಶಿಪ್ ಕುರಿತ ಮೌಲ್ಯವನ್ನು ಸಾರಲಿದೆ. ರೀಸೆಂಟ್ ಆಗಿ ಕೃಷ್ಣ-ಸಂಗೀತ ಮತ್ತು ನಾಗಭೂಷಣ್​ ಕಾಂಬೋನ ಫ್ರೆಂಡ್​ಶಿಪ್ ಸಾಂಗ್ ರಿಲೀಸ್ ಆಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ವ್ಯಕ್ತವಾಗ್ತಿವೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES