Wednesday, January 22, 2025

ಆಗಸದಲ್ಲಿ ಹಾರುತ್ತಲೇ ಇದೆ ಭಟ್ರ ಕಲರ್​ಫುಲ್ ‘ಗಾಳಿಪಟ’

ಭಟ್ರ ಲೇಖನಿಯಲ್ಲಿ ಸೊಗಸಾಗಿ  ಮೂಡಿ ಬಂದ ಪ್ರೇಮ ಕಾವ್ಯ ಗಾಳಿಪಟ 2. ಸ್ನೇಹದ ಸಲಿಗೆ, ಪ್ರೀತಿಯ ಚಳಿಗೆ ಫ್ಯಾನ್ಸ್​​ ಥಿಯೇಟರ್​ ಒಳಗೆ ಥ್ರಿಲ್​ ಆಗಿದ್ದರು. ಫಸ್ಟ್​ ಆಫ್​ ಸೋನೆ ಮಳೆಗೆ ನೆಂದು ಬೆಂದ ಪ್ರೇಕ್ಷಕರು, ಸೆಕೆಂಡ್​ ಆಫ್​​ ಹಿಮಪಾತಕ್ಕೆ ಸಿಲುಕಿ ಕಳೆದು ಹೋಗಿದ್ರು. ಇದೀಗ  ಸೋನು ಕಂಠಸಿರಿಯಲ್ಲಿ ಮ್ಯಾಜಿಕ್​ ಮಾಡಿದ ಇಂಪಾದ ಸಾಂಗ್​​ ಮೈ ಮರೆಸುತ್ತಿದೆ. ಯ್ಯೂ ಟ್ಯೂಬ್​ನಲ್ಲಿ ಸದ್ದು ಮಾಡ್ತಿರೋ ಸಾಂಗ್​ ಯಾವುದು ಗೊತ್ತಾ..? ಈ ಸ್ಟೋರಿ ಓದಿ.

  • ಮಧುರ ಕನಸಿನ ಕದ ತೆಗೆದು ಮುದ್ದಾಡಿದ ಕ್ಯೂಟ್​​ ಜೋಡಿ

ಸಂತಸ, ಸಂಕಟದ ಬಾನಿನಲ್ಲಿ ಹಾರಾಡುತ್ತ ಚಿತ್ರರಸಿಕರ ಕಣ್ಣಾಲಿಗಳನ್ನು ಒದ್ದೆ ಮಾಡಿದ ಸೂಪರ್​ ಹಿಟ್​ ಸಿನಿಮಾ ಗಾಳಿಪಟ 2. ಭಟ್ರ ಬಂಡಲ್​ ಭಡಾಯಿ ಲೇಖನಿಯಲ್ಲಿ ಕಮಾಲ್​ ಮಾಡಿದ ಗಾಳಿಪಟ 2 ಮುಗಿಲೆತ್ತರಕ್ಕೆ ಹಾರಿದೆ. ಬಾಕ್ಸ್​ ಆಫೀಸ್​ ಲೂಟಿ ಮಾಡಿ ಸಿನಿಪ್ರಿಯರಿಗೆ ಭರ್ಜರಿ ಮನರಂಜನೆ ನೀಡಿದೆ. ಗೋಲ್ಡನ್​ ಗಣಿ, ಯೋಗರಾಜ್​ ಭಟ್​ ಕಾಂಬೋಗೆ ಬಿಗ್​ ಬ್ರೇಕ್​ ಸಿಕ್ಕಿದೆ. ಹಾಡುಗಳ ಇಂಚರದಲ್ಲಿ ಸಂಚಲನ ಮೂಡಿಸಿದ್ದ ನಾ ಆಡದ ಮಾತೆಲ್ಲವ ಹಾಡು ರಿಲೀಸ್ ಆಗಿದ್ದು ಸಖತ್​ ಕ್ರೇಜ್​ ಕ್ರಿಯೇಟ್​ ಮಾಡಿದೆ.

