Wednesday, January 22, 2025

ಶ್ರೀಗಳು ಕಾನೂನು ಸಲಹೆ’ಗೆ ತೆರಳಿದ್ದರು, ಎಲ್ಲಿಯೂ ಹೋಗಿಲ್ಲ; ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ: ಮುರುಘಾ ಮಠದ ಶ್ರೀಗಳ ಬಗ್ಗೆ ವಿಶೇಷವಾಗಿ ತನಿಖೆ ನಡೆಯುತ್ತಿದೆ. ಈ ಬಗ್ಗೆ ದೂರು ಪ್ರತಿದೂರು ದಾಖಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ಬಗ್ಗೆ ಈ ಹಂತದಲ್ಲಿ ನಾನು ಮಾತನಾಡೋದು ಸರಿಯಲ್ಲ. ಪೊಲೀಸರು ಕಾನೂನು ತನಿಖೆ ಮಾಡ್ತಿದ್ದಾರೆ. ಶ್ರೀಗಳ ಬಂಧನ ಇದುವರೆಗೂ ಆಗಿಲ್ಲ. ಯಾವುದೇ ವಿಳಂಬವಾಗ್ತಿಲ್ಲ. ಅನಗತ್ಯ ವಿಳಂಬಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಈ ಕೇಸ್​ನಲ್ಲಿ ನಿಯಮದ ಪ್ರಕಾರ ಪೊಲೀಸರು ಕೆಲಸ ಮಾಡ್ತಾರೆ. ಮುಕ್ತವಾಗಿ ತನಿಖೆ ಆಗುತ್ತದೆ. ಯಾರ ಕೈವಾಡವು ಇಲ್ಲ. ಶ್ರೀಗಳು ಯಾರದೋ ಕಾನೊನು ಸಲಹೆ ಪಡೆಯಲು ತೆರಳಿದ್ದರು. ಎಲ್ಲಿಯೂ ಸ್ವಾಮೀಜಿ ಹೋಗಿಲ್ಲ. ಈಗಾಗಲೇ ಅವರೇ ಸುದ್ದಿಗೋಷ್ಠಿ ಮಾಡಿದ್ದಾರೆ. ಇದು ಬಹಳ ಸೂಕ್ಷ್ಮವಾದ ವಿಚಾರ. ಈ ಬಗ್ಗೆ ಇನ್ನೇನು ಹೆಚ್ಚಿಗೆ ಹೇಳುವುದಿಲ್ಲ. ಕಾನೂನು ಪ್ರಕಾರ ಏನು ಆಗಬೇಕೋ ಅದು ಆಗುತ್ತದೆ ಎಂದು ಗೃಹಸಚಿವರು ತಿಳಿಸಿದರು.

RELATED ARTICLES

Related Articles

TRENDING ARTICLES