ಅಪ್ಪು ನಮ್ಮಿಂದ ದೂರಾಗಿದ್ದರೂ ಇಂದಿಗೂ ಉಸಿರಲ್ಲಿ ಉಸಿರಾಗಿ ಬೆರೆತು ಹೋಗಿದ್ದಾರೆ. ಅವ್ರ ಸಾಧನೆ, ಸೇವೆಗೆ ಇಡೀ ವಿಶ್ವವೇ ಗುಣಗಾನ ಮಾಡಿದೆ. ಆಕಾಶದಲ್ಲಿ ಮಿನುಗು ತಾರೆಯಾಗಿ ಹೊಳೆಯುತ್ತಿರುವ ಅಪ್ಪು ನೆನಪು ಶಾಶ್ವತ. ಇದೀಗ ಎಲ್ಲರೂ ಅಪ್ಪುನಾ ಆಕಾಶದಲ್ಲೂ ಕಾಣಬಹುದು. ಇಡೀ ಭೂಮಂಡಲವನ್ನು ಬೆಟ್ಟದ ಹೂವು ಸುತ್ತಲಿದ್ದಾರೆ. ಯೆಸ್.. ಅಪ್ಪು ಅಭಿಮಾನಿಗಳಿಗೊಂದು ಸರ್ಪ್ರೈಸಿಂಗ್ ಗುಡ್ ನ್ಯೂಸ್ ಕಾದಿದೆ. ಏನ್ ಗೊತ್ತಾ..? ನೀವೇ ಓದಿ.
ಶ್ರೀಹರಿಕೋಟಾದಿಂದ ‘ಪುನೀತ್’ ಉಪಗ್ರಹ ಉಡಾವಣೆ..!
ಎಂದಿಗೂ ಮಾಸದ ಸಿಹಿ ನೆನಪು ಅಪ್ಪು. ಬೆಟ್ಟದ ಹೂವು, ಕೋಟಿ ಕೋಟಿ ಅಭಿಮಾನಿಗಳ ಹೃದಯ ಸಿಂಹಾಸನದ ಒಡೆಯ ಪುನೀತ್ ರಾಜ್‌ಕುಮಾರ್. ಪ್ರತಿ ಹಳ್ಳಿ ಹಳ್ಳಿಯಲ್ಲೂ ಅವರ ಭಾವಚಿತ್ರಗಳು ತಲೆ ಎತ್ತಿ ನಿಂತಿವೆ. ರಸ್ತೆಗಳಿಗೆ, ಪಾರ್ಕ್ಗಳಿಗೆ ಅಪ್ಪು ಹೆಸರು ಇಡಲಾಗಿದೆ. ಪ್ರತಿಮೆಗಳಿಗೆ ದೇವರ ಸ್ಥಾನ ಕೊಟ್ಟು ಪೂಜೆ ಸಲ್ಲಿಸಲಾಗುತ್ತಿದೆ. ಅಕ್ಷರಶಃ ದೇವರಾಗಿರುವ ಪುನೀತ್ ರಾಜ್‌ಕುಮಾರ್ ಇನ್ನು ಮುಂದೆ ಆಕಾಶದಲ್ಲಿ ಮಿನುಗಲಿದ್ದಾರೆ.
ಶಾಲಾ ಪಠ್ಯದಲ್ಲೂ ಅಪ್ಪು ಜೀವನದ ಕುರಿತಾಗಿ ತಿಳಿಸಬೇಕು ಎಂಬ ಒತ್ತಾಯ ಕೂಡ ಕೇಳಿ ಬರುತ್ತಿದೆ. ಇದೀಗ ಶಾಲಾ ವಿದ್ಯಾರ್ಥಿಗಳು ಪುನೀತ್ ಹೆಸರಿನ ಉಪಗ್ರಹ ಉಡಾವಣೆ ಮಾಡ್ತಿದ್ದಾರೆ. ಗಗನದೆತ್ತರಕ್ಕೆ ಬೆಳೆದ ಅಪ್ಪು ಗಗನದಲ್ಲಿ ಮಿನುಗುತ್ತಿದ್ದಾರೆ. ಸರ್ಕಾರಿ ಶಾಲಾ ಮಕ್ಕಳು ಈ ಮಹಾತ್ಕಾರ್ಯಕ್ಕೆ ಕೈ ಹಾಕಿದ್ದು ಉಪಗ್ರಹಕ್ಕೆ ಪುನೀತ್ ಎಂಬ ಹೆಸರನ್ನು ಇಟ್ಟಿದ್ದಾರೆ. ನವೆಂಬರ್ 15 ರಿಂದ ಡಿ.31 ರ ನಡುವೆ ಶ್ರೀ ಹರಿಕೋಟಾ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಗುತ್ತದೆ.
ಭಾರತ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆ ಈ ಉಪಗ್ರಹವನ್ನು ಉಡಾವಣೆ ಮಾಡಲಾಗ್ತಿದೆ. ಮಲ್ಲೇಶ್ವರಂ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಈ ಉಪಗ್ರಹದ ತಯಾರಿಯಲ್ಲಿ ಸಜ್ಜಾಗಿದ್ದಾರೆ. ಇದು ಸರ್ಕಾರಿ ಶಾಲಾ ವಿದ್ಯಾರ್ಥಿಗಳು ತಯಾರಿಸುತ್ತಿರುವ ಮೊದಲ ಉಪಗ್ರಹವಾಗಿದೆ. ಇದಕ್ಕೆ ಪುನೀತ್ ರಾಜ್‌ಕುಮಾರ್ ಅವರ ಹೆಸರಿಡಲಾಗಿದೆ. ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಈ ಉಪಗ್ರಹ 1.90 ಕೋಟಿ ವೆಚ್ಚದಲ್ಲಿ ತಯಾರಾಗ್ತಿದ್ದು, ಒಂದುವರೆ ಕೆಜಿ ತೂಕ ಇರಲಿದೆಯಂತೆ. ಅಪ್ಪು ಎಲ್ಲರಿಗೂ ಅಚ್ಚುಮೆಚ್ಚು. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವ್ರಿಗೆ ಫೇವರಿಟ್ ಆಗಿರೋ ಅಪ್ಪು ಜೀವನ ಎಲ್ಲರಿಗೂ ಮಾದರಿ. ಹಾಗಾಗಿಯೇ ಅಪ್ಪು ಹೆಸರಿನ ಉಪಗ್ರಹ ವರ್ಷಾಂತ್ಯಕ್ಕೆ ಆಕಾಶಕ್ಕೆ ಚಿಮ್ಮಲಿದೆ. ಈ ಮೂಲಕ ಪುನೀತ್ ಹೆಸರನ್ನು ಮತ್ತೊಮ್ಮೆ ಚಿರಸ್ಥಾಯಿಯಾಗಿಸುವ ಪ್ರಯತ್ನ ನಡೀತಿದೆ. ಅಪ್ಪು ಆಲ್ವೇಸ್ ಗ್ರೇಟ್.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ ಪವರ್ ಟಿವಿ