ಜಯಂತ್​ ಕಾಯ್ಕಿಣಿಯ ಭಾವ ಲಹರಿಯ ಸಾಲುಗಳು ಗಣಿಗೆ ಹೇಳಿ ಮಾಡಿಸಿದಂತಿವೆ. ಇದಕ್ಕೆ ಸೋನು ನಿಗಮ್​​ ದನಿಯಾಗಿದ್ದು, ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ನಾ ಆಡದ ಮಾತೆಲ್ಲವ ಕದ್ದಾಲಿಸು ಆಡನ್ನು ಸಂಗೀತ ಪ್ರಿಯರು ಮತ್ತೆ ಮತ್ತೆ ಆಲಿಸುತ್ತಿದ್ದಾರೆ. ಸಂಭಾವಿತರಾದ ಗಣಿ, ವೈಭವಿ ಶಾಂಡಿಲ್ಯ ಜಂಟಿ ಅಭ್ಯಾಸ ನೋಡುಗರ ಕಣ್ಮನ ತಣಿಸುತ್ತದೆ. ಕಾಫಿನಾಡು ಚಿಕ್ಕಮಂಗಳೂರು, ಕುದುರೆಮುಖ ಸುತ್ತಾ ಮುತ್ತ ತಂಪು ತಂಗಾಳಿಯಲಿ ಮೂಡಿ ಬಂದ ಈ ಹಾಡು ಮೋಡಿ ಮಾಡ್ತಿದೆ.

  • ಭಟ್ರು- ಗಣಿ ಸದಭಿರುಚಿಗೆ ಸಿಕ್ತು ಪ್ರೇಕ್ಷಕರಿಂದ ಸಿಹಿಮುತ್ತು..!
  • 50ನೇ ದಿನದತ್ತ ಹೌಸ್​ಫುಲ್ ಪ್ರದರ್ಶನ.. 40 ಕೋಟಿ ಕಲೆಕ್ಷನ್

ಕಾಮಿಡಿ, ಎಮೋಷನ್​​​, ಪ್ರೀತಿ, ಪ್ರೇಮ, ಅಮ್ಮನ ಲಾಲಿತ್ಯದಲ್ಲಿ ಕಲರ್​​ಫುಲ್​ ಗಾಳಿಪಟ ಸದ್ದು ಮಾಡ್ತಿದೆ. ತೆರೆ ಕಂಡ ಎಲ್ಲಾ ಥಿಯೇಟರ್​​ನಲ್ಲೂ ಗಾಳಿಪಟಕ್ಕೆ ಗುಡ್​ ರೆಸ್ಪಾನ್ಸ್​ ಜತೆಗೆ ಭಟ್ರಿಗೆ ಪ್ರೇಕ್ಷಕರಿಂದ ಸಿಹಿಮುತ್ತು ಕೂಡ ಸಿಕ್ತು. ಈ ಸಿನಿಮಾದ ಎಲ್ಲಾ ಹಾಡುಗಳು ಇಂಪ್ರೆಸ್ಸಿವ್​ ಆಗಿವೆ. ಮೊದಲ ನೋಟದಲ್ಲೆ ಪ್ರೇಮಪಾಶದಲಿ ಬಿದ್ದ ಗಣಿಯ ರೊಮ್ಯಾಂಟಿಕ್ ಗೀತೆ ನಾ ಆಡದ ಮಾತೆಲ್ಲವ ಹಾಡು. ಹರಿಯೋ ನದಿಯ ಮೇಲೆ ಐರನ್​ ಬಾಕ್ಸ್​ ಇರಿಸಿ ವಿಭಿನ್ನ ರೀತಿಯಾಗಿ ಶೂಟ್​ ಮಾಡಿದ ಹಾಡಿದು.

ತೆರೆ ಮರೆಯಲಿ, ಗಣಿ ಕಣ್ಣ ಕಾಂತಿಯಲ್ಲೆ ಸಂಗಾತಿಯ ಸೆಳೆಯೋ ಪ್ರತಿ ದೃಶ್ಯಗಳು ಅದ್ಭುತವಾಗಿವೆ. ಮನದಲಿ ಮೂಡಿದ ಚಿತ್ರೋತ್ಸವದಲ್ಲಿ ಇಬ್ಬರ ಹೃದಯ ಅದಲು ಬದಲಾಗಿದೆ. ಈ ಹಾಡಿನಲ್ಲಿ ಬಳಸಲಾಗಿರುವ ಕಾಸ್ಟ್ಯೂಮ್ಸ್​, ಲೊಕೇಷನ್ಸ್​​ ಕಣ್ಣಿಗೆ ತಂಪಾದ ಫೀಲ್​ ಕೊಡುತ್ತೆ.  ನಿನ್ನ ಸೆಳೆತಕ್ಕೆ ಸಿಲುಕಿರುವ ನನಗೆ ನೀನೆ ಪ್ರಥಮ ಚಿಕಿತ್ಸೆ ಕೊಡು ಎಂಬ ಸಾಲುಗಳು ಜಯಂತ್​ ಕಾಯ್ಕಿಣಿಯ ಸಾಹಿತ್ಯದ ಹಿರಿಮೆಗೆ ಹಿಡಿದ ಕೈಗನ್ನಡಿಯಾಗಿವೆ. ಬರೋಬ್ಬರಿ 40 ಕೋಟಿಗೂ ಅಧಿಕ ಕಲೆಕ್ಷನ್​ ಗಳಿಸಿ ಭರ್ಜರಿ 50ನೇ ದಿನದತ್ತ ಯಶಸ್ವಿಯಾಗಿ ಮುನ್ನುಗ್ತಿದೆ ಗಾಳಿಪಟ.

ಯೆಸ್​​.. ಕಣ್ಣಲ್ಲೇ ಮೆಲ್ಲಗೆ ಒತ್ತಾಯಿಸುತ್ತಿರುವ ಗೋಲ್ಡನ್​ ಗಣಿ ಅವಳ ಮುಂಗೋಪದ ಪ್ರೀತಿಯ  ಬಲೆಗೆ ಸಿಲುಕಿರುವ ಪರಿ ಸೊಗಸಾಗಿದೆ. ಸಂತೋಷ್​ ರೈ ಪತಾಜೆ ಕ್ಯಾಮೆರಾ ಕೈ ಚಳಕದಲ್ಲಿ ಪ್ರತಿ ಫ್ರೇಮುಗಳು ತಂಗಾಳಿ ಕಣ್ಣಿಗೆ ರಾಚಿದಂತಿದೆ. ರಮೇಶ್​ ರೆಡ್ಡಿ ನಿರ್ಮಾಣದಲ್ಲಿ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯುತ್ತಿರುವ ಗಾಳಿಪಟ ಗೆಲುವಿನ ನಾಗಲೋಟದಲ್ಲಿ ಮುನ್ನುಗ್ತಿದೆ. ಗಣಿ, ಪವನ್​, ದಿಗ್ಗಿ ಕಾಂಬೋಗೆ ಫುಲ್​ ಮಾರ್ಕ್ಸ್​ ಸಿಕ್ಕಿದೆ. ಸಿನಿಮಾ ನೋಡಿ ಮೆಚ್ಚಿಕೊಂಡಿದ್ದ ನಾ ಆಡದ ಮಾತೆಲ್ಲವ ಹಾಡನ್ನು ಮನೆಯಲ್ಲಿ ಕೂತು ಎಂಜಾಯ್​ ಮಾಡೋ ಚಾನ್ಸ್​​ ಸಿಕ್ಕಿದೆ. ಎನಿವೇ, ಗಾಳಿಪಟ 3 ಬಗ್ಗೆ ಪ್ಲಾನ್​ ಮಾಡ್ತಿರೋ ಯೋಗರಾಜ್​​ ಭಟ್​​ ಸದ್ಯದಲ್ಲಿ ಗುಡ್​ ನ್ಯೂಸ್​ ಕೊಡ್ತಾರಾ ಕಾದು ನೋಡ್ಬೇಕಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೊ, ಪವರ್ ಟಿವಿ

RELATED ARTICLES

Related Articles

TRENDING ARTICLES