ನಟ ರಾಕ್ಷಸ. ನಟ ಭಯಂಕರ. ಹೀಗೆ ಡಾಲಿ ಧನಂಜಯ ನಟನೆಗೆ ಸಿಕ್ಕ ಬಿರುದುಗಳು ಒಂದೇ ಎರಡೇ. ಟಗರು ಡಾಲಿಗೆ ಇಂದು ಬರ್ತ್ ಡೇ ಸಂಭ್ರಮ. ಅಭಿಮಾನಿಗಳ ಒಡೆಯನಿಗೆ ಕರ್ನಾಟಕದ ಮೂಲೆ ಮೂಲೆಯಿಂದ ಶುಭಾಶಯಗಳ ಸುರಿಮಳೆಯಾಗ್ತಿದೆ. ಆದ್ರೆ, ಸಾಲು ಸಾಲು ಸಿನಿಮಾಗಳ ಸರದಾರ ಡಾಲಿ ಮಾತ್ರ ಬರ್ತ್ಡೇ ಸಂಭ್ರಮಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಫ್ಯಾನ್ಸ್ಗೆ ಡಾಲಿ ಮಾಡಿದ ಮನವಿ ಏನು ಗೊತ್ತಾ..? ಈ ಸ್ಟೋರಿ ಓದಿ.
- ಡಾಲಿಗೂ ಬಿಡದೆ ಕಾಡಿದ ಅಪ್ಪು ಅಗಲಿಕೆಯ ನೋವು
ಸೋಲಿನ ಕಹಿ ರುಚಿಗಳ ನಡುವೆಯೇ ಎದ್ದು ಬಂದ ಧೀರ ಡಾಲಿ ಧನಂಜಯ. ಹಿಂದೆ ಆಡಿಕೊಳ್ಳುವವರ ಮುಂದೆ ಎದ್ದು ನಿಂತ ಸುಲ್ತಾನ. ಅಭಿಮಾನಿಗಳ ನೆಚ್ಚಿನ ಡಾಲಿ, ನಟ ಭಯಂಕರ ಧನಂಜಯ ಅವ್ರಿಗೆ 36ರ ಬರ್ತ್ ಡೇ ಸಂಭ್ರಮ. ಇಡೀ ಕರುನಾಡು, ಡಾಲಿ ಬರ್ತ್ಡೇಗೆ ಮನಸಾರೆ ವಿಶ್ ಮಾಡ್ತಿದ್ದಾರೆ. ಬಾಯ್ತುಂಬ ಶುಭ ಹಾರೈಸ್ತಿದ್ದಾರೆ. ಹತ್ತಾರು ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿರೋ ಸ್ಟಾರ್ ನಟ ಧನಂಜಯ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹರಸುತ್ತಿದ್ದಾರೆ.
ಮೆಚ್ಚಿನ ನಟನ ಬರ್ತ್ಡೇನಾ ಅದ್ಧೂರಿಯಾಗಿ ಆಚರಿಸ್ಬೇಕು ಅಂತಾ ಕನವರಿಸುತಿದ್ದ ಫ್ಯಾನ್ಸ್ಗೆ ಬೇಸರವಾಗಿದೆ. ಟಗರು ಡಾಲಿ ಶಿವಣ್ಣನ ಹಾದಿ ಹಿಡಿದಿದ್ದಾರೆ. ಅಪ್ಪು ಅಗಲಿಕೆಯ ನೋವಿನ ಕರಾಳ ಛಾಯೆಯಲ್ಲಿ ಸ್ಯಾಂಡಲ್ವುಡ್ ಮುಳುಗಿದೆ. ಆ ನೋವನ್ನು ಡಾಲಿಗೆ ಇಂದಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ದೊಡ್ಮನೆ ಕುಟುಂಬದ ಮೇಲೆ ಅಪಾರ ಪ್ರೀತಿ, ಅಭಿಮಾನ ಹೊಂದಿರುವ ಡಾಲಿ ತಮ್ಮ ಬರ್ತ್ಡೇ ಆಚರಣೆಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
- ಶಾಲು, ಹಾರ, ಕೇಕ್ ಬೇಡ.. ಡಾಲಿ ಹೇಳಿದ್ದೇನು..?
- ಭೂಗತ ಪಾತಕಿ ಜಯರಾಜ್ ಗೆಟಪ್ನಲ್ಲಿ ಹೆಡ್ಬುಷ್
ಜಯನಗರ 4th ಬ್ಲಾಕ್ ಶಾರ್ಟ್ ಮೂವಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಡಾಲಿ ಡೈರೆಕ್ಟರ್ ಸ್ಪೆಷಲ್ ಸಿನಿಮಾದಲ್ಲಿ ತಮ್ಮ ನಟನಾ ಕೌಶಲ್ಯವನ್ನು ನಿರೂಪಿಸಿದ್ರು. ಟಗರು ಸಿನಿಮಾದ ನೆಗಟಿವ್ ರೋಲ್ ಡಾಲಿ ಕೊಟ್ಟ ಸಕ್ಸಸ್, ಮತ್ತೆ ಅವರನ್ನು ತಿರುಗಿ ನೋಡುವಂತೆ ಮಾಡಲೇ ಇಲ್ಲ. ಮಾನ್ಸೂನ್ ರಾಗ, ಹೆಡ್ಬುಷ್, ಜಮಾಲಿಗುಡ್ಡ, ಹೊಯ್ಸಳ, ಹೀಗೆ ಹತ್ತಾರು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಇರೋ ಟಾಪ್ ಮೋಸ್ಟ್ ನಟರಲ್ಲಿ ಒಬ್ಬರಾಗಿದ್ದಾರೆ. ಗ್ಲೋಬಲ್ ಐಕಾನ್ ಅಲ್ಲು ಜತೆಗೂ ಸ್ಕ್ರೀನ್ ಶೇರ್ ಮಾಡಿರೋ ಖ್ಯಾತಿ ಡಾಲಿಗಿದೆ.
ನಟ ರಾಕ್ಷಸನ ಬರ್ತ್ಡೇನಾ ಕಖೆದ ಬಾರಿಯೂ ಆಚರಿಸಲು ಸಾಧ್ಯವಾಗಿರಲಿಲ್ಲ. ಆದ್ರೆ, ಡಾಲಿ ಈ ಬಾರಿಯೂ ಆಚರಿಸೋದು ಬೇಡ. ನೀವು ಪ್ರೀತಿಯಿಂದ ತರೋ ಕೇಕ್, ಹಾರ, ಶಾಲನ್ನು ನಿಮ್ಮ ಹತ್ತಿರದಲ್ಲೆ ಕಷ್ಟದಲ್ಲಿರೋರಿಗೆ ಸಹಾಯ ಮಾಡುವ ಮೂಲಕ ಆಚರಿಸಿ. ಮುಂದಿನ ಬಾರಿ ಒಳ್ಳೆಯ ಕೆಲಸಗಳ ಮೂಲಕ ಸೆಲೆಬ್ರೇಟ್ ಮಾಡೋಣ ಎಂದಿದ್ದಾರೆ.
ಇದ್ರ ಜತೆಯಲ್ಲಿ ಭೂಗತ ಪಾತಕಿ ಡಾನ್ ಜಯರಾಜ್ ರೋಲ್ನಲ್ಲಿ ಡಾಲಿ ನಟಿಸ್ತಿದ್ದಾರೆ. ಕರಾಳ ಜಗತ್ತಿನ ರಿಯಲ್ ಸ್ಟೋರಿಯನ್ನು ತೆರೆ ಮೇಲೆ ತರೋ ಪ್ರಯತ್ನ ಮಾಡಲಾಗ್ತಿದೆ. ಇದೀಗ ಹೆಡ್ಬುಷ್ ಸಿನಿಮಾದ ರೌಡಿಗಳು ಲಿರಿಕಲ್ ಸಾಂಗ್ ರಿಲೀಸ್ ಆಗಿದ್ದು, ಸಖತ್ ಹೈಪ್ ಕ್ರಿಯೇಟ್ ಮಾಡ್ತಿದೆ.
ಅಗ್ನಿ ಶ್ರೀಧರ್ ಚಿತ್ರಕಥೆಗೆ ಶೂನ್ಯ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ರಾಮ್ಕೋ ಸೋಮಣ್ಣ ಬ್ಯಾನರ್ ಅಡಿಯಲ್ಲಿ ಡಾಲಿ ಧನಂಜಯ ಸ್ವತಃ ನಿರ್ಮಾಣ ಮಾಡ್ತಿದ್ದು, ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ದೀಪಾವಳಿಗೆ ಕ್ರೂರ ಪಾತಕಿಗಳ ದರ್ಶನವಾಗಲಿದೆ. ರೌಡಿಗಳು ಲಿರಿಕಲ್ ಸಾಂಗ್ಗೆ ಅಗ್ನಿ ಶ್ರೀಧರ್ ಸಾಹಿತ್ಯವಿದ್ದು, ಸಂಚಿತ್ ಹೆಗಡೆ ಮಧುರ ಕಂಠವಿದೆ. ಅಕ್ಟೋಬರ್ 21 ಕ್ಕೆ ತೆರೆಗೆ ಬರಲಿರೋ ಹೆಡ್ಬುಷ್ ಕಮಾಲ್ ಮಾಡೋ ಸಿಗ್ನಲ್ ಕೊಟ್ಟಿದೆ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