Wednesday, January 22, 2025

ಚಾರ್ಲಿ ಸೂಪರ್ ಹಿಟ್.. ಎರಡೆರಡು ಪ್ರಾಜೆಕ್ಟ್ಸ್​​​ಗೆ ರಕ್ಷಿತ್ ಜೈ

777 ಚಾರ್ಲಿ ಬ್ಲಾಕ್ ಬಸ್ಟರ್ ಹಿಟ್ ಆದ್ಮೇಲೆ ರಕ್ಷಿತ್ ಶೆಟ್ಟಿ ಸಿನಿಮೋತ್ಸಾಹ ಡಬಲ್ ಆಗಿದೆ. ಹಾಗಾಗಿಯೇ ಒಂದಲ್ಲಾ ಎರಡೆರಡು ಸಿನಿಮಾಗಳನ್ನ ಒಟ್ಟೊಟ್ಟಿಗೆ ನಿರ್ಮಿಸೋಕೆ ಸಜ್ಜಾಗಿದ್ದಾರೆ. ಶೆಟ್ರ ಗ್ಯಾಂಗ್​ನಿಂದ ಬ್ಯಾಚಲರ್ ಪಾರ್ಟಿ ಜೊತೆ ಇಬ್ಬನಿ ತಬ್ಬಿದ ಇಳೆಯಲಿ ಅನ್ನೋ ಸೆಲೆಬ್ರೇಷನ್ ಆಫ್ ಲವ್ ಕಹಾನಿ ಕೂಡ ಬರ್ತಿದೆ ಅದ್ರ ಸ್ಪೆಷಲ್ ಸ್ಟೋರಿ ನಿಮಗಾಗಿ.

  • ರಿಷಬ್ & ದಿಗಂತ್ ಜೊತೆ ರಕ್ಷಿತ್ ಶೆಟ್ಟಿ ಬ್ಯಾಚಲರ್ ಪಾರ್ಟಿ..!
  • ಕಾಂತಾರ ಆದ್ಮೇಲೆ ರೆಮ್ಯುನರೇಷನ್ ಹೇಳ್ತೀನಿ ಎಂದ ರಿಷಬ್

ಕಿರಿಕ್ ಪಾರ್ಟಿ ಸಿನಿಮಾ ಸೆಟ್ಟೇರಿದ ಬನಶಂಕರಿಯ ಶ್ರೀಧರ್ಮಗಿರಿ ಮಂಜುನಾಥ ಸ್ವಾಮಿ ಆಲಯದಲ್ಲಿ ಇಂದು ಒಂದಲ್ಲಾ ಎರಡೆರಡು ಸಿನಿಮಾಗಳು ಒಟ್ಟೊಟ್ಟಿಗೆ ಸೆಟ್ಟೇರಿದ್ವು. ಎರಡೂ ಸಿನಿಮಾಗಳನ್ನ ನಟ ರಕ್ಷಿತ್ ಶೆಟ್ಟಿಯೇ ನಿರ್ಮಿಸ್ತಿದ್ದು, 777 ಚಾರ್ಲಿ ಸಕ್ಸಸ್​​ ಅವ್ರ ಸಿನಿಮೋತ್ಸಾಹವನ್ನು ದ್ವಿಗುಣ ಮಾಡಿರೋದು ಪಕ್ಕಾ ಆಗಿದೆ. ಆ ಪೈಕಿ ‘ಬ್ಯಾಚಲರ್ ಪಾರ್ಟಿ’ ಅನ್ನೋದು ಒಂದು ಸಿನಿಮಾ.

ಯೆಸ್.. ಇದಕ್ಕೆ ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ ಚಿತ್ರಗಳಿಗೆ ಕೆಲಸ ಮಾಡಿದಂತಹ ಅಭಿಜಿತ್ ಮಹೇಶ್ ಆ್ಯಕ್ಷನ್ ಕಟ್ ಹೇಳ್ತಿದ್ದು, ಪಕ್ಕಾ ಕಾಮಿಡಿ ಎಂಟರ್​ಟೈನರ್ ಆಗಿರಲಿದೆಯಂತೆ. ಕಿರಿಕ್ ಪಾರ್ಟಿ ನಂತ್ರ ಅಂಥದ್ದೇ ಕಿಕ್ ಕೊಡೋ ಸಿನಿಮಾ ಇದಾಗಲಿದ್ದು, ರಿಷಬ್ ಶೆಟ್ಟಿ, ದಿಗಂತ್ ಹಾಗೂ ಅಚ್ಯುತ್ ಲೀಡ್​ನಲ್ಲಿ ಕಾಣಸಿಗಲಿದ್ದಾರೆ. ಸದ್ಯ ನಾಯಕಿಯಾಗಿ ಸಿರಿ ಹಾಗೂ ಹಿರಿಯನಟಿ ವಿಜಯಲಕ್ಷ್ಮೀ ಚಿತ್ರದ ತಾರಾಗಣದಲ್ಲಿದ್ದು, ನಾಳೆಯಿಂದಲೇ ಶೂಟಿಂಗ್ ಕಿಕ್​ಸ್ಟಾರ್ಟ್​ ಆಗ್ತಿದೆ. ಬಜೆಟ್ ಮೊದಲೇ ಫಿಕ್ಸ್ ಆಗಿರತ್ತೆ, ಎಕ್ಸೀಡ್ ಮಾಡೋ ಹಾಗಿಲ್ಲ ಅಂತ ರಕ್ಷಿತ್ ಅಂದ್ರೆ, ಕಾಂತಾರ ಆದ್ಮೇಲೆ ನನ್ ರೆಮ್ಯುನರೇಷನ್​ನ ಫಿಕ್ಸ್ ಮಾಡ್ತೀನಿ ಅಂತ ರಕ್ಷಿತ್ ಕಾಲೆಳೆಯುತ್ತಾರೆ ನಟ ರಿಷಬ್ ಶೆಟ್ಟಿ.

  • ‘ಇಬ್ಬನಿ ತಬ್ಬಿದ ಇಳೆಯಲಿ’ ಅಂಕಿತಾ- ವಿಹಾನ್ ಪಯಣ
  • ಶೆಟ್ರ ಪಲ್ಲಕ್ಕಿಯಲ್ಲಿ ಚಂದ್ರಜಿತ್ ಕಲರ್​ಫುಲ್ ಕನಸಿನ ಚಿತ್ತಾರ

ಚಾರ್ಲಿ ರೀತಿ ಪ್ರೀತಿ ತುಂಬಿದ ಮತ್ತೊಂದು ಕಥೆ ‘ಇಬ್ಬನಿ ತಬ್ಬಿದ ಇಳೆಯಲಿ’. ಇದು ರೆಟ್ರೋ ಸಾಂಗ್​ನ ಪಲ್ಲವಿ ಆಗಿದ್ದು, ಅದನ್ನೇ ನಿರ್ದೇಶಕರು ಟೈಟಲ್ ಆಗಿಸಿರೋದು ವಿಶೇಷ. ಚಂದ್ರಜಿತ್ ನಿರ್ದೇಶನದಲ್ಲಿ ಸೆಟ್ಟೇರಿರೋ ಈ ಸಿನಿಮಾದಲ್ಲಿ ಪಂಚತಂತ್ರ ಖ್ಯಾತಿಯ ನಟ ವಿಹಾನ್ ಹಾಗೂ ಅಂಕಿತಾ ಅಮರ್ ಲೀಡ್​ನಲ್ಲಿ ಕಾಣಸಿಗಲಿದ್ದಾರೆ. ಟೀಸರ್​ನಲ್ಲಿ ಚಿತ್ರ ಎಷ್ಟು ಕಲರ್​ಫುಲ್ ಇರಲಿದೆ ಅನ್ನೋದ್ರ ಗಮ್ಮತ್ತು ತೋರಿಸಿರೋ ಶೆಟ್ರ ಟೀಂ, ಸಿನಿಮಾನ ಅಷ್ಟೇ ಸುಮಧುರವಾಗಿ ಕಟ್ಟಿಕೊಡೋ ಯೋಜನೆಯಲ್ಲಿದ್ದಾರೆ.

ಒಟ್ಟಾರೆ ಎರಡೂ ಸಿನಿಮಾಗಳಿಂದ ಸಾಕಷ್ಟು ಹೊಸ ಪ್ರತಿಭೆಗಳಿಗೆ ಒಂದೊಳ್ಳೆ ವೇದಿಕೆ ಕಲ್ಪಿಸುತ್ತಿರೋ ಸಿಂಪಲ್ ಸ್ಟಾರ್, ತಾನು ಬೆಳೆಯೋದ್ರ ಜೊತೆ ತನ್ನವರನ್ನೂ ಬೆಳೆಯಲು ಪ್ರೋತ್ಸಾಹ ನೀಡ್ತಿರೋದು ವಿಶೇಷ. ತಮ್ಮ ಸಪ್ತ ಸಾಗರದಾಚೆ ಎಲ್ಲೋ ಹಾಗೂ ರಿಚರ್ಡ್​ ಌಂಟನಿ ಸಿನಿಮಾಗಳ ಜೊತೆ ಜೊತೆಗೆ ಇದ್ರ ನಿರ್ಮಾಣದ ಕೆಲಸಗಳಲ್ಲೂ ರಕ್ಷಿತ್ ಬ್ಯುಸಿ ಆಗಲಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES