Saturday, April 20, 2024

ಬ್ರಿಟನ್​ ಪ್ರಧಾನಿಯಾಗಿ ಲಿಜ್​​​ ಟ್ರಸ್​ ಆಯ್ಕೆ, ಭಾರತೀಯ ಮೂಲದ ರಿಷಿ ಸುನಕ್​ಗೆ ಸೋಲು

ನವದೆಹಲಿ: ಬ್ರಿಟನ್‌ನ ನೂತನ ಪ್ರಧಾನಿಯಾಗಿ ಬ್ರಿಟನ್​ ಕನ್ಸರ್ವೇಟಿವ್ ಪಕ್ಷದ ಲಿಜ್ ಟ್ರಸ್ ಆಯ್ಕೆಯಾಗಿದ್ದಾರೆ. ಸುಮಾರು 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಲಿಜ್ ಟ್ರಸ್ ಬ್ರಿಟನ್​ನ ಮೂರನೇ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ನಾಳೆ ಬ್ರಿಟನ್​ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಹಿಂದೆ ಪ್ರಧಾನಿಯಾಗಿದ್ದ ಬೋರಿಸ್ ಜಾನ್ಸನ್ ಅವರ ಮೇಲೆ ಹಲವು ಹಗರಣದಲ್ಲಿ ಭಾಗಿಯಾಗಿದ್ದು, ಬ್ರಿಟನ್​ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಹಲವು ಸಚಿವರು ಒತ್ತಾಯಿಸಿ ತಮ್ಮ ರಾಜೀನಾಮೆ ನಿಡಿದ್ದರು. ಬಳಿಕ ಬೋರಿಸ್​ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈಗ ತೆರವಾದ ಸ್ಥಳಕ್ಕೆ ಲಿಜ್ ಟ್ರಸ್ ಆಯ್ಕೆಯಾಗಿದ್ದಾರೆ.

ಇನ್ನು ಲಿಜ್​ ಟ್ರಸ್​ ಅವರ ಪ್ರತಿಸ್ಪರ್ಧಿಯಂತೆ ಭಾರೀ ನಿರೀಕ್ಷೆ ಮೂಡಿಸಿದ್ದ ಭಾರತೀಯ ಮೂಲದ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಸೋಲು ಅನುಭವಿಸಿದ್ದಾರೆ. ರಿಷಿ ಒಟ್ಟು 60,399 ಮತಗಳನ್ನು ಪಡೆದರು.

RELATED ARTICLES

Related Articles

TRENDING ARTICLES