Monday, December 23, 2024

PSI ಪರೀಕ್ಷೆ ಅಕ್ರಮ, 14 ದಿನ ನ್ಯಾಯಾಂಗ ಬಂಧನಕ್ಕೆ ರಚನಾ

ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿ ರಚನಾ ಹನುಮಂತಗೆ 14 ದಿನಗಳ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ.

ಪಿಎಸ್​ಐ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ರಚನಾ 17ನೇ ಆರೋಪಿಯಾಗಿದ್ದು, ಅಕ್ರಮದಲ್ಲಿ ಭಾಗಿಯಾದ ಬಗ್ಗೆ ಎಫ್ಐಆರ್ ದಾಖಲಾಗುತ್ತಿದ್ದಂತೆ ರಚನಾ ನಾಪತ್ತೆಯಾಗಿದ್ದಳು. ಮತ್ತೆ ಈಗ ರಚನಾಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯದಿಂದ ಆದೇಶ ಮಾಡಿದೆ.

ಕಳೆದ ತಿಂಗಳು ಆಗಸ್ಟ್ 27 ರಂದು ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ಮೂಲದ ರಚನಾಳನ್ನು ಕಲಬುರ್ಗಿಯಲ್ಲಿ ಸಿಐಡಿ ತನಿಖಾ ತಂಡ ಬಂಧನ ಮಾಡಿತ್ತು. ಪಿಎಸ್​ಐನ ಮಹಿಳಾ ಕೋಟಾದ ಪರೀಕ್ಷೆಯಲ್ಲಿ ರಚನಾ ಮೊದಲ ರ್ಯಾಂಕ್ ಪಡೆದುಕೊಂಡಿದ್ದಳು.

RELATED ARTICLES

Related Articles

TRENDING ARTICLES