Monday, December 23, 2024

ಲೈಂಗಿಕ ಆರೋಪ ಬಗ್ಗೆ ಮೌನ ಮುರಿದ ಮುರುಘಾ ಮಠದ ಶರಣರು

ಚಿತ್ರದುರ್ಗ: ಮುರುಘಾ ಮಠದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ತಮ್ಮ ಮೇಲೆ ಲೈಂಗಿಕ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಇಂದು ಭಕ್ತರ ಸಮ್ಮುಖದಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಶಿವಮೂರ್ತಿ ಮುರುಘಾ ಶರಣರ ಆಡಿಯೋ ವೈರಲ್ ಆಗಿದೆ.

ಗಾಳಿಪಟಕ್ಕೆ ಕೆಳಗೆ ಇದ್ದಾಗ ಗಾಳಿ ಹೊಡೆದ ಗೊತ್ತಾಗಲ್ಲ. ಎತ್ತರಕ್ಕೆ ಹೋದಂತೆ ಗಾಳಿ ಹೊಡೆತ ಬಹಳ. ಸಣ್ಣವರಿಗೆ ಸಣ್ಣ ಕುತ್ತು ಬರುತ್ತವೆ, ದೊಡ್ಡವರಿಗೆ ದೊಡ್ಡ ಕುತ್ತು ಬರುತ್ತವೆ. ಕುತ್ತುಗಳು ಅಂದರೆ ಆಪತ್ತುಗಳು, ಕಿರುಕುಳಗಳು. ಯಾವ ಸತ್ಪುರುಷರು, ಸಮಾಜ ಸುಧಾರಕರ ಕಾಲದಲ್ಲಿಯೂ ಈ ರೀತಿಯಲ್ಲಿ ದುಷ್ಟ ಶಕ್ತಿಗಳಿದ್ದವು. ಸಾತ್ವಿಕರು ಸಕಾರಾತ್ಮಕ ದೋರಣೆ ಹೊಂದಿರುತ್ತಾರೆ, ಅದಕ್ಕೆ ನಕಾರಾತ್ಮಕ ದೋರಣೆಗಳು. ಕ್ರೈಸ್ತ ಧರ್ಮದ ಯೇಸುವಿನ ಶಿಲುಬೆಗೆ ಏರಿಸಿದ್ದು ಅದೇ ಧರ್ಮದವರು. ಬುದ್ದನಿಗೆ ಹಂದಿಯ ಮಾಂಸದ ರಸ ಉಣಿಸಿದ್ದು ಅವರೇ. ಸಾಕ್ರಟೀಸ್ ಬದುಕಿನಲ್ಲಿ ಕೂಡಾ ನಿಕಟ ಶಿಷ್ಯ ಇದ್ದ ಪ್ಲೇಟೋ. ಅಂಥ ಶಿಷ್ಯ ನನಗೆ ಸಿಗಲಿಲ್ಲ ಎಂದು ಶರಣರು ಬೇಸರ ವ್ಯಕ್ತಪಡಿಸಿದರು.

ನಾನು ಜೀವಗಳ್ಳನಾಗಿ ರಾಜೀ ಮಾಡಿಕೊಂಡರೆ ಅತ್ಯಂತ ಕಳಂಕ ಪ್ರಾಯವಾಗುತ್ತದೆ. ಈ ನಿಸರ್ಗ ಬ್ರಹ್ಮಾಂಡ ಈ ವ್ಯವಸ್ಥೆ ಮಾಡಿದೆ. ಸಾಕ್ರಟೀಸ್ ಬದುಕಿನ ಕೊನೆಯ ಕ್ಷಣಗಳನ್ನ ನೆನೆದ ಮುರುಘಾ ಶರಣರು. ಕೊನೆ ಗಳಿಗೆಯಲ್ಲಿ ಸಾಕ್ರಟೀಸ್ ವಿಷ ಕುಡಿದ ಪ್ರಸಂಗ ಮೆಲುಕು ಹಾಕಿದ ಶರಣರು. ಜಗತ್ತಿನಲ್ಲಿ ಧರ್ಮಾಂಧರು, ಕಳ್ಳರು ಈ ರೀತಿ ಸನ್ನಿವೇಶ ಎದುರಿಸಿಲ್ಲ. ತಾತ್ವಿಕ ತಳಹದಿಯ ಮೇಲೆ ನಡೆಯುತ್ತಾರೆ ಅವರಿಗೆ ಕುತ್ತು ಇರುತ್ತದೆ. ಗಾಂಧಿ, ಬಸವಣ್ಣ, ಅವರಿಗೂ ಕೂಡಾ ನೋವಿನ ದಿನಗಳು ಇದ್ದವು. ಅಂಥ ದೊಡ್ಡ ಮಹಾನೀಯರ ಜೀವನದಲ್ಲಿ ದುರಂತ ನಡೆದಿವೆ. ಆ ದಿಸೆಯಲ್ಲಿ ನಾವು ಕೂಡಾ ಹೊರತಲ್ಲ. ಸಜಾತಿಯವರಿಂದ ಹಾಳಾಗಿದ್ದ ಇತಿಹಾಸದ ಘಟನೆ ಶರಣರು ನೆನೆದರು.

ಮುಂಜಾನೆಯ ಸುದ್ದಿ ಕೇಳಿ ನೀವೆಲ್ಲಾ ಇಲ್ಲಿ ಬಂದಿದ್ದೀರಾ. ನಮಗಿಂತ ನಿಮಗೆ ತುಂಬಾ ನೋವಾಗಿದೆ. ಸರ್ವಜಾತಿ, ದರ್ಮದವರು ಕೂಡಾ ಇಲ್ಲಿದ್ದೀರಾ. ಮುರುಘಾ ಶರಣರ ಬದುಕಿನ ಕಿರುಕುಳ ಇದು. ನಮ್ಮಂತವರ ಜೊತೆಯೇ ಜಗಳ ಮಾಡಬೇಕು, ಬೇರೆಯವರ ಜೊತೆ ಜಗಳದಲ್ಲಿ ಏನೂ ಸಿಗಲ್ಲ. ಮಠದಲ್ಲಿ ನಡೆಯುತ್ತಿರುವುದು ಅಧಿಕಾರಕ್ಕಾಗಿ ಸಂಘರ್ಷ ನಡೆಯುತ್ತಿದೆ. ಮುರುಘಾ ಮಠ ಜನ ಬಂದು ನೋಡುವಂತೆ ನಾವು ಮಾಡಿದ್ದೇವೆ. 21 ನೇ ಶತಮಾನ ಅಂದರೆ ಈ ಕರಾಳ ಘಟನೆ. ಬ್ಲಾಕ್ ಮೇಲ್ ತಂತ್ರದ ಮೂಲಕ ಅಧಿಕಾರ ಬೇಕು ಎಂಬ ದೋರಣೆ ಇದು ಎಂದರು.

ಅಂತೆಯೇ ಮಾತನಾಡಿದ ಶ್ರೀಗಳು ನಾವು ಸಂಧಾನಕ್ಕೂ ಸಿದ್ದ, ಸಮರಕ್ಕೂ ನಾವು ಸಿದ್ದ. ಕೆಲವರು ಸಂಧಾನ ಮಾಡುತ್ತಿದ್ದಾರೆ, ಅದು ಫೇಲ್ ಆದರೆ ಸಮರ, ಕೆಲವು ಸ್ವಾಮೀಜಿಗಳ ಜೀವನದ ಇಂಥ ಘಟನೆ ನಡೆದಾಗ ಕೋರ್ಟ್ ಶುಲ್ಕ ನಾನು ಕೊಟ್ಟಿದ್ದೇನೆ. ನಮ್ಮ ವಿರುದ್ದ ಇದೊಂದು ಪಿತೂರಿ, ಒಳ ಸಂಚು ಮಾಡಿದ್ದಾರೆ. ಯಾವ ಸಮಸ್ಯೆ ಕೂಡಾ ಶಾಶ್ವತ ಅಲ್ಲ, ಎಲ್ಲವೂ ತಾತ್ಕಾಲಿಕ. ಮುರುಘಾ ಮಠದ ಮೇಲಿನ ಅಭಿಮಾನ ಬಡಿದ್ದೇಬ್ಬಿಸಲು ನಡೆದಿರುವ ಘಟನೆ ಇದು ಎಂದು ಆಡಿಯೋದಲ್ಲಿ ತಿಳಿಸಿದ್ದಾರೆ.

ಜನ ರಾಜ್ಯಾದ್ಯಂತ ಮಠಕ್ಕೆ ಆಗಮಿಸುತ್ತಿದ್ದಾರೆ. ಇದು ಗರಿಷ್ಠ ಮಟ್ಟದ ಕಿರುಕುಳ ಮತ್ತು ಪಿತೂರಿ. ಎಲ್ಲವನ್ನೂ ಕೂಡಾ ಕಾಲವೇ ನಿರ್ಣಯ ಮಾಡುತ್ತದೆ. ಸಾಧ್ಯವಾದರೆ ಸಮಸ್ಯೆ ಬಗೆಹರಿಸೋಣ, ಇಲ್ಲ ಹೋರಾಟ ಮಾಡೋಣಾ. ಎರಡು ವಿಚಾರಕ್ಕೂ ನಾವು ಸಿದ್ದ ಮತ್ತು ಬದ್ದ. ಯಾರು ಕೂಡಾ ದುಃಖ ಮಾಡಿಕೊಳ್ಳಬೇಡಿ, ನೀವೆಲ್ಲಾ ನಮ್ಮ ಜೊತೆಗೆ ಇರುವುದು ದೊಡ್ಡ ದೈರ್ಯ ಎಂದು ಶರಣರು ಹೇಳಿದರು.

RELATED ARTICLES

Related Articles

TRENDING ARTICLES