Wednesday, January 22, 2025

ಕೇದಾರನಾಥ್ ದೇವಾಲಯದ ಕಲಾಕೃತಿ ಮಾಡಿದ ಯುವಕ

ವಿಜಯಪುರ : ಈತ ಶಂಕರ ಸುರೇಶ ಪೂಜಾರಿ. ವಯಸ್ಸಿನ್ನೂ 18 ವರ್ಷ. ವೃತ್ತಿಯಲ್ಲಿ ಟೇಲರ್. ವಿಜಯಪುರ ನಗರದ ದರ್ಗಾ ಬಳಿಯ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡುವ ಗಣೇಶ ಮಂಡಳಿ ಸದಸ್ಯ ಕೂಡ. ಈ ಹುಡುಗ ದೇವರ ಭಕ್ತ. ಹೀಗಾಗಿ ಒಂದಿಲ್ಲೊಂದು ದೇವರ ಸೇವೆ ಮಾಡ್ತಾ ಇರ್ತಾರೆ. ಕಳೆದ ಬಾರಿ ಇದೇ ದೇವಸ್ಥಾನದಲ್ಲಿ ಅಯೋಧ್ಯೆಯಲ್ಲಿನ ರಾಮಮಂದಿರವನ್ನು ಥರ್ಮಾಕೋಲ್ ನಿಂದ ನಿರ್ಮಿಸಿ ಜನರ ಮೆಚ್ಚುಗೆ ಪಡೆದಿದ್ದಾನೆ.

ಆದರೆ, ಈ ಬಾರಿ ಕೇದಾರನಾಥ ಪ್ರತಿಕೃತಿ ನಿರ್ಮಿಸಿ ಗಮನ ಸೆಳೆದಿದ್ದಾನೆ. 30 ದಿನಗಳ ಕಾಲ ಥರ್ಮಾಕೋಲ್ ನಿಂದ ಸಂಪೂರ್ಣ ದೇವಸ್ಥಾನ ನಿರ್ಮಿಸಿದ್ದು, ದೇವಸ್ಥಾನದ ಒಳಗಡೆ ಲಕ್ಷ್ಯ ವಹಿಸಿ ನೋಡಿದಾಗ ಪರಮೇಶ್ವರ ಹಾಗೂ ಲಿಂಗದ ದರ್ಶನವಾಗುತ್ತದೆ. ಒಂದು ಕ್ಷಣ ಕೇದಾರನಾಥ ದೇವಸ್ಥಾನದಲ್ಲಿ ಇದ್ದಿವಾ ಅನ್ನೊ ಮಟ್ಟಿಗೆ ಕಲಾಕೃತಿ ನಿರ್ಮಿಸಿದ್ದಾನೆ. ದೇವಸ್ಥಾನದ ಹಿಂದುಗಡೆ ಹಿಮದ ಪರ್ವತ ನಿರ್ಮಿಸಿದ್ದು, ಮುಂದೆ ಬಸವಣ್ಣ, ದೇವಸ್ಥಾನದ ಮೇಲೆ ಗೋಪುರ ನೋಡುಗರ ಕಣ್ಮನ ಸೆಳೆಯುತ್ತದೆ. ಗೂಗಲ್ ಹಾಗೂ ಯೂ ಟ್ಯೂಬ್ ನೋಡಿಯೇ ಈ ದೇವಾಲಯ ನಿರ್ಮಿಸಿದ್ದಾನೆ.

ಇನ್ನೂ ಈ ಕಲಾಕೃತಿಯು 10 ಅಡಿ ಉದ್ದ 7 ಅಡಿ ಅಗಲವಿದ್ದು ಸಂಪೂರ್ಣ ಥರ್ಮಾಕೋಲ್ ನಿಂದ ನಿರ್ಮಿಸಲಾಗಿದೆ. ಕಳೆದ ಬಾರಿ ಶಂಕರ ನಿರ್ಮಿಸಿದ್ದ ರಾಮಮಂದಿರ ಕಲಾಕೃತಿಗೆ ಪ್ರಥಮ ಬಹುಮಾನ ನೀಡಲಾಗಿತ್ತು. ಈ ಬಾರಿಯೂ ಪ್ರಶಸ್ತಿ ಸಿಗುವ ವಿಶ್ವಾಸ ಜನರದ್ದು. ಕೇದಾರನಾಥ ದೇವಸ್ಥಾನದ ನೋಡಲು ಆಗದೇ ಇರೋರು ಇಲ್ಲಿಗೆ ಬಂದು ಕೇದಾರನಾಥ ದರ್ಶನ ಪಡೆಯಬಹುದಾಗಿದೆ‌.

ಒಟ್ಟಿನಲ್ಲಿ ಗಣೇಶನ ದರ್ಶನದ ಜೊತೆಗೆ ಕೇದಾರನಾಥ್ ದೇವಾಲಯ ನೋಡಿದವರು ಯುವಕನ‌ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ಸುನೀಲ್ ಭಾಸ್ಕರ ಪವರ ಟಿವಿ ವಿಜಯಪುರ

RELATED ARTICLES

Related Articles

TRENDING ARTICLES