Friday, March 29, 2024

ಗುಮ್ಮಟನಗರಿಯಲ್ಲಿ ತಾರಕಕ್ಕೇರಿದ ಗಣೇಶನ ಗಲಾಟೆ

ವಿಜಯಪುರ :  ನಗರದ ಐತಿಹಾಸಿಕ ತಾಜ್ ಬಾವಡಿಯಲ್ಲಿ ಗಣೇಶ ವಿಸರ್ಜನೆಗೆ ಅವಕಾಶ ನೀಡುವಂತೆ ಹಿಂದೂಪರ ಸಂಘಟನೆಗಳಿಂದ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಅವರ ಎಪಿ ಗ್ರೂಪ್ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ‌. ಕಳೆದ 6 ವರ್ಷಗಳಿಂದ ತಾಜ್ ಬಾವಡಿಯಲ್ಲಿ ಗಣೇಶ ವಿಸರ್ಜನೆಯನ್ನು ಜಿಲ್ಲಾಡಳಿತ ಬಂದ್ ಮಾಡಿದೆ. ಆದರೆ, ಈ ನೀರು ಬಳಕೆ ಮಾಡದೆ ಇರುವ ಕಾರಣ ಇದರಲ್ಲಿ ಗಣೇಶನ ಮೂರ್ತಿ ವಿಸರ್ಜನೆಗೆ ಅವಕಾಶ ಕೊಡಬೇಕು ಎಂಬುದು ಮಾಜಿ ಸಚಿವ ಅಪ್ಪಾ ಸಾಹೇಬ್ ಪಟ್ಟಣ ಶೆಟ್ಟಿ ಹಾಗೂ ಗಜಾನನ ಮಹಾಮಂಡಳಿಯವರ ವಾದ. ತಾಜ್ ಬಾವಡಿ ಪಕ್ಕದಲ್ಲೆ ನಿರ್ಮಾಣ ಮಾಡಲಾಗುತ್ತಿರುವ ತಾತ್ಕಾಲಿಕ ಹೊಂಡದಲ್ಲೇ ಗಣೇಶ ವಿಸರ್ಜನೆ ಮಾಡಲಾಗುತ್ತಿದೆ. ಆದರೆ, ತಾತ್ಕಾಲಿಕ ಗಣೇಶ ಹೊಂಡದಿಂದ ಮೂರ್ತಿ ತೆಗೆಯುವಾಗ ಮೂರ್ತಿಗೆ ಧಕ್ಕೆಯಾದರೆ ಹಿಂದೂಗಳ ಭಾವನೆಗೆ ನೋವಾಗುತ್ತೆ ಅನ್ನೋದು ಮಾಜಿ ಸಚಿವ ಪಟ್ಟಣ ಶೆಟ್ಟಿ ಅವರವಾದ.

ಇನ್ನೂ ಇದೇ ವಿಚಾರವಾಗಿ ವಿಜಯಪುರ ನಗರದ ಸಿದ್ದೇಶ್ವರ ದೇವಾಲಯದ ಬಳಿ ಶಾಸಕ ಬಸನಗೌಡ ‌ಪಾಟೀಲ್ ಯತ್ನಾಳ ಅವರ ನೇತೃತ್ವದಲ್ಲಿ ಗಜಾನನ ಮಹಾಮಂಡಳಿ ಯವರ ಸಭೆ ನಡೆಯಿತು. ಬಳಿಕ ಮಾತನಾಡಿದ ಅವರು, ಆ ನೀರನ್ನು ಕಲುಷಿತ ಮಾಡಲು ನಾನು ಬಿಡಲ್ಲ, ಈಗಾಗಲೇ ಕೋಟ್ಯಾಂತರ ಹಣ ಖರ್ಚು ಮಾಡಿ ಭಾವಿಯನ್ನು ಸ್ವಚ್ಚಗೊಳಿಸಲಾಗಿದೆ. ಯಾವುದೇ ‌ಕಾರಣಕ್ಕೂ ಅದು ಹಾಳಾಗಲು ನಾನು ಬಿಡಲ್ಲ ‌ಎಂದರು.

ಇನ್ನೇನು ವಿಧಾನಸಭಾ ಚುನಾವಣೆ ಸಮೀಪವಾಗುತ್ತಲೇ ಹಾಲಿ ಹಾಗೂ ಮಾಜಿ ಶಾಸಕರ ಮದ್ಯೆ ಗಣೇಶೋತ್ಸವದ ವಿಚಾರವಾಗಿ ವಾಕ್ ಸಮರ ಆರಂಭವಾಗಿದೆ.

RELATED ARTICLES

Related Articles

TRENDING ARTICLES