ಬೆಂಗಳೂರು: ಚೈನೀಸ್ ಲೋನ್ ಆ್ಯಪ್ ಗಳ ಮೇಲೆ ಸಾಕಷ್ಟು ದೂರುಗಳು ದಾಖಲಾಗಿದ್ದ ಹಿನ್ನೆಲೆ ಬೆಂಗಳೂರಿನ 6 ಕಡೆ ಇಡಿ(ಜಾರಿ ನಿರ್ದೇಶನಾಲಯ) ದಾಳಿ ನಡೆಸಿದೆ.
ಚೀನಾದ ಆನ್ಲೈನ್ ಲೋನ್ ಆ್ಯಪ್ಗಳು ಯಾವುದೇ ದಾಖಲೆಗಳ ಪಡೆಯದೆ ಸುಲಭವಾಗಿ ಲೋನ್ ನೀಡಿ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ನಗರದ ಸಿಸಿಬಿಯಲ್ಲಿ 22 ಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದು, ಚೀನಾದ ವಿವಿಧ ಕಡೆ ಇಡಿ ರೈಡ್ ಮಾಡಿದೆ.
ಇನ್ನು ಲೋನ್ ಆ್ಯಪ್ ಗಳ ಕಿರುಕುಳಕ್ಕೆ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗಾಗಲೆ ಹಲವು ಲೋನ್ ಆ್ಯಪ್ ಗಳನ್ನ ಪ್ಲೇ ಸ್ಟೋರ್ ನಿಂದ ಅಧಿಕಾರಿಗಳು ತೆಗೆಸಿದ್ದಾರೆ.
ಇದರ ಬೆನ್ನಲ್ಲೆ ಇದೀಗ ಅನಧಿಕೃತ ಚೈನೀಸ್ ಲೋನ್ ಆ್ಯಪ್ ಗಳ ಮೇಲೆ ದಾಳಿ ಮಾಡಲಾಗಿದೆ. ನಿನ್ನೆ ದಾಳಿ ನಡೆಸಿ ಸುಮಾರು 17 ಕೋಟಿ ರೂ ಇಡಿ ವಶಕ್ಕೆ ಪಡೆದಿದೆ. ಹೆಚ್.ಎಸ್.ಆರ್ ಲೇಔಟ್ ಹಾಗೂ ಕೋರಮಂಗಲ ಸೇರಿ ಬೆಂಗಳೂರಿನ 7 ಕಡೆ ದಾಳಿ ನಡೆಸಿಲಾಗಿದೆ.
ಈ ಬಗ್ಗೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ 18 ಎಫ್ ಐ ಆರ್ ದಾಖಲಾಗಿತ್ತು. ಭಾರತೀಯರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲೋನ್ ಆಪ್ ಸಂಸ್ಥೆಗಳು ತಯಾರಿಸಿದ್ದವು. ನಕಲಿ ನಿರ್ದೇಶಕರನ್ನ ಸೃಷ್ಟಿಸಿ ಲೋನ್ ಆಪ್ ಚೀನಾ ಕಂಪನಿಗಳು ನಡೆಸುತ್ತಿದ್ದವು. ಚೈನೀಸ್ ಲೋನ್ ಆಪ್ ಗಳ ಬ್ಯಾಂಕ್ ದಾಖಲೆಗಳು, ಅಕೌಂಟ್ಸ್ ಗಳು ಇಡಿಯಿಂದ ಸೀಜ್ ಮಾಡಿ ವಶಕ್ಕೆ ಪಡೆಯಲಾಗಿದೆ.