Wednesday, January 22, 2025

‘ಬ್ಲ್ಯಾಕ್ & ವೈಟ್’ ವಿಷ್ಯ.. ಸುಮಕ್ಕ- ಅಭಿ ರೆಬೆಲ್ ವಾರ್..!

ಬ್ಲ್ಯಾಕ್ ಅಂಡ್ ವೈಟ್ ಅಂದಾಕ್ಷಣ ಎಲ್ರಿಗೂ ನೆನಪಾಗೋದೇ ದುಡ್ಡು. ಆದ್ರೆ ನಾವೀಗ ಹೇಳೋಕೆ ಹೊರಟಿರೋ ಬ್ಲ್ಯಾಕ್ ಅಂಡ್ ವೈಟ್ ಕಹಾನಿಯೇ ಬೇರೆ. ಸುಮಲತಾ ಅಂಬರೀಶ್ ಹಾಗೂ ಅಭಿ ನಡುವೆ ಈ ವಿಚಾರಕ್ಕೆ ಜಗಳ ನಡೀತಿರುತ್ತಂತೆ. ಇಷ್ಟಕ್ಕೂ ವಾರಿಯರ್ ಆಗಲು ಹೊರಟ ಯಂಗ್ ರೆಬೆಲ್ ಸ್ಟಾರ್ ಪವರ್ ಟಿವಿಗೆ ಹೇಳಿದ್ದೇನು..? ಅಮ್ಮನೊಂದಿಗೆ ಆ ಜಗಳ ಏನು ಅಂತೀರಾ..? ಈ ಸ್ಪೆಷಲ್ ಪ್ಯಾಕೇಜ್​ನ ಒಮ್ಮೆ ನೀವೇ ಓದಿ.

  • ಪವರ್ ಟಿವಿಯಲ್ಲಿ ವಾರಿಯರ್ ಅಭಿ ಎಕ್ಸ್​ಕ್ಲೂಸಿವ್ ಟಾಕ್
  • ನೋ ಪಾಲಿಟಿಕ್ಸ್.. ಓನ್ಲಿ ಸಿನಿಮಾ – ಯಂಗ್ ರೆಬೆಲ್ ಸ್ಟಾರ್
  • 25 ದಿನ ಕಾಸ್ಟ್ಯೂಮ್​ ಡಿಸೈನ್.. ನೈಟ್ 2ರವರೆಗೂ ಟ್ರಯಲ್

ಮಂಡ್ಯಗ ಗಂಡು, ಕಲಿಯುಗದ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ಜೀವಂತವಾಗಿ ನಮ್ಮೊಂದಿಗೆ ಇಲ್ಲದೇ ಇರಬಹುದು. ಆದ್ರೆ ಅವ್ರ ಪ್ರತಿರೂಪದಂತೆ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಚಿತ್ರರಂಗದಲ್ಲಿ ತಮ್ಮದೇ ಆಗ ವರ್ಚಸ್ಸು ರೂಪಿಸಿಕೊಳ್ತಿದ್ದಾರೆ. ಯೆಸ್.. ಸದ್ಯಕ್ಕೆ ಆಗಿರೋದು ಒಂದೇ ಚಿತ್ರ ಅಮರ್. ಆದ್ರೆ ಅವ್ರು ಇಡೀ ಕರುನಾಡಿಗೆ ಚಿರಪರಿಚಿತರು. ಕಾರಣ ಅಪ್ಪನ ಸ್ಟೈಲು, ಮ್ಯಾನರಿಸಂ ಹಾಗೂ ಆಟಿಟ್ಯೂಡ್. ಆ ರೆಬೆಲ್ ಗತ್ತಿನ ವಾರಸ್ದಾರ ಈ ಅಭಿ.

ರೀಸೆಂಟ್ ಆಗಿ ಇವ್ರ ನಾಲ್ಕನೇ ಸಿನಿಮಾ #AA-04 ಲಾಂಚ್ ಆಯ್ತು. ಅದೀಗ ಟಾಕ್ ಅಫ್ ದಿ ಟೌನ್ ಆಗಿದ್ದು, ಆ ಐತಿಹಾಸಿಕ ಸಿನಿಮಾದ ಬಗ್ಗೆ ಡಿಟೈಲ್ಡ್ ಆಗಿ ಹೇಳ್ತೀವಿ. ಆದ್ರೆ ಅದಕ್ಕೂ ಮುನ್ನ ಬ್ಲ್ಯಾಕ್ ಅಂಡ್ ವೈಟ್ ವಿಚಾರ ಅಮ್ಮನೊಂದಿಗೆ ಅಭಿಯ ಜಗಳದ ವಿಚಾರ ಹೇಳಿಬಿಡ್ತೀವಿ ಕೇಳಿ. ಅರೇ ಬ್ಲ್ಯಾಕ್ ಅಂಡ್ ವೈಟ್ ಅಂದ್ರೆ ದುಡ್ಡಲ್ಲ ಕಣ್ರಪ್ಪಾ, ಅಭಿಯ ಕಾಷ್ಟ್ಯೂಮ್ ಅಷ್ಟೇ.

ಯೆಸ್.. ಅಭಿಗೆ ಬ್ಲ್ಯಾಕ್ ಧರಿಸಲು ಇಷ್ಟವಂತೆ. ಹಾಗಾಗಿಯೇ ಅವ್ರ ವಾರ್ಡ್​ರೋಬ್​ ತುಂಬಾ ಬ್ಲ್ಯಾಕ್ ಶರ್ಟ್​ಗಳೇ ತುಂಬಿ ತುಳುಕುತ್ತಿವೆಯಂತೆ. ಆದ್ರೆ ವೈಟ್ ಧರಿಸಲು ಅಮ್ಮ ಬೈತಾ ಇರ್ತಾರಂತೆ. ಅದೇ ಕಾರಣಕ್ಕೆ ವೈಟ್ ಹಾಕಿದ್ದೇನೆ, ನೋ ಪಾಲಿಟಿಕ್ಸ್, ಈಗಷ್ಟೇ ಮೂರು ಸಿನಿಮಾ ಬಗ್ಗೆ ಮಾತನಾಡಿದೆ ಅಂತಾರೆ ಜೂನಿಯರ್ ಜಲೀಲ.

ಇನ್ನು ಅಯೋಗ್ಯ ನಿರ್ದೇಶಕ ಮಹೇಶ್ ಕುಮಾರ್, ರಾಕ್​ಲೈನ್ ವೆಂಕಟೇಶ್ ಪ್ರೊಡಕ್ಷನ್​ನಲ್ಲಿ ತಯಾರಾಗಲಿರೋ ಹಿಸ್ಟಾರಿಕಲ್ ಮೂವಿ ನನ್ನ ಪಾಲಿಗೆ ನಿಜಕ್ಕೂ ಚಾಲೆಂಜ್ ಅಂತಾರೆ ಅಭಿ. ಅಷ್ಟೇ ಅಲ್ಲ, ಅದ್ರ ಕಾಸ್ಟ್ಯೂಮ್ ಡಿಸೈನ್​ಗೆ ಹೆಚ್ಚೂ ಕಡಿಮೆ ಒಂದು ತಿಂಗಳು ಹಿಡಿದಿದೆ. ಶೂಟಿಂಗ್​ಗೂ ಮುನ್ನ ಮಿಡ್ ನೈಟ್ ಎರಡೂ ಎರಡೂವರೆ ವರೆಗೂ ಟ್ರಯಲ್ ಮಾಡ್ತಿದ್ದ ಅಭಿ, ಆ ಬಗ್ಗೆ ಎಕ್ಸ್​ಕ್ಲೂಸಿವ್ ಆಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಮಾತು ಮುಂದುವರೆಸಿದ ಅಭಿ, ಸಂಬಂಧಗಳ ಮೇಲೆ ಸಿನಿಮಾ ನಿಲ್ಲಲ್ಲ. ಮೆರಿಟ್ ಮೇಲಷ್ಟೇ ಎಂದ್ರು. ಅಲ್ಲದೆ, ನನಗೆ ಕ್ವಾಂಟಿಟಿಗಿಂತ ಕ್ವಾಲಿಟಿ ಸಿನಿಮಾಗಳೇ ಇಷ್ಟ. ಇದು ಕನ್ನಡಿಗರಿಂದ ಕನ್ನಡಿಗರಿಗಾಗಿ ಕನ್ನಡ ಸಿನಿಮಾ ಅಂತ ತಮ್ಮ ಮೆಗಾ ಪ್ರಾಜೆಕ್ಟ್ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ರು.

ಭಿನ್ನ ವಿಭಿನ್ನ ಪಾತ್ರಗಳಿಗೆ ಹಾತೊರೆಯೋ ಅಭಿಷೇಕ್, ಸುಕ್ಕಾ ಸೂರಿಯ ಬ್ಯಾಡ್ ಮ್ಯಾನರ್ಸ್​ ಹಾಗೂ ಈಗ ಕಿಕ್​ಸ್ಟಾರ್ಟ್​ ಆಗಲಿರೋ ಕೃಷ್ಣ ನಿರ್ದೇಶನದ ಕಾಳಿ ಪ್ರಾಜೆಕ್ಟ್ಸ್ ಬಗ್ಗೆಯೂ ಒಂದಷ್ಟು ಮಾಹಿತಿ ಶೇರ್ ಮಾಡಿದ್ರು.

ಒಟ್ಟಾರೆ ಅಪ್ಪನ ಕಣ್ಣನ್ನ ಬಳುವಳಿಯಂತೆ ಪಡೆದಿರೋ ಯಂಗ್ ರೆಬೆಲ್ ಸ್ಟಾರ್, ಅದೇ ನನ್ನ ಸ್ಟ್ರೆಂಥ್ ಅಂತಾರೆ. ಸಿನಿಮಾ ರಂಗದಲ್ಲೇ ಬಹುದೊಡ್ಡ ಕನಸು ಕಂಡಿರೋ ಅಭಿ, ಅಪ್ಪನಂತೆ ಸೂಪರ್ ಸ್ಟಾರ್ ಆಗಿ ಮಿಂಚಲಿ, ಅಸಹಾಯಕರ ಆಶಾಕಿರಣವಾಗಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ 

RELATED ARTICLES

Related Articles

TRENDING ARTICLES