Thursday, January 23, 2025

ದುನಿಯಾ ವಿಜಿ- ಶ್ರೇಯಸ್ ಕಾಂಬೋನಲ್ಲಿ ಮಲ್ಟಿಸ್ಟಾರರ್..!

ಸ್ಯಾಂಡಲ್​ವುಡ್​ ಸಲಗ ದುನಿಯಾ ವಿಜಯ್​ ಭೀಮ ಚಿತ್ರದಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಇತ್ತ ಪಡ್ಡೆ ಹುಲಿ ಶ್ರೇಯಸ್​ ಮಂಜು ರಾಣಾ ಕಥೆಯಲ್ಲಿ ಮುಳುಗಿ ಹೋಗಿದ್ದಾರೆ. ಆದ್ರೆ, ಅಸಲಿಗೆ ವಿಷ್ಯ ಬೇರೇನೆ ಇದೆ. ಈ ಇಬ್ರು ಸ್ಟಾರ್​ ನಟರ ಕಾಂಬಿನೇಷನ್​​ನಲ್ಲಿ ಸಿನಿಮಾ ಸಿದ್ಧವಾಗ್ತಿದೆ. ಯೆಸ್​​​. ಗಾಂಧಿನಗರದಲ್ಲಿ ಈ ರೀತಿಯ ಸರ್ಪ್ರೈಸಿಂಗ್​ ಸುದ್ದಿಯೊಂದು ಹರಿದಾಡ್ತಿದೆ. ನಿಜಕ್ಕೂ ಈ ಸಿನಿಮಾ ಕಥೆ ಏನು..? ಯಾರ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರ್ತಿದೆ ಅನ್ನೋ ಇಂಟರೆಸ್ಟಿಂಗ್​ ಮಾಹಿತಿ ಕೊಡ್ತೀವಿ. ನೀವೇ ಓದಿ.

  • ಪ್ಯಾನ್​ ಇಂಡಿಯಾ ಕಥೆಗೆ ಆ್ಯಕ್ಷನ್​ ಕಟ್​ ಹೇಳ್ತಾರಾ ವಿಜಯ್​..?

ಕನ್ನಡದ ಬ್ಯುಸಿಯೆಸ್ಟ್ ನಟರಲ್ಲಿ ದುನಿಯಾ ವಿಜಯ್​ ಕೂಡ ಒಬ್ರು. ಸ್ಯಾಂಡಲ್​ವುಡ್​ ನಿಂದು ಟಾಲಿವುಡ್​ಗೆ ಜಿಗಿದಿರುವ ಬ್ಲಾಕ್​​ ಕೋಬ್ರಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇತ್ತ ಸಲಗ ಸಿನಿಮಾ ಸಕ್ಸಸ್​ ಬಳಿಕ ನಟನಾ ಚಾತುರ್ಯದ ಜತೆಗೆ ನಿರ್ದೇಶನ ವಿಭಾಗದಲ್ಲೂ ಪ್ರವೀಣರಾಗಿದ್ದಾರೆ. ವಿಜಯ್​ ಸಿನಿಮಾಂತ್ರಿಕತೆಗೆ ಸಿಕ್ಕಾಪಟ್ಟೆ ಬೇಡಿಕೆ ಶುರುವಾಗಿದೆ. ಸದ್ಯ ಭೀಮ ಚಿತ್ರದ ಮೇಕಿಂಗ್​ನಲ್ಲಿ ಸಖತ್​ ಬ್ಯುಸಿ ಇರೋ ದುನಿಯಾ ವಿಜಯ್​​ ಮತ್ತೊಂದು ಸಿನಿಮಾಗೆ ಕೈ ಹಾಕಲಿದ್ದಾರೆ.

ಆ್ಯಕ್ಷನ್​ ವೆಂಚರ್​ನಲ್ಲಿ ಮೂಡಿ ಬರ್ತಿರೋ ಬಹುನಿರೀಕ್ಷಿತ ಸಿನಿಮಾ ಭೀಮ. ಈ ಸಿನಿಮಾದ ಜತೆಗೆ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್​​ ಮಂಜು ಅವರ ಚಿತ್ರಕ್ಕೆ ದುನಿಯಾ ವಿಜಯ್​​ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಈ ಕುರಿತ ಬಿಸಿ ಬಿಸಿ ಸುದ್ದಿಗಳು ಗಾಂದಿನಗರದಲ್ಲಿ ಸದ್ದು ಮಾಡ್ತಿದ್ದು ಎಲ್ಲರಿಗೂ ಕುತೂಹಲ ಮೂಡಿಸಿವೆ. ಅಂತೂ ಹೈ ವೋಲ್ಟೇಜ್​ ಅ್ಯಕ್ಷನ್​ ಸಿನಿಮಾಗೆ ಸ್ಯಾಂಡಲ್​​ವುಡ್​ ಸಲಗ ನಿರ್ದೇಶನದ ಜತೆಗೆ ಆ್ಯಕ್ಟ್​ ಕೂಡ ಮಾಡ್ತಿದ್ದಾರೆ.

  • ಮಗನ ಅದ್ದೂರಿ ಸಿನಿಮಾಗೆ ತಂದೆ ಕೆ. ಮಂಜು ಸಾಥ್​​​
  • ಪಡ್ಡೆಹುಲಿಯ ಜತೆಗೆ ಬ್ಲಾಕ್​​ ಕೋಬ್ರಾ ಜಿದ್ದಾಜಿದ್ದಿ..?

ಕಲ್ಲು ಮುಳ್ಳಿನ ಹಾದಿಯ ಜತೆಗೆ ಸೋಲು ಗೆಲುವುಗಳನ್ನು ಸಮಾನವಾಗಿ ಕಂಡಿರುವ ದುನಿಯಾ ವಿಜಯ್​ ಸಿನಿಮಾಗಳ ಆಯ್ಕೆಯಲ್ಲಿ ಸಖತ್​ ಚ್ಯೂಸಿಯಾಗಿದ್ದಾರೆ. ಹಾಗಾಗಿ ಈ ಸಿನಿಮಾ ಕೂಡ ಪ್ರೇಕ್ಷಕರ ಪಾಲಿಗೆ ವಿಶೇಷವಾಗಿರಲಿದೆ. ವಿಲನ್​ ರೋಲ್​ನಲ್ಲಿ ಕಾಣಿಸಿಕೊಳಲಿದ್ದಾರೆ ಅನ್ನೋ ಟಾಕ್​ ಕೂಡ ಶುರುವಾಗಿದ್ದು, ಆ್ಯಕ್ಷನ್​ ಸೀಕ್ವೆನ್ಸ್​ಗಳ ಅಬ್ಬರ ಜೋರಾಗಿರಲಿದೆ. ದುನಿಯಾ ವಿಜಯ್​ ಸಿಗ್ನೇಚರ್​ ಸ್ಟೈಲ್​ನಲ್ಲೇ ಸಿನಿಮಾ ಮೂಡಿ ಬರಲಿದೆ. ಪಕ್ಕಾ ಸುಕ್ಕಾ ಕಥೆಯ ಜತೆಗೆ ಕಲ್ಟ್​​​ ಸಂಭಾಷಣೆ, ಪಕ್ಕಾ ಲೋಕಲ್​​ ಲಾಂಗ್ವೇಜ್​ನಲ್ಲಿ ಸಿನಿಮಾ ಮಸ್ತ್​ ಮನರಂಜನೆಯ ರಸದೌತಣ ಸಿಗಲಿದೆ.

ಪಡ್ಡೆ ಹುಲಿ ಸಿನಿಮಾ ಮೂಲಕ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್​​ ಮಂಜು ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ. ಈಗಾಗ್ಲೇ ರಾಣಾ ಸಿನಿಮಾ ರಿಲೀಸ್​ಗೆ ಸಜ್ಜಾಗಿದ್ದು, ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದೆ. ಇದೀಗ ಮಗನ ಹೊಸ ಸಿನಿಮಾಗೆ ಕೆ. ಮಂಜು ಅವರೇ ಬಂಡವಾಳ ಹೂಡ್ತಾ ಇದ್ದು ಅದ್ದೂರಿಯಾಗಿ ಮೂಡಿ ಬರಲಿದೆ. ಒಂದೊಳ್ಳೆ ಬ್ರೇಕ್​​​ಗಾಗಿ ಕಾಯ್ತಿರೋ ನಟ ಶ್ರೇಯಸ್​​​ಗೆ ಈ ಸಿನಿಮಾ ಕೂಡ ಸಿನಿಕರಿಯರ್​​ನಲ್ಲಿ ಸವಾಲಾಗಲಿದೆ.

ಚಂದನವನದಲ್ಲಿ ಬೆಂಕಿಯಿಲ್ಲದೇ ಹೊಗೆಯಾಡೊದಿಲ್ಲ. ದುನಿಯಾ ವಿಜಯ್​​ ಹಾಗೂ ಶ್ರೇಯಸ್​ ಕಾಂಬೋ ಸಿನಿಮಾದ ಕುರಿತು ಎದ್ದಿರೋ ಊಹಾಪೋಹಗಳ ಬಗ್ಗೆ ಸದ್ಯದಲ್ಲೇ ಉತ್ತರ ಸಿಗಲಿದೆ. ಮಲ್ಟಿಸ್ಟಾರರ್ ಸಿನಿಮಾದಲ್ಲಿ ಯಾರೆಲ್ಲಾ ಅಭಿನಯಿಸ್ತಾರೆ..? ಸಿನಿಮಾ ಸೆಟ್ಟೇರೋದು ಯಾವಾಗ..? ಟೆಕ್ನಕಲ್​ ಟೀಮ್​​ನಲ್ಲಿ ಯಾರೆಲ್ಲಾ ಕಾಣಿಸಿಕೊಳ್ತಾರೆ ಅನ್ನೋ ಎಲ್ಲಾ ಪ್ರಶ್ನೆಗಳಿಗೆ ಸದ್ಯದಲ್ಲೆ ಉತ್ತರ ಸಿಗಲಿದೆ. ಎನಿವೇ ಭರವಸೆಯ ನಟ ಕಮ್​ ನಿರ್ದೇಶಕ ​ ದುನಿಯಾ ವಿಜಯ್​​ ಹೊಸ ಪ್ರಯತ್ನಕ್ಕೆ ಶುಭ ಹಾರೈಸೋಣ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES