Thursday, April 25, 2024

AAP-BJP ಮಧ್ಯೆ ಜೋರಾಯ್ತು ದೆಹಲಿ ಸಮರ..!

ನವದೆಹಲಿ : ತನ್ನ ಶಾಸಕರನ್ನು ಖರೀದಿಸಲು ಬಿಜೆಪಿ ಕುದುರೆ ವ್ಯಾಪಾರ ನಡೆಸ್ತಿದೆ ಎಂದು ದೆಹಲಿ ಸಿಎಂ ಆರೋಪಿಸಿದ್ರು.. ಜೊತೆಗೆ, ವಿಶ್ವಾಸಮತಯಾಚನೆ ಮಾಡಿ ತೋರಿಸಲಿ ಎಂದು ಸವಾಲು ಎಸೆದಿತ್ತು. ಈ ಸವಾಲು ಸ್ವೀಕರಿಸಿದ್ದ ಕೇಜ್ರಿವಾಲ್‌ ದಿಲ್ಲಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯಲ್ಲಿ ನಿರೀಕ್ಷಿತ ಗೆಲುವು ಕಂಡಿದ್ದಾರೆ.

ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಪರವಾಗಿ 58 ಶಾಸಕರು ಮತ ಚಲಾಯಿಸಿದರು. 70 ಶಾಸಕರ ಬಲವಿರುವ ವಿಧಾನಸಭೆಯಲ್ಲಿ 62 ಮಂದಿ ಎಎಪಿ ಶಾಸಕರಿದ್ದರೆ, ಬಿಜೆಪಿ ಎಂಟು ಶಾಸಕರನ್ನು ಹೊಂದಿದೆ.

ಬಿಜೆಪಿ ‘ಆಪರೇಷನ್ ಕಮಲ’ ಮೂಲಕ ತಮ್ಮ ಒಬ್ಬರೇ ಒಬ್ಬ ಶಾಸಕರನ್ನು ಸೆಳೆದುಕೊಳ್ಳಲು ಬಿಜೆಪಿಗೆ ಸಾಧ್ಯವಾಗಿಲ್ಲ. ಹೀಗಾಗಿ ಅದರ ಪ್ರಯತ್ನ ವಿಫಲವಾಗಿದೆ ಎಂದು ಹೇಳಿದ್ದಾರೆ. ವಿಧಾನಸಭೆಯಲ್ಲಿ ತಮಗೆ ಸಂಪೂರ್ಣ ಬಹುಮತವಿದೆ. ಒಬ್ಬನೇ ಒಬ್ಬ ಶಾಸಕ ತಮ್ಮ ವಿರುದ್ಧವಾಗಿಲ್ಲ ಎಂದು ಬಿಜೆಪಿಗೆ ಸಂದೇಶ ರವಾನಿಸಲು ಕೇಜ್ರಿವಾಲ್ ಅವರು ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸಿದ್ದರು. ಆಗಸ್ಟ್ 29ರಂದು ನಿರ್ಣಯ ಮಂಡಿಸಲಾಗಿತ್ತು.

ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕರ ತಿಕ್ಕಾಟ ತಾರಕಕ್ಕೇರಿದೆ.‌ ಪಕ್ಷದ ನಾಯಕರ‌ ಮೇಲಿನ ಸಿಬಿಐ ದಾಳಿಯನ್ನೇ ರಾಜಕೀಯ ದಾಳವನ್ನಾಗಿಸಲು ಆಪ್ ಮುಂದಾಗಿದ್ದು, ಗುಜರಾತ್ ಚುನಾವಣೆ ವಿಚಾರವಾಗಿ ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ವಿಧಾನಸಭೆಯಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಆಪ್ ನಾಯಕರ ಮೇಲೆ ಸಿಬಿಐ ದಾಳಿ ಬಳಿಕ ಪಕ್ಷದ ಜನಪ್ರಿಯತೆ ಹೆಚ್ಚಾಗಿದೆ. ಅದರಲ್ಲೂ ಗುಜರಾತ್​ನಲ್ಲಿ ಆಪ್ ಪರವಾಗಿ ಮತದಾರರ ಒಲವು ಶೇ 4ರಷ್ಟು ಏರಿಕೆಯಾಗಿದೆ ಎಂದು ಕೇಜ್ರೀವಾಲ್ ಮಾಹಿತಿ ನೀಡಿದ್ದಾರೆ.

ಇತ್ತ, ಬಿಜೆಪಿ ಆಪರೇಷನ್ ಕಮಲದ ಮೂಲಕ ಆಪ್‌ ಶಾಸಕರನ್ನು ಸೆಳೆಯಲು ಯತ್ನಿಸಲಾಗ್ತಿದೆ. ಹಾಗು ಪಕ್ಷದ ಪ್ರಮುಖ ನಾಯಕರ ಮೇಲೆ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ದಾಳಿ ಮಾಡಿಸಲಾಗ್ತಿದೆ ಎಂದು ಆಪ್‌ ಕಾರ್ಯಕರ್ತರು ದೆಹಲಿಯಲ್ಲಿ ಪ್ರತಿಭಟನೆ ನೆಡೆಸಿದ್ರು.

ಒಟ್ನಲ್ಲಿ, ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ಮಧ್ಯೆ ದೊಡ್ಡ ಮಟ್ಟದ ವಾರ್‌ ನಡೆಯುತ್ತಿದ್ದು, ಸಿಸೋಡಿಯಾ ಲಾಕರ್‌ ತೆಗೆಸಲಾಗಿದೆ. ಅಕ್ರಮ ಮದ್ಯನೀತಿ ಮುಂದಿಟ್ಕೊಂಡು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೇಜ್ರಿವಾಲ್‌ ಹಣಿಯಲು ಪ್ರಯತ್ನಿಸ್ತಿದೆ. ಈ ಮಧ್ಯೆ, ನಾವು ರಾಷ್ಟ್ರಪಕ್ಷಕ್ಕಿಂತ ಏನೂ ಕಮ್ಮಿ ಇಲ್ಲ. ಮುಂಬರುವ ಚುನಾವಣೆ ನಮ್ಮ ಪಕ್ಷ ಪ್ರಾಬಲ್ಯ ಸಾಧಿಸಲಿದೆ ಅನ್ನೋ ಸಂದೇಶ ಸಾರಿದ್ದಾರೆ ದೆಹಲಿ ಸಿಎಂ.

RELATED ARTICLES

Related Articles

TRENDING ARTICLES